ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ಆಯೋಜಿಸಿದ ಹಿನ್ನೆಲೆಯಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಜಿಲ್ಲಾಧಿಕಾರಿ ಕುಮಾರ ಅವರಿಗೆ ಅಭಿನಂದನೆ ಸಲ್ಲಿಸಿ ಪತ್ರವನ್ನು ಬರೆದಿದ್ದಾರೆ.

ಪ್ರಶಂಸನಾ ಪತ್ರದಲ್ಲಿ ಜಿಲ್ಲಾಧಿಕಾರಿಯೊಬ್ಬರು ಸಾಹಿತ್ಯ ಸಮ್ಮೇಳನ ವ್ಯವಸ್ಥೆಯಲ್ಲಿ ಶ್ರಮವಹಿಸಿದ್ದುದನ್ನು ಕಂಡದ್ದು ಇದೇ ಮೊದಲು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಬಗೆಗೆ ಜಿಲ್ಲಾಧಿಕಾರಿಗೆ ಇರುವ ಶ್ರದ್ಧಾಸಕ್ತಿ ನಿಜಕ್ಕೂ ಅಭಿನಂದನೀಯ ಎಂದು ಪತ್ರದಲ್ಲಿ ಬರೆದಿದ್ದಾರೆ.

ನಾನು ಸಮ್ಮೇಳನದ ಸಲುವಾಗಿ ಮಂಡ್ಯದಲ್ಲಿದ್ದ ನಾಲ್ಕು ದಿನಗಳೂ ತಾವು ನನ್ನ ಬಗೆಗೆ ತೋರಿದ ವಿಶ್ವಾಸಾದರಗಳನ್ನು ನಾನು ಮರೆಯಲಾರೆ. ತಾವು ನೀಡಿದ ಸತ್ಕಾರಕ್ಕೆ ನಾನು ಕೃತಜ್ಞನಾಗಿದ್ದೇನೆ. ಈ ಸಮ್ಮೇಳನ ಸಾಹಿತ್ಯಾಸಕ್ತರ ಪಾಲುದಾರಿಕೆಯಲ್ಲಿ ಒಂದು ದಾಖಲೆಯನ್ನೇ ಸ್ಥಾಪಿಸಿತು ಎಂದು ಹೇಳಲು ನನಗೆ ಹರ್ಷವೆನಿಸುತ್ತದೆ. ಸಾಮಾನ್ಯವಾಗಿ ಸರ್ಕಾರಿ ಅಧಿಕಾರಿಗಳಿಗೆ ಸಾಹಿತ್ಯ ಸಂಬಂಧವಿರುವುದಿಲ್ಲ ಎಂಬ ಮಾತನ್ನು ಹುಸಿಗೊಳಿಸಿ, ಸಮ್ಮೇಳನದ ಯಶಸ್ಸಿಗಾಗಿ ಶ್ರಮಿಸಿದ ತಮಗೆ ಮತ್ತು ಜಿಲ್ಲಾಡಳಿತದ ಸಮಸ್ತರಿಗೆ ನನ್ನ ಅಭಿನಂದನೆಗಳು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.