ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಸು ಬಂದರೆ

Last Updated 6 ಡಿಸೆಂಬರ್ 2018, 19:46 IST
ಅಕ್ಷರ ಗಾತ್ರ

ವಾಹನ ದಟ್ಟಣೆಯಲ್ಲಿ ಸಿಲುಕುವುದು,ರಾತ್ರಿ ಪ್ರಯಾಣ ಇವೆಲ್ಲವೂ ಮಹಿಳೆಯರನ್ನು ಸಾರ್ವಜನಿಕ ಶೌಚಾಲಯವನ್ನು ಬಳಸುವ ಅನಿವಾರ್ಯಕ್ಕೆ ದೂಡುತ್ತಿದೆ. ಪುರುಷರು ಎಲ್ಲೆಂದರಲ್ಲಿ ಮೂತ್ರವಿಸರ್ಜನೆ ಮಾಡಬಹುದಾದ ಮುಕ್ತ ವಾತಾವರಣವನ್ನು ನಮ್ಮ ಸಮಾಜವೇ ಸೃಷ್ಟಿಸಿದೆ. ಆದರೆ ಹೆಣ್ಣುಮಕ್ಕಳು ನಾಲ್ಕು ಗೋಡೆಯ ಮಧ್ಯೆಯೂ ಶುಭ್ರವಾದ ಶೌಚಾಲಯಗಳನ್ನು ಬಳಕೆ ಮಾಡಲು ಸಾಧ್ಯವಾಗದೇ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಎಷ್ಟೇ ಇದ್ದರೂ ಹೆಣ್ಣುಮಕ್ಕಳ ಆರೋಗ್ಯಕ್ಕೆ ಅವು ಪೂರಕವಾಗಿಲ್ಲ. ಭಾರತೀಯ ಶೌಚಾಲಯಗಳಿರಲಿ, ಪಾಶ್ಚಿಮಾತ್ಯ ಶೈಲಿಯ ಶೌಚಾಲಯಗಳಿರಲಿ ನೈರ್ಮಲ್ಯ ನಿರ್ವಹಣೆಯೇ ದೊಡ್ಡ ಸವಾಲಾಗಿದೆ.

ಮಹಿಳೆಯರು ಕಂಡು ಕೊಂಡ ಪರಿಹಾರಗಳು

‘ಮುಂಬೈನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಮಾಡಿದೆ. ಸತತ ಮೂರು ದಿನ ರೈಲಿನಲ್ಲೇ ಇದ್ದ ಪಾಶ್ಚಿಮಾತ್ಯ ಶೈಲಿಯ ಶೌಚಾಲಯವನ್ನುಬಳಸಿದ್ದರಿಂದ ಒಂದು ವಾರ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಸೋಂಕು ತಗುಲದಂತೆ ಸಾಕಷ್ಟು ಎಚ್ಚರ ವಹಿಸಿದ್ದೆ. ಇದೀಗ ಪ್ರಯಾಣದ ಸಂದರ್ಭದಲ್ಲಿ ನೀರು ಕುಡಿಯುವುದನ್ನೇ ಕಡಿಮೆ ಮಾಡಿದ್ದೇನೆ’ ಎಂದು ಗೋಳು ತೋಡಿಕೊಂಡಿದ್ದು ನಗರದ ನಿವಾಸಿ ಅಕ್ಷತಾ.

‘ಎಷ್ಟೇ ಕಷ್ಟ ಆದರೂ ನಾನು ರಾತ್ರಿ ಪ್ರಯಾಣ ಮಾಡುವುದಿಲ್ಲ. ನನಗೆ ಮಧುಮೇಹ ಇದೆ. ಬಸ್‌ನಲ್ಲಿ ಹೋದರೆ ಕನಿಷ್ಠ ಎರಡು ಬಾರಿಯಾದರೂ ಬಸ್‌ ನಿಲ್ಲಿಸಿ ಎಂದು ಕೇಳಬೇಕು. ಅವರು ನಿಲ್ಲಿಸಿದ ಜಾಗಗಳಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆ ಇರುವುದಿಲ್ಲ.ಪ್ರಯಾಣವನ್ನೇ ಮುಂದೂಡುತ್ತೇನೆ. ಅನಿವಾರ್ಯವಿದ್ದಲ್ಲಿ ಬಳಸಲೇಬೇಕಾಗುತ್ತದೆ.

– ಕಾಂಚನಾ, ಕೋರಮಂಗಲ

ಇದಕ್ಕೆಲ್ಲಾ ಪರಿಹಾರ ಎನ್ನುವಂತೆ ಮಾರುಕಟ್ಟೆಯಲ್ಲಿ ಈಗ ‘ಪೀ ಬಡ್ಡಿ’, ‘ಪೀ ಕೋನ್‌’ ಮಾದರಿಯ ಸರಳವಾಗಿ ಶೌಚ ಮಾಡುವ ಸಾಧನಗಳನ್ನು ಮಹಿಳೆಯರಿಗಾಗಿಯೇ ಬಿಡುಗಡೆ ಮಾಡಲಿದೆ. ಇವುಗಳ ಬಳಕೆ ಕೂಡ ಇತ್ತೀಚೆಗೆ ಹೆಚ್ಚುತ್ತಿದೆ. ನಿಂತುಕೊಂಡೇ ಮೂತ್ರವಿಸರ್ಜನೆ ಮಾಡಬಹುದಾದ ಅವಕಾಶವನ್ನು ಇವು ನೀಡಿವೆ. ಮಾಹಿತಿಗೆ peebuddy.in ಅಮೇಜಾನ್‌.ಇನ್‌ಗೆ ಲಾಗಿನ್‌ ಆಗಬಹುದು. ಮರು ಬಳಕೆ ಮಾಡಬಹುದಾದ, ಬಳಸಿ ಬಿಸಾಡಬಹುದಾದ ಹಲವು ಉಪಕರಣಗಳು ಲಭ್ಯ ಇವೆ.

‘ನಿಂತುಕೊಂಡು ಹೇಗಪ್ಪಾ ಮೂತ್ರ ವಿಸರ್ಜಿಸುವುದು’ ಎಂದು ಸಾಂಪ್ರದಾಯಿಕವಾಗಿ ಯೋಚನೆ ಮಾಡುವ ಮಹಿಳೆಯರು ಕೂಡ ಆರೋಗ್ಯದ ದೃಷ್ಟಿಯಲ್ಲಿ ಇದೇ ಸರಿಯಾದ ಕ್ರಮ ಎಂದು ಒಪ್ಪಿಕೊಂಡಿದ್ದಾರೆ. ಇದು ವೈಜ್ವಾನಿಕವಾಗಿಯೂ ‘ಸೇಫ್‌’ ಎಂದು ದೃಢಗೊಂಡಿದೆ’

ಅಪೂರ್ವ ತ್ರಿಪಾಠಿ ‘ಪೀ ಕೋನ್‌’ ಸಂಸ್ಥೆಯ ಮ್ಯಾನೇಜರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT