ಸಾಹಿತ್ಯ ಗೋಷ್ಠಿ, ಸಾಧಕರಿಗೆ ಸನ್ಮಾನ, ಕವಿಗೋಷ್ಠಿ
ನಾಪೋಕ್ಲು: ಸಮೀಪದ ಬೆಟ್ಟಗೇರಿಯ ಉದಯ ಪ್ರೌಢಶಾಲೆಯಲ್ಲಿ ಶನಿವಾರ ನಡೆದ 11ನೇ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಏಳು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮಕ್ಕಳ ಕೊರತೆಯ ಕಾರಣದಿಂದ ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚಬಾರದು. ಬುಡಕಟ್ಟು ಜನರ ಸಂಸ್ಕೃತಿಯ ಉಳಿವಿಗಾಗಿ ಪ್ರತ್ಯೇಕ ಅಕಾಡೆಮಿಯ ರಚನೆ ಆಗಬೇಕು. ಜಿಲ್ಲಾ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ನಿವೃತ್ತರಾದ ಶಿಕ್ಷಕರ ಸ್ಥಾನಕ್ಕೆ ಶಿಕ್ಷಕರ ನೇಮಕ ಆಗಬೇಕು. ಸ್ಥಳೀಯ ಸಾಹಿತಿ, ಕಲಾವಿದರನ್ನು ಗುರುತಿಸಿ ಅವರಿಗೆ ಮಾಶಾಸನ ಕೊಡಬೇಕು. ಮಡಿಕೇರಿ- ತಲಕಾವೇರಿ ರಸ್ತೆಯನ್ನು ಉನ್ನತ ಮಟ್ಟದ ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಬೇಕು ಹಾಗೂ ಮಡಿಕೇರಿ, ಮದೆನಾಡು,ಹೆರವನಾಡು,ಅವಂದೂರು, ಕೊಳಗದಾಳು ಮೂಲಕ ಹಾದು ಹೋಗಿ ಚೇರಂಬಾಣೆ ಸೇರುವ ರಸ್ತೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂಬ ಏಳು ನಿರ್ಣಯಗಳನ್ನು ಅಂಗೀಕರಿಸಲಾಯಿತು.Last Updated 29 ಜನವರಿ 2023, 11:14 IST