ತೆಲುಗು ಮೂಲ: ಮರ್ಸಿ ಮಾರ್ಗರೇಟ್ ಕನ್ನಡಕ್ಕೆ: ಶಿವಕುಮಾರ್ ಕಂಪ್ಲಿ

ಸಿನಿಮಾ ನೋಡಿ ನಾನೂ ವೆಂಕಟ್ ಇಬ್ಬರೂ ಮನೆಯ ಕಡೆ ಹೊರಟೆವು.

ರಾತ್ರಿ ಒಂದು ಗಂಟೆ.

ಕತ್ತಲು ಹರವುತ್ತಿರುವ ದಾರಿಯ ಜೊತೆಗೆ ನಿದ್ದೆಹೋಗಿರುವ ಮರಗಳು. ಗಾಳಿಯನ್ನು ಹೊತ್ತೂ ಬೆಳಕನ್ನು ಕಕ್ಕುತ್ತಿರುವ ಲೈಟು ಕಂಬಗಳು. ಹುಸೇನ್ ಸಾಗರʼ್ನೀರಿನಲ್ಲಿ ಆ ಕಡೆಗೆ ಈ ಕಡೆಗೆ ತಿರುಗಿ ಧಣಿದು ನಿಂತಿರುವ ಬುದ್ಧ…

ತಣ್ಣನೆಯ ಗಾಳಿಯೇ ನಮ್ಮನ್ನು ಬೆನ್ನಟ್ಟಿರುವುದೆಂಬ ವಿಷಯವು ತಿಳಿದಿದೆ.

ಆದರೆ…? ಹಿಂದಕ್ಕೆ ತಿರುಗಿ ನೋಡಿದ ಮರುಕ್ಷಣ ಅದೇನೋ ಭಯ. ಯಾರಿಗೂ ಹೇಳಲಾಗದ, ಅರ್ಥವಾಗದ ಭಯ.

ಅವು ನನ್ನನ್ನು ಬೆನ್ನಟ್ಟುತ್ತಿವೆ.

ಹೌದು…

ಆ ಸೊನ್ನೆಗಳು ನನ್ನನ್ನು ಬೆನ್ನಟ್ಟುತ್ತಿವೆ.

ಕಹಾನೀ-2 ಸಿನಿಮಾ ನೋಡಿ ಹೊರಗೆ ಬರುತ್ತಿರುವುದರಿಂದಲೇನೋ…

ಆ ಸಿನಿಮಾದೊಳಗೆ ಪುಟ್ಟತಾಯಿಗೆ ಪೇಂಟಿಂಗ್ ಮಾಡೆಂಬ ಪ್ರತಿಸಾರಿಯೂ ಬರೆದ ಸೊನ್ನೆಗಳಿವೆಯಲ್ಲಾ….ಅವೇ ಸಾಲಾಗಿ ಒಂದರೆ ಹಿಂದೆ ಒಂದಾಗಿ… ನಮ್ಮ ಕಾರು ಹಿಂದೆಯೇ…ಹಿಂದೆಯೇ…

ಅರೆ ಕೈಗಳ ತುಂಬಾ, ಮುಖದಲ್ಲಿ ಮೂಡಿದ ಬೆವರು.

ವರೆಸಿಕೊಂಡರೂ ಮತ್ತೆ ಅವೇ ತಣ್ಣನೆಯ ಬೆವರು.

ಚಳಿಯ ಹುಚ್ಚುಹೆಚ್ಚಾದರೂ ತಿಳಿಯದ ಉಷ್ಣಸ್ಥಿತಿ! ನಮ್ಮನ್ನು ಸಮೀಪಿಸಿ ಕಾರು ಪಕ್ಕಕ್ಕೇ ಕುಳಿತುಕೊಂಡ ಸೊನ್ನೆಗಳ ಸಮೂಹ. ಬ್ರೆಕ್ ಹಾಕಿದರೂ ಪ್ರತಿಸಾರಿ ಅವು ಕಾರು ಮೇಲಿನಿಂದ ಜಾರುತ್ತಿವೆ. ಮತ್ತೆ ಮೇಲಕ್ಕೆ ಏಳುತ್ತಿವೆ. ನನ್ನ ಕಡೆ ಕಿಟಕಿ ತೆರೆದರೆ ನನ್ನ ಮೇಲೆಯೇ ಯಾವಾಗ ನುಗ್ಗಲಿ ಎಂಬಂತೆ ನೋಡುತ್ತಿವೆ.

ವೆಂಕಟ್ ತನ್ನ ಕೈಳೊಳಿಗಿನ ಸೆಲ್ ಫೋನ್ʼ ನನ್ನ ಆ ಕಡೆ ಈ ಕಡೆ ತಿರುಗಿಸುತ್ತಿದ್ದಾನೆ.

ಅದರ ಲಾಜಿಕ್ ಏನಾದರೂ ಅನ್ ಲಾಕ್ ಮಾಡಿ, ಆ… ಫೋನ್ ಯಾರದೋ ಅವರಿಗೇ ಸೇರಿಸಿದರೆ ಸಾಕೆಂದುಕೊಳ್ಳುತಿದ್ದಾನೆ.

ಟ್ಯಾಂಕ್ ಬಂಡ್ ಮೇಲೆ ಒಂದು ದೃಶ್ಯ. ಆ..ಗೊಂಬೆ ದಾಟುತ್ತಿದ್ದರೇ ಅದು ದಾಟಿ ನನ್ನನ್ನ ಹಿಂದಕ್ಕೆ ಕರೆದೊಯ್ಯುತ್ತಿದೆ. ಬದುಕಿನ ಒಂದು ಪೇಜನ್ನು ಯಾರೋ ಹಿಂದಕ್ಕೆ ಹಿಂದಕ್ಕೆ ತಿರುಗಿಸುತ್ತಿರುವಂತೆ. ಒಂದೇ ಸೊನ್ನೆ… ಒಂದನೊಂದನ್ನು ಸುತ್ತಿಕೊಳ್ಳುತ್ತಾ ಇನ್ನೂ ದೊಡ್ಡ ಸೊನ್ನೆಯಾಗಿ ಬದಲಾಗುತ್ತಿರುವಂತಿದೆ.

1988.

ಆಗ ನನ್ನ ವಯಸ್ಸು ಐದುವರ್ಷ. ಮನೆ ಮುಂದೆ ದೊಡ್ಡ ಸೌಂಡ್ ಬಾಕ್ಸ್ಗಳು. ಎಲ್ಲಾ ಹಿಂದಿ ಸಿನಿಮಾ ಹಾಡುಗಳೇ. ಶಾಫಿಯಾ ಮನೆ ಹತ್ತಿರದಿಂದ ನಮ್ಮ ಮನೆ ತನಕ ದೊಡ್ಡ ಶಾಮಿಯಾನ. ಕಟ್ಟಿಗೆ ಒಲೆ ಮೇಲೆ ಅಡುಗೆ ಮಾಡುತ್ತಿದ್ದಾರೆ. ಆ ಹೊಗೆಯ ಸುಳಿಗೆ ಕಣ್ಣು ತುಂಬಾ ನೀರು. ಮನೆ ಮುಂದೆಲ್ಲಾ ಮದುವೆ ಗಡಿಬಿಡಿ. ಶಾಫಿಯಾ ಚಿಕ್ಕಪ್ಪನ ಮದುವೆ.

ಅದು ಡಿಸೆಂಬರ್ ಕಾಲ. ಕ್ರಿಸ್ಮಸ್ಗಾಗಿ ನಮ್ಮ ಗಲ್ಲಿ ಎದುರಿಗಿರುವ ಚರ್ಚಿಗೆ ಸೀರಿಯಲ್ ಲೈಟ್ಗಳನ್ನು ಹಾಕುತಿದ್ದಾರೆ. ನಾನು ಶಾಫಿಯಾ, ಶಾಫಿಯಾಳ ಅತ್ತಿಗೆ, ದೊಡ್ಡಮ್ಮನ ಮಕ್ಕಳು ಎಲ್ಲರೂ ಅವರ ಕಟ್ಟೆ ಮೇಲೆ ಆಡುತ್ತಿದ್ದೆವು. ದೊಡ್ಡವರು ಅವರ ಕೆಲಸದೊಳಗೆ ಅವರಿದ್ದಾರೆ. ಸಣ್ಣ ಮಕ್ಕಳೆಲ್ಲರೂ ಅವರಿಗಿಷ್ಟವಾದ ಆಟವನ್ನು ಅವರು ಆಡಿಕೊಳ್ಳುತಿದ್ದಾರೆ. ಸೂರ್ಯ ಒಂದು ಸಾರಿ ಕತ್ತಲ ಹಿಂದಕ್ಕೆ ಹೋಗುತ್ತಲೂ, ಮತ್ತೊಂದು ಸಾರಿ ಕತ್ತಲಿಂದ ಹೊರಕ್ಕೆ ಬರುತ್ತಲೂ ಸಣ್ಣನೆಯ ಬೆಳಕನ್ನು ಚಲ್ಲುತಿದ್ದಾನೆ. ನಾವು ಆಡಿಕೊಳ್ಳುತ್ತಿರುವ ಕಟ್ಟೆಯ ಮೇಲೆ ಕೂಡಾ ಶಾಮಿಯಾನ ಹಾಕಲಾಗಿದೆ. ಆ ಶಾಮಿಯಾನಕ್ಕೆ ಅಲ್ಲಲ್ಲಿ ತೂತು ಬಿದ್ದಿರುವುದರಿಂದಾಗಿ ಸೂರ್ಯ ಕತ್ತಲಿನಿಂದ ಹೊರ ಬಂದ ಪ್ರತಿ ಸಾರಿಯೂ ಆ ತೂತುಗಳಿಂದ ಕೆಳಗೆ ಧಾರೆಯಂತೆ ಬೀಳುತ್ತಿರುವ ಬಿಸಿಲು ನಮ್ಮ ಮೇಲೆ ಬೀಳುವುದು ನನಗಿನ್ನೂ.. ನೆನಪು. ಸರಿಯಾಗಿ ಆಗಲೇ ಆತ ಬಂದ. ಅಗಲವಾದ, ಎತ್ತರವಾದ, ಪಟ್ಟೆ ಪಟ್ಟೆ ನೀಲಿ ಲುಂಗಿ ಕಟ್ಟಿಕೊಂಡವ. ‘ಶಾಫಿಯಾ’ ಅಂತಾ ಕರೆಯುತ್ತಾ. ಅವನು ಅವರ ಚಿಕ್ಕ ಮಾವ. ಅಂದಿಗೆ ಆತನಿಗೆ ಇನ್ನೂ ಮದುವೆ ಆಗಿರಲಿಲ್ಲ. ಮಕ್ಕಳೆಲ್ಲರನ್ನೂ ಹತ್ತಿರಕ್ಕೆ ಕರೆದು ‘ನಾವೆಲ್ಲರೂ ಆಡಿಕೊಳ್ಳೋಣವಾ’ ಅಂತ ಕೇಳಿದ.

ಸರಿ ಅಂದೆವು. ಶಾಫಿಯನನ್ನು ಮೇಲಕ್ಕೆ ಎತ್ತಿ ಕೂರಿಸಿಕೊಂಡ. ಅಲ್ಲಿರುವ ಉಳಿದ ನಾಲ್ವರೂ ಆತನ ಸುತ್ತು ನಿಂತುಕೊಂಡೆವು. ಸೂರ್ಯ ಮತ್ತೆ ಕತ್ತಲ ಹಿಂದಕ್ಕೆ ಹೋದ. ಅದು ಚಳಿಗಾಲ. ಆಮೇಲೆ ಕತ್ತಲಿಂದಾಗಿ ವಾತಾವರಣವೆಲ್ಲಾ ಮಸುಕುಮಸುಕಾಗಿತ್ತು.

ಆತ ಹೇಳಿದ ‘ಕತ್ತಲು ಬಿದ್ದಂತಿದೆ ಅಲ್ಲವಾ? ನಾವೆಲ್ಲರು ಈಗ ಮಲಕೊಂಡು ಸ್ವಲ್ಪೊತ್ತು ಅದಮೇಲೆ ಎದ್ದು ಮತ್ತೆ ಆಡಿಕೊಳ್ಳೋಣವಾ’ ಅಂತ.

ಸರಿ ಅಂದೆವು.

ಕಟ್ಟೆ ಮೇಲೆ ಟೆಂಟು. ಸಾಮಾನುಗಳು, ದೊಡ್ಡ ದೊಡ್ಡ ಅಡುಗೆ ಪಾತ್ರೆಗಳು, ಅಡುಗೆ ಮಾಡಲಿಕ್ಕೆ ಕಟ್ಟಿಗೆಗಳು ಇದ್ದವು. ಸೈಡ್ ವಾಲ್ ಪರದೆಯನ್ನ ಕಟ್ಟೆಯ ಮೇಲೆ ಹಾಸಿ ಎಲ್ಲರೂ ಮಲಗಿಕೊಂಡೆವು. ಆತ ಮಧ್ಯದಲ್ಲಿ ಮಲಗಿಕೊಂಡು ಶಾಫಿಯಾಳನ್ನ ಎಡಕ್ಕೆ ನನ್ನನ್ನ ಬಲಕ್ಕೆ ಮಲಗಿಸಿಕೊಂಡ. ಪಕ್ಕದ ಸಾಮಾನುಗಳ ಮೇಲೆ ಹೊದಿಸಿದ್ದ ಬ್ಲಾಂಕೇಟ್ ನ್ನ ನಮ್ಮೆಲ್ಲರ ಮೇಲೆ ಹೊದಿಸಿದ.

ನಾವೆಲ್ಲರೂ ಅದನ್ನ ಹೊಚ್ಚಿಕೊಂಡೆವು. ಎಲ್ಲರನ್ನೂ ಕಣ್ಣುಮುಚ್ಚಿರೆಂದ. ನಾವು ಕಣ್ಣು ಮುಚ್ಚಿದೆವು. ಆಗ ಅವನು… ಅವನು…

ವೆಂಕಟ್ ಇನ್ನೂ ಆ ಫೊನನ್ನು ಅನ್ಲಾಕ್ ಮಾಡಲಿಕ್ಕೆ ಪ್ರಯತ್ನಿಸುತ್ತಲೇ ಇದ್ದಾನೆ. ಸ್ಯಾಮ್ಸಂಗ್ ಫೋನ್. ಐದು ಪರ್ಸೆಂಟ್ ಚಾರ್ಜಿಂಗ್ ಇದೆ. ರಾತ್ರಿ ಒಂದು ಗಂಟೆ. ಐಮ್ಯಾಕ್ಸನೊಳಗೆ ಸಿನಿಮಾ ನೋಡಿ ಹೊರಗೆ ಬಂದು ಕ್ಯಾಬ್ ಗಾಗಿ ಎದುರು ನೋಡುತ್ತಾ ಕುಳಿತಿದ್ದಾಗ ಪಕ್ಕದಲ್ಲೇ ಬಿದ್ದಿತ್ತು. ತೆಗೆದುಕೊಂಡು ಹೋಗಿ ಸೆಕ್ಯುರಿಟಿ ಗಾರ್ಡ್ ಕೇಳಿದರೆ ಆತ ಏನೂ ಕೇಳದೆ ‘ತೆಗೆದುಕೊಂಡು ಹೋಗಿ ಸೆಲ್ಲಾರ್ ಇರುವ ಸೆಕ್ಯುರಿಟಿ ಆಫೀಸಿನೊಳಗೆ ಡಿಪಾಜಿಟ್ ಮಾಡಿ’ ಎಂದನು. ನಮಗೆ ಎದುರಾದ ಅನುಭವ ನೆನಪಿಗೆ ಬಂತು. ಚಾರ್ಜಿಂಗ್ ಆಗಿ ಹೋಗಿ ಸತ್ತು ಹೋಗುವ ಸ್ಥಿತಿಯೊಳಗಿರುವ ಫೋನ್ ತೆಗೆದುಕೊಂಡು ಹೋಗಿ ಆಫೀಸಿನೊಳಗೆ ನೀಡಿದರೂ.. ಅದು ಸೆಕ್ಯುರಿಟಿ ಆಫೀಸರ್ ಹೊರಟು ಹೋಗೋ ಸಮಯ. ಹೇಗೂ ಅವರು ಅದಕ್ಕೆ ಚಾರ್ಜಿಂಗ್ ಇಡರು. ಚಾರ್ಜಿಂಗ್ ಇರದೆ ಫೋನ್ ಆಫ್ ಆದರೆ ಸಿಮ್ಕಾರ್ಡ್ ತೆಗೆದು ಹಾಕಿರುತ್ತಾರೆಂದು ಆಲೋಚಿಸಿ ಫೋನನ್ನು ಬಿಟ್ಟು ಬಿಡಬಹುದು. ಯಾರೋ ಬಂದಾಗ ನೀಡಿದರಾಯಿತೆಂದು ಸೆಕ್ಯುರಿಟಿಯವರು ಜವಾಬ್ದಾರಿವಹಿಸದೇ ಇದ್ದು ಬಿಡಬಹುದು.

ಪಾಪ ಯಾರದೋ, ಏನು ಅಗತ್ಯವೋ, ನಾವೇ ತೆಗೆದುಕೊಂಡು ಹೋಗೋಣ ಬಿಡು. ಚಾರ್ಜಿಂಗ್ ಇಟ್ಟು, ಯಾರಾದರೂ ಫೋನ್ ಮಾಡಿದರೆ ನಮ್ಮ ಹತಿರವೇ ಬಂದು ಕಲೆಕ್ಟ್ ಮಾಡಿಕೊಳ್ಳಿ ಎನ್ನೋಣ ಅಂತ ಉಚಿತ ಸಲಹೆ ಒಂದನ್ನ ಎಸೆದೆ. ಅಲ್ಲಿ ಆ ನಿಮಿಷದೊಳಗೆ ಹಾಗೆ ಮಾಡುವುದು ಒಂದು ನೆಪವೆಂದು ಏಕೋ ಅನ್ನಿಸಿತು. ಇದೋ ನೋಡಿ ಆಗಿನಿಂದಲೂ ಅದನ್ನು ಯಾರದೋ ಅವರಿಗೇ… ಸೇರಿಸಬೇಕೆಂಬುದು ಆತನ ಪ್ರಯಾಸ.

‘ಯಾವಾಗ ಸಿನಿಮಾ ನೋಡಿದರೂ… ಅದನ್ನು ಕುರಿತು ಹರಿದು ಚಂಡಾಡುವಂತೆ ಮಾತಾಡುತಿದ್ದವ ಈ ದಿನ ಏಕೆ? ಏನೂ.. ಮಾತೇ ಆಡುತ್ತಿಲ್ಲ’- ಎಂದು ಸುಮ್ನನಿರದೇ ಕೇಳಿದೆ.

‘ಈ ಫೊನು ಯಾರದಾರಿಗುತ್ತದೆ ಎಂದು ಆಲೋಚಿಸುತ್ತಿರುವೆ’

‘ಪಾಪ ಯಾರದೋ ಏನೋ. ಕಾಂಟಾಕ್ಟ್ ನಂಬರ್ ಗಳೆಲ್ಲಾ ಇದರೊಳಗೇನೇ ಇದ್ದರೆ?’

‘ಒಂದು ವೇಳೆ ಈ ಫೋನನ್ನು ಯಾರಾದರೂ ಬೇಕಂತಲೇ ಬಿಟ್ಟು ಹೋಗಿದ್ದಾರೆನ್ನು ಆಗ ಹೇಗೆ?’ ಒಂದು ನಿಮಿಷ ಏನೂ ಅರ್ಥವಾಗಲಿಲ್ಲ. ಟ್ಯಾಂಕ್ ಬಂಡ್ ಮೇಲಿನಿಂದ ಡಿ.ಬೀ.ಆರ್. ಮಿಲ್ಲು ಕಡೆಗೆ ಕಾರು ಹೋಗುತಿದ್ದರೆ ವೆಂಕಟ್ ಮುಖದ ಮೇಲೆಯೇ… ಸಪೂರವಾಗಿ ಬಿದ್ದ ನಿಯಾನ್ ಲೈಟ್ ಗಳ ಕಾಂತಿ ಆತನ ಪ್ರಶ್ನೆಯನ್ನು ಸ್ಪಷ್ಟವಾಗಿ ತೋರಿಸಿತು.

ನಿಜವೇ ಆಗಿರುತ್ತದಾ? ಅಥವಾ ನನಗೇ… ಅಂಟಿಕೊಂಡ ಸಂಶಯವಾ?.

‘ಏನೋ ಯಾರಾದರೂ ಯಾವುದೋ ಬಾಂಬ್ ಇಟ್ಟು ಇದಕ್ಕೆ ಕೋಡ್ ಲಿಂಕ್ ಮಾಡಿ ಬಿಟ್ಟು ಹೋಗಿದ್ದರೆ!?’

ನನ್ನ ಗುಂಡಿಗೆಯೊಳಗೆ ಚಳಿ ಹುಟ್ಟಿತು.

ಒಂದರ ಹಿಂದೆ ಒಂದೊಂದು ಪ್ರಶ್ನೆಗಳನ್ನು ವೆಂಕಟ್ ಎಸೆಯುತ್ತಲೇ ಇದ್ದಾನೆ.

‘ಏನೋ ಯಾರಾದರೂ ದೃಶ್ಯಂ ಸಿನಿಮಾದೊಳಗಿನಂತೆ ಯಾರನ್ನೋ ಕೊಂದು ಅವರ ಫೋನ್ ನನ್ನು ಇಲ್ಲಿಗೆ ಬಂದು ಬಿಸಾಕಿದ್ದರೆ? ಆ ಕೊಲ್ಲಲ್ಪಟ್ಟವಳು ಯಾವುದೋ ಹೆಂಗಸಾಗಿದ್ದರೆ? ಏನೋ ಯಾವುದೋ ಉಗ್ರವಾದಿಯೋ ಬೇಕಂತಲೇ ಬಿಟ್ಟು ಹೋಗಿದ್ದರೆ !? ಈಗ ಈ ಫೋನ್ ಸಿಗ್ನಲ್ ಟ್ರೇಸ್ ಮಾಡುತ್ತಾ ಪೋಲೀಸರು ನಮ್ಮ ಮನೆಗೆ ಬಂದರೆ? ಕಳ್ಳತನಕ್ಕೆ ಗುರುತಾದ ಫೋನ್ ನಿಮ್ಮ ಹತ್ತಿರ ಯಾಕಿದೆ? ಎಂದು ರುಜುವಾತು ಮಾಡಿದರೆ? ?’

ಆ ಪ್ರಶ್ನೆಗಳಿಗೆ ನನ್ನ ಹತ್ತಿರ ಕೂಡಾ ಯಾವ ಉತ್ತರವಿಲ್ಲದ್ದರಿಂದಾಗಿ ಪಕ್ಕದಲ್ಲೇ ಯಾವ ಹಳಿಗಳು ಇರದಿದ್ದರೂ ಯಾವುದೋ ರೈಲು ಅತಿವೇಗದಿಂದ ನನ್ನ ಮೇಲೆ ಹೋದಂತೆ ಅನಿಸಿತು. ಕಬ್ಬಿನ ಗಾಣದೊಳಗೋ… ಬಾಗಿಲ ಸಂದಿನೊಳಗೋ… ಬೆರಳು ಇರುಕಿಕೊಂಡಂತೆ! ಫೋನ್ ಹಿಡಿದುಕೊಂಡು ಅನಗತ್ಯವಾದ ನಿರ್ಣಯ ತೆಗೆದುಕೊಂಡೆವೇನೋ…!? ಅಂತ ಅದೇನೋ ಭಯ ಆವರಿಸಿಕೊಂಡಿತು.

ರಿಸ್ಕ ತೆಗೆದುಕೊಳ್ಳುವ ಆಸಕ್ತಿ ಇಲ್ಲದೆ, ‘ಈ ಫೊನ್ ಅನ್ನು ರಸ್ತೆ ಮೇಲೆಯೇ ಬಿಸಾಕು’ ಎಂದೆ.

‘ನಾವಂದುಕೊಂಡ ಕಾರಣಗಳೇ ತಪ್ಪಾಗಿ ಪಾಪ ಯಾರಾದರೂ ನಿಜವಾಗಲೂ ಫೋನ್ ಕಳಕೊಂಡಿದ್ದರೆ?’ ಮತ್ತೆ ಅದೇ… ಮೊದಲ ಪ್ರಶ್ನೆ…

ಫೋನ್ ಅನ್ಲಾಕ್ ಆದಂತೆಯೇ ಎಷ್ಟೋ ಜನ ಅವರ ಬಾಲ್ಯದ ಮಕ್ಕಳ ಮೇಲಿನ ದೌರ್ಜನ್ಯದ ಬದುಕನ್ನು ಕುರಿತು ಯಾರೊಂದಿಗೂ ಮಾತನಾಡರು. ಚಿಕ್ಕಂದಿನ ಆ ತಿಳಿಯದ ಭಯವನ್ನ ಕುರಿತು ತಂದೆ ತಾಯಿಗೂ ಕೂಡಾ ಹೇಳಿಕೊಳ್ಳರು.

ಆ ದಿನ ನಾನೂ ಕೂಡಾ ಹಾಗೇಯೇ…

ಅವನು ಆ ದಿನ ಮಕ್ಕಳ ಕೈಗಳನ್ನು ಎಲ್ಲೆಲ್ಲಿಗೋ ಸ್ಪರ್ಶಿಸಲಿಕ್ಕೆ ಎಳೆದುಕೊಂಡ. ನನಗೆ ತಿಳಿಯುತ್ತಲೇ ಇತ್ತು. ಇನ್ನೂ ನನಗೆ ಆ ದಿನ ನೆನಪಿದೆ. ನನ್ನ ಕರುಳೊಳಗೆ ನಡುಕ ಹುಟ್ಟಿದ ಆ ದಿನ! ಆ ದಿನವನ್ನು ನಾನು ಯಾವ ದಿನವೂ ಮರೆಯಲಾರೆ! ಕಾಲು ಥರ ಥರನೆ ನಡುಗಿದವು. ದಿಗ್ಗನೆ ಎದ್ದು ಅಲ್ಲಿಂದ ಓಡಿ ಹೋದೆ. ಏನು ನಡೆಯುತ್ತದೋ ಕೂಡಾ ಅರ್ಥವಾಗದ ಆ ವಯಸ್ಸಿನೊಳಗೆ ಭಯದಿಂದ ಹೋಗಿ ನಮ್ಮ ಮನೆಯ ಮಂಚದ ಕೆಳಗೆ ತೂರಿ ಅಡಗಿಕೊಂಡೆ. ಇಂದಿಗೂ ನನಗೆ ಆ ನೆನಪಿನ ಪೀಡನೆಯೇ. ಆದರೆ ಶಾಫಿಯಾಳಿಗೆ?

ಇಂದಿಗೂ ಯಾವ ಮನೆಯ ಮುಂದೆಯಾದರೂ ಶಾಮಿಯಾನ ನೋಡಿದರೂ.. ಕಟ್ಟಿಗೆಯ ಒಲೆ ನೋಡಿದರೂ… ಶಾಫಿಯಾಳೇ ನೆನಪಿಗೆ ಬರುತ್ತಾಳೆ! ಒಂದು ಸಾರಿ ಹೋಗಿ ಅವಳ ಗಾಯಗೊಂಡ ಬಾಲ್ಯವನ್ನು ಕುರಿತು ಕೇಳಿ ತಿಳಿದುಕೊಳ್ಳಬೇಕು ಎನಿಸುತ್ತದೆ. ಸೊನ್ನೆಗಳನ್ನೆಲ್ಲವನ್ನೂ ದೊಡ್ಡ ಬೆಂಕಿಹಾಕಿ ಅದರೊಳಗೆ ತುಳಿದು ಹಾಕಬೇಕೆಂದು ಅನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.