ಚಿಕ್ಕಬಳ್ಳಾಪುರ: ಇಲ್ಲಿನ ಕನ್ನಡ ಭವನದಲ್ಲಿ ಮಂಗಳವಾರ ಚಾಲನೆಗೊಂಡಿದ್ದ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬುಧವಾರ ತೆರೆ ಬಿದ್ದಿತು.

ಸಮಾರೋಪ ಭಾಷಣ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ‘ಕನ್ನಡ ಸಾಹಿತ್ಯ ಸಮ್ಮೇಳನಗಳು, ಕನ್ನಡಕ್ಕೆ ಸಂಬಂಧಿಸಿದ ಸಮಾವೇಶಗಳು ಕನ್ನಡದ ವಿವೇಕ ಜಾಗೃತಗೊಳಿಸಲಿ’ ಎಂದು ಆಶಿಸಿದರು.

ಕನ್ನಡ ಮತ್ತು ಕನ್ನಡ ಒಳಗೊಂಡ ಕರ್ನಾಟಕ, ಇಲ್ಲಿನ ಸಂಸ್ಕೃತಿಗೆ ಒಂದು ವಿವೇಕವಿದೆ. ಕನ್ನಡ ನಾಡಿನ ವಿವೇಕ ಇತರ ರಾಜ್ಯಗಳಿಗಿಂತ ಹೇಗೆ ಭಿನ್ನವಾಗಿದೆ ಎನ್ನುವುದನ್ನು ತಿಳಿಯಲು, ಆ ವಿವೇಕ ಜಾಗೃತಿಗೊಳಿಸಲು ಸಮ್ಮೇಳನಗಳು ಪೂರಕ ಎಂದು ಹೇಳಿದರು.

ಬೇರೆ ಬೇರೆ ಕಾಲದಲ್ಲಿ ಕರ್ನಾಟಕವನ್ನು ಬೇರೆ ಬೇರೆ ಸಂಸ್ಕೃತಿಗಳು ಬೆಳೆಸಿವೆ. ಕರಾವಳಿ, ಮೈಸೂರು, ಮಲೆನಾಡು, ಕಲ್ಯಾಣ ಕರ್ನಾಟಕ, ಬೆಂಗಳೂರು ಹೀಗೆ ಬೇರೆ ಬೇರೆ ಭಾಗಗಳು ಇವೆ. ಈ ಎಲ್ಲದರ ಸಮನ್ವಯದಿಂದ ರೂಪುಗೊಂಡ ಕರ್ನಾಟಕವನ್ನು ಅರ್ಥ ಮಾಡಿಕೊಳ್ಳಲು ಇಂತಹ ಸಮ್ಮೇಳನ ಸಹಾಯಕ ಆಗಬೇಕು ಎಂದು ಹೇಳಿದರು.

ಜೈನ, ಬೌದ್ಧ, ಇಸ್ಲಾಂ, ಕ್ರೈಸ್ತರು ಹೀಗೆ ಆಯಾ ಕಾಲದಲ್ಲಿ ನಾಡನ್ನು, ಸಾಹಿತ್ಯವನ್ನು ಬೆಳೆಸಿದ್ದಾರೆ. ದೇವರಿಗೆ ಕನ್ನಡ ಕಲಿಸಿದವರು ವಚನಕಾರರು. ದೇವರಿಗೆ ಕನ್ನಡ ಕಲಿಸುವ ವಿವೇಕ ನಮಗೆ ಶಕ್ತಿ ಆಗಬೇಕು ಎಂದು ಹೇಳಿದರು.

ಹೊರರಾಜ್ಯಗಳ ಜನರು ನಮ್ಮ ಜೊತೆ ಇಲ್ಲಿದ್ದು ವ್ಯವಹಾರ ನಡೆಸುವಾಗ, ‘ನಮ್ಮ ಊರಿನಲ್ಲಿ ಇದ್ದೀರ. ಕನ್ನಡ ಮಾತನಾಡಿ’ ಎಂದು ನಾವು ಹೇಳುವುದಿಲ್ಲ. ನಾವೇ ಅವರ ಭಾಷೆ ಕಲಿಯುತ್ತೇವೆ ಎಂದು ಹೇಳಿದರು.

ಸಾನ್ನಿಧ್ಯವಹಿಸಿದ್ದ ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮೂರು ದಶಕಗಳ ಹಿಂದೆಯೇ ಕನ್ನಡ ಅನ್ನದ, ಅರಿವಿನ, ಸಂಸ್ಕೃತಿಯ, ಆಶ್ರಯದ ಭಾಷೆ ಆಗಬೇಕು ಎಂದು ಹೇಳಿದ್ದೆ. ಅರಿವಿನ ಭಾಷೆ ಎಂದರೆ ಪ್ರಾಥಮಿಕ ಶಿಕ್ಷಣವು ಕನ್ನಡದಲ್ಲಿ ದೊರೆಯಬೇಕು. ಕನ್ನಡ ಕಲಿತರೆ ಉದ್ಯೋಗ ದೊರೆಯುತ್ತದೆ ಎನ್ನುವ ಖಚಿತತೆ ದೊರೆಯಬೇಕು ಎಂದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ತೆಲುಗು ಮಯವಾಗಿವೆ. 19ನೇ ಶತಮಾನದ ಪೂರ್ವಾರ್ಧದಲ್ಲಿ ಇಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ ಇದೆ. ತೆಲುಗು ಆಳವಾಗಿ ಬೇರುಬಿಟ್ಟ ಪ್ರದೇಶ ಇದು. ವ್ಯಾವಹಾರಿಕ ಮತ್ತು ಮಾತೃಭಾಷೆಯೂ ತೆಲುಗು. ಇಂತಹ ಪ್ರಾಂತದಲ್ಲಿ ಕನ್ನಡಕ್ಕೆ ಬಹಳ ದೊಡ್ಡ ಸೇವೆ ಮಾಡಿದ್ದು ಗೂಳೂರು ಮಠ ಎಂದು ಸ್ಮರಿಸಿದರು.

ಗೂಳೂರಿನಲ್ಲಿ ಮಠದಿಂದ ಕನ್ನಡ ಶಾಲೆ ತೆರೆಯಲಾಗಿತ್ತು. 1945ರಲ್ಲಿ ಅನಕೃ ಅವರಿಗೆ ಕನ್ನಡದ ಕಟ್ಟಾಳು ಎಂದು ಪ್ರಶಸ್ತಿ ನೀಡಿದ್ದು ಗೂಳೂರು ಮಠದ ಜಚನಿ. ಮಹಿಳೆಯರಿಗೆ ಪೌರೋಹಿತ್ಯ ಕಲಿಸಿದರು. ದಲಿತರಿಗೆ ದೇಗುಲದ ಗರ್ಭಗುಡಿಗೆ ಪ್ರವೇಶ ನೀಡಿದರು. ಹೀಗೆ ವಿದ್ವಾಂಸರಾದ ಜಚನಿ ಅವರು ಬದಲಾವಣೆಯ ಹರಿಕಾರರಾದರು. ಹೊಸಬರ ನೆನಪಿನಲ್ಲಿ ಹಳೆಯದನ್ನು ಮರೆಯಬಾರದು. ಎಂದು ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಇಂತಹ ಭವ್ಯವಾದ ಕನ್ನಡ ಭವನ ಆಗುತ್ತದೆ ಎಂದುಕೊಂಡಿರಲಿಲ್ಲ. ಭವನ ನಿರ್ಮಾಣದಲ್ಲಿ ವೀರಪ್ಪ ಮೊಯಲಿ ಅವರ ಪಾತ್ರ ಪ್ರಮುಖವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಮಾತನಾಡಿ, ತೆಲುಗು ಮತ್ತು ಕನ್ನಡದ ಬ್ರಾತೃತ್ವ ಈ ನೆಲದಲ್ಲಿ ಇದೆ. ಭಾರತ ರತ್ನ ಪಡೆದ ಈ ಜಿಲ್ಲೆಯ ವಿಶ್ವೇಶ್ವರಯ್ಯ ಮತ್ತು ಸಿಎನ್ಆರ್ ರಾವ್ ಅವರು ಓದಿದ್ದು ಕನ್ನಡ ಮಾಧ್ಯಮದಲ್ಲಿ ಎಂದರು.

ಕನ್ನಡ ಮತ್ತು ತೆಲುಗಿಗೆ ಇಲ್ಲಿ ಪ್ರಾಶಸ್ತ್ಯವಿದೆ. ಪರಸ್ಪರ ಕೊಡುಕೊಳ್ಳುವ, ವಿನಯ ಮತ್ತು ವಿನಿಮಯದ ಜೊತೆಗೆ ಕನ್ನಡವನ್ನು ಬೆಳೆಸಬೇಕು. ಕನ್ನಡಕ್ಕೆ ಆತಂಕದ ದಿನಗಳು ಬರಬಾರದು. ಕನ್ನಡ ಉಳಿಯುತ್ತಿರುವುದೇ ಕನ್ನಡ ಶಾಲೆಗಳ ಶಿಕ್ಷಕರಿಂದ ಎಂದು ಪ್ರಶಂಸಿಸಿದರು.

ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಮಾತನಾಡಿ, ಇತಿಹಾಸ ಅವಲೋಕಿಸಿದಾಗ ಕನ್ನಡ ಭಾಷೆಗೆ ಮುಪ್ಪು ಇಲ್ಲ. ನಮ್ಮ ಮಕ್ಕಳಿಗೆ ಒಂದು ವಾಕ್ಯ ಬರೆಯಲು ಹೇಳಿದರೆ ಅದರಲ್ಲಿ ಕಾಗುಣಿತ, ಒತ್ತಕ್ಷರದ ತಪ್ಪು ಕಾಣುತ್ತವೆ. ಭಾಷೆ ಉಳಿಸಿ ಬೆಳೆಸುವ ಮಹತ್ವದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಕನ್ನಡಿಗರು ಶಾಂತಿಪ್ರಿಯರು ಎಂದು ಹೆಸರಾದವರು. ಬೇರೆಯವರಿಗೂ ನಮ್ಮ ಭಾಷೆ ಕಲಿಸಬೇಕು. ನಮ್ಮ ಮೇಲೆ ಭಾಷೆ ವಿಚಾರವಾಗಿ ಯಾವುದೇ ದಾಳಿಗಳು ನಡೆದರೆ ಅವುಗಳನ್ನು ಸಹಿಸಬಾರದು ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಗೋಪಾಲಗೌಡ ಕಲ್ವಮಂಜಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ನಿಟ್ಟಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಕಸಾಪ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

‘ಉದ್ಯೋಗಕೊಡುವ ಭಾಷೆ ಬೆಳೆಯುತ್ತದೆ’

ಯಾವ ಭಾಷೆಗೆ ಉದ್ಯೋಗ ಕೊಡುವ ಶಕ್ತಿ ಇದೆಯೊ ಆ ಭಾಷೆ ಬೆಳೆಯುತ್ತದೆ. ಇಂಗ್ಲಿಷ್ಗೆ ವ್ಯಾಪಾರಿ ಮೌಲ್ಯ ಇದೆ. ಕನ್ನಡಕ್ಕೆ ಆ ಮೌಲ್ಯ ಇದೆಯಾ? ಕನ್ನಡವು ಅರಿವುಮ ಅನ್ನ ಆಶ್ರಯ ಸಂಸ್ಕೃತಿಯ ಭಾಷೆ ಆಗಬೇಕು. ಆದರೆ ಕನ್ನಡದ ಮಟ್ಟಿಗೆ ಈ ವಿಚಾರ ಕುಗ್ಗುತ್ತಿದೆ. ಇಂಗ್ಲಿಷ್ ವಿಶ್ವವ್ಯಾಪಿಯಾಗಿ ಬೆಳೆಯುತ್ತಿದೆ ಎಂದು ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ನಾವು ಬರಿ ಆಂಗ್ಲ ವ್ಯಾಮೋಹದ ಬಗ್ಗೆ ಮಾತನಾಡಿದರೆ ಸಮಸ್ಯೆ ಪರಿಹಾರ ಆಗುವುದಿಲ್ಲ. ಈ ವಿಚಾರವಾಗಿ ರಾಜಕೀಯ ಇಚ್ಛಾಶಕ್ತಿ ಇರಬೇಕು ಎಂದರು.

ವಿದ್ಯಾರ್ಥಿಗಳಿಗೆ ಸನ್ಮಾನ

ಎಸ್ಎಸ್ಎಲ್ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳಿಸಿದ ಮತ್ತು ಪದವಿ ಹಂತದಲ್ಲಿ ಕನ್ನಡ ಭಾಷೆ ಮತ್ತು ಐಚ್ಛಿಕ ವಿಷಯಗಳಲ್ಲಿ ಶೆ 100ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.