ಸಾಹಿತ್ಯ ಮತ್ತು ಕಾಲ: ಉಪನ್ಯಾಸ

7

ಸಾಹಿತ್ಯ ಮತ್ತು ಕಾಲ: ಉಪನ್ಯಾಸ

Published:
Updated:

ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘ ಶನಿವಾರ ‘ಸಾಹಿತ್ಯ ಮತ್ತು ಕಾಲ; ಸಂಬಂಧಗಳು ಮತ್ತು ವೃದ್ಧಾಪ್ಯ’ ಕಾರ್ಯಕ್ರಮ ಆಯೋಜಿಸಿದೆ.

ಅಂದು ಬೆಳಿಗ್ಗೆ 10.50 ಗಂಟೆಗೆ ಖ್ಯಾತ ವಿಮರ್ಶಕ ಡಾ.ಎಚ್.ಎಸ್. ರಾಘವೇಂದ್ರ ರಾವ್ ಅವರು ‘ಸಾಹಿತ್ಯ ಮತ್ತು ಕಾಲ’ ಕುರಿತು ಮಾತನಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ‘ಸಾಮ’ ಸಂಗೀತ ಸಂಸ್ಥೆಯ ನಿರ್ದೇಶಕ ಮನೋಜ ವಸಿಷ್ಠ ಹಾಗೂ  ಆಕಾಶವಾಣಿ ಬಿ ಹೈಗ್ರೇಡ್ ಕಲಾವಿದೆ ಅರುಂಧತಿ ಮನೋಜ್ ವಸಿಷ್ಠ ಅವರಿಂದ ದ್ವಂದ್ವ ಶಾಸ್ತ್ರೀಯ ಮತ್ತು ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 2.30ಗಂಟೆಗೆ ಸಂಶೋಧಕ ಡಾ.ಆನಂದರಾಮ ಉಪಾಧ್ಯ ಅವರು ‘ಜೀವನ ಮೌಲ್ಯಗಳು ಮತ್ತು ಆಧ್ಯಾತ್ಮಿಕ ವಿಚಾರಗಳು’ ಕುರಿತು ಉಪನ್ಯಾಸ ನೀಡುವರು. ಮಧ್ಯಾಹ್ನ 3.30 ಗಂಟೆಗೆ ಆಪ್ತ ಸಲಹೆಗಾರ್ತಿ ಶಾಂತಾ ನಾಗರಾಜ್ ‘ಸಂಬಂಧಗಳು ಮತ್ತು ವೃದ್ಧಾಪ್ಯ’ ಕುರಿತು ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಸ್ಥಳ: ಆನಂದರಾವ್ ವೃತ್ತದ ಹತ್ತಿರದ ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನ.

ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ಮಾಹಿತಿಗೆ ವಿ.ಜಿ. ಪಂಡಿತ್  99865 96691. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !