ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಸಮಸ್ಯೆ ಬಗೆಹರಿಸಲು ಜಾಣತನ, ಬುದ್ಧಿವಂತಿಕೆ ಬಳಸಿಕೊಳ್ಳಿ
Published 27 ಅಕ್ಟೋಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೊನೆ ಕ್ಷಣದವರೆಗೂ ಜೊತೆಯನ್ನು ಕೊಡುವಂಥ ಸ್ನೇಹಿತರನ್ನು ಸಂಪಾದನೆ ಮಾಡುವಿರಿ. ಕಾರ್ಮಿಕ ವರ್ಗದವರ ಹೆಚ್ಚಿನ ಬೇಡಿಕೆಗಳು ವ್ಯವಸ್ಥಾಪಕರಿಂದ ಈಡೇರಲಿವೆ. ಹಿತವಾದ ಆಹಾರ ಸೇವಿಸಿರಿ.
ವೃಷಭ
ಸ್ವಚ್ಛಂದವಾಗಿ ಯೌವನವನ್ನು ಅನುಭವಿಸುತ್ತಿರುವ ನಿಮಗೆ ಮದುವೆ ಎನ್ನುವ ಹೆಚ್ಚುವರಿ ಜವಾಬ್ದಾರಿಯನ್ನು ಹೊರೆಸಲು ಪರಿವಾರದವರೆಲ್ಲರೂ ಕಾತರರಾಗುವರು. ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗದಂತೆ ಆಗಲಿದೆ.
ಮಿಥುನ
ಆತ್ಮಗೌರವಕ್ಕೆ ಹೆಚ್ಚು ಪ್ರಾಶಸ್ತ ನೀಡುವ ನಿಮಗೆ ಅಹಿತಕರ ಘಟನೆ ಮರೆಯಲು ಹೆಚ್ಚಿನ ಸಮಯ ಬೇಕಾಗುವುದು. ಭೂಸಂಬಂಧಿ ವ್ಯವಹಾರದಲ್ಲಿರುವವರಿಗೆ ಧನಲಾಭ. ಸಾಲ ತೀರಿಸುವ ಬಗ್ಗೆ ಯೋಚಿಸಿ.
ಕರ್ಕಾಟಕ
ಸಹಾಯ ಗುಣ ಹೊಂದಿರುವ ಕಾರಣದಿಂದ ಸಹಪಾಠಿಗಳೊಂದಿಗಿನ ಬಾಂಧವ್ಯ ಉತ್ತಮಗೊಳ್ಳುವುದು. ಮನುಷ್ಯ ಪ್ರಯತ್ನದ ಜತೆ ಆಂಜನೇಯನ ಮೊರೆ ಹೋಗುವುದರಿಂದ ಕಾರ್ಯಸಿದ್ಧಿ.
ಸಿಂಹ
ಸಂಪರ್ಕ ಸಾಧನದಂತಹ ಉದ್ಯೋಗದಲ್ಲಿ ನಿರತರಾದ ವ್ಯಕ್ತಿಗಳಿಗೆ ಸನ್ಮಾನ ಅಥವಾ ವಿಶೇಷ ಗೌರವಗಳು ಲಭಿಸಲಿವೆ. ಕೆಲಸ ಕಾರ್ಯಗಳಲ್ಲಿ ಉತ್ಸಾಹವನ್ನು ಕಾಣುವಿರಿ. ಅಸಮರ್ಪಕ ನಿರ್ಧಾರಗಳನ್ನು ಕೈಗೊಳ್ಳದಿರಿ.
ಕನ್ಯಾ
ಕಾರ್ಯಸಾಧನೆಗೆ ಪ್ರಯತ್ನದ ಹೊರತಾಗಿ ದೈವಬಲ ಇರಬೇಕಾಗುತ್ತದೆ ಎಂದು ಅರಿತುಕೊಂಡು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿ. ವದಂತಿಗಳಿಗೆ ಬೆಲೆಕೊಟ್ಟು ತೀರ್ಮಾನಕ್ಕೆ ಬರುವುದು ಸರಿಯಲ್ಲ.
ತುಲಾ
ಮನೆಗೆ ಹೊಂದಿಕೊಂಡಂತೆ ಇರುವಂತಹ ದೇವಾಲಯದ ಜೀರ್ಣೊದ್ಧಾರ ಮಾಡುವ ಮಾತುಕತೆ ಆಗಬಹುದು. ಹವಾನಿಯಂತ್ರಣದ ವಾತಾವರಣವು ಸರಿಹೋಗದೆ ಇರಬಹುದು. ಅಲರ್ಜಿ ಉಂಟಾಗಬಹುದು.
ವೃಶ್ಚಿಕ
ಮನೆಯಲ್ಲಿ ನಿಮ್ಮ ಶಕ್ತಿಗೂ ಮೀರಿ ನೀವು ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಿದ್ದರೂ ಇತರರು ಲಘುವಾಗಿ ಮಾತನಾಡಿದಾಗ ಕೋಪ ಬಂದರೂ ಸುಮ್ಮನಿರಬೇಕಾದ ಪರಿಸ್ಥಿತಿ ನಿಮ್ಮನ್ನು ಹೈರಾಣಾಗಿಸುತ್ತದೆ.
ಧನು
ತಂತ್ರಜ್ಞಾನದಲ್ಲಿ ಅನುಭವವು ಹೊಸ ಕಾರ್ಯಕ್ಷೇತ್ರದಲ್ಲಿ ಕಡಿಮೆ ಎಂದು ಅನ್ನಿಸುವುದು. ಸುಮುಹೂರ್ತದಲ್ಲಿ ನಡೆದ ಒಳ್ಳೆಯ ಕಾರ್ಯಕ್ರಮ ಉತ್ತಮ ಫಲ ನೀಡುವುದರಲ್ಲಿ ಸಂಶಯವಿಲ್ಲ.
ಮಕರ
ಸಮಸ್ಯೆ ಬಗೆಹರಿಸಲು ಜಾಣತನ, ಬುದ್ಧಿವಂತಿಕೆ ಬಳಸಿಕೊಳ್ಳಿ. ನಿತ್ಯದ ಕೆಲಸಗಳಲ್ಲಿ ಬದಲಾವಣೆ ಇರುವುದಿಲ್ಲ. ಖುಷಿ ಕೊಡುವ ಹವ್ಯಾಸದ ಕೆಲಸಗಳನ್ನು ಎಷ್ಟೇ ಬಿಡುವಿಲ್ಲದ ದಿನವಾಗಿದ್ದರೂ ಮಾಡುವಿರಿ.
ಕುಂಭ
ಸಹಜೀವನದಲ್ಲಿ ದೊರೆಯುವ ಸಹಕಾರ ಹಾಗೂ ಖುಷಿಯನ್ನು ಒಬ್ಬಂಟಿಯಾಗಿ ಜೀವಿಸುತ್ತಿರುವ ಬಹಳವಾಗಿ ನೆನೆಸಿಕೊಳ್ಳುವಿರಿ. ಉದ್ಯೋಗದಲ್ಲಿ ಕಂಡುಬಂದ ತಾಂತ್ರಿಕ ಸಮಸ್ಯೆ ನಿವಾರಣೆಯಾಗುವುದು.
ಮೀನ
ಕೂದಲೆಳೆಯಷ್ಟು ತಪ್ಪುಗಳನ್ನು ಮಾಡಿದ್ದಕ್ಕೆ ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಬಹುದು. ವೈಯಕ್ತಿಕ ತೃಪ್ತಿ ಧ್ಯೇಯೋದ್ದೇಶ ತಿಳಿದು ಸಮಾಜಮುಖಿ ಆಗಬೇಕಾಗುತ್ತದೆ.
ADVERTISEMENT
ADVERTISEMENT