ಡಿಸ್ನಿ–ಜಿವಾಮೆ ರಾತ್ರಿ ದಿರಿಸುಗಳ ಸಂಗ್ರಹ

7

ಡಿಸ್ನಿ–ಜಿವಾಮೆ ರಾತ್ರಿ ದಿರಿಸುಗಳ ಸಂಗ್ರಹ

Published:
Updated:
Prajavani

ಮಕ್ಕಳು ಮೆಚ್ಚುವ ಕಾರ್ಟೂನ್‌ ಪಾತ್ರಗಳ ಚಿತ್ರಗಳಿರುವ ವಿಶೇಷ ರಾತ್ರಿ ದಿರಿಸುಗಳನ್ನು ಡಿಸ್ನಿ ಸಹಯೋಗದಲ್ಲಿ ಉಡುಗೆ ತಯಾರಿಕಾ ಸಂಸ್ಥೆ, ಜಿವಾಮೆ ಬಿಡುಗಡೆ ಮಾಡಿದೆ. ದೇಶದಾದ್ಯಮತ ಇರುವ ಜಿವಾಮೆಯ ಎಲ್ಲ ಮಳಿಗೆಗಳು ಹಾಗೂ ಆನ್‌ಲೈನ್ ಮಾರಾಟ ತಾಣಗಳಲ್ಲಿ ಈ ಉಡುಗೆಗಳು ದೊರೆಯುತ್ತವೆ.

ಮಿಕ್ಕಿ ಮೌಸ್‌, ಮಿನ್ನಿ ಮೌಸ್‌, ಡೊನಾಲ್ಡ್ ಡಕ್, ಡೈಸಿ, ಗೂಫಿ, ಪ್ಲುಟೊ, ವಿನ್ನಿ ದ ಪೂಹ್‌, ಪಿಗ್ಲೆಟ್ ಮತ್ತು ಟೈಗರ್ ಟು ಲೈಫ್‌ ಹೆಸರಿನಲ್ಲಿ ಈ ಹೊಸ ಉಡುಗೆಗಳು ಲಭಿಸಲಿವೆ. ಮಿಕ್ಕಿಮೌಸ್‌ 90ನೇ ವರ್ಷಾಚರಣೆ ಅಂಗವಾಗಿ ಈ ಪಾತ್ರಗಳ ಚಿತ್ರಗಳನ್ನು ಮುದ್ರಣ ಮತ್ತು ಕೈ ಬರಹದ ರೂಪದಲ್ಲಿ ಗುಣಮಟ್ಟದ ಕಾಟನ್ ಉಡುಗೆಗಳ ಮೇಲೆ ಚಿತ್ರಿಸಲಾಗಿದೆ.

ಇವುಗಳ ಬೆಲೆ ₹995ರಿಂದ ಆರಂಭವಾಗಲಿದ್ದು, ಭಿನ್ನ ವರ್ಣಗಳು ಹಾಗೂ ಅಳತೆಗಳಲ್ಲಿ, ಪೈಜಾಮ, ಶಾರ್ಟ್ಸ್‌, ಸೆಟ್ಸ್‌, ನೈಟ್ ಡ್ರೆಸ್‌ ವರ್ಗದಲ್ಲಿ ಲಭ್ಯವಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !