ನಗರದಲ್ಲಿ ಸೆನ್ ಕಲಾಕೃತಿಗಳ ಪ್ರದರ್ಶನ

7

ನಗರದಲ್ಲಿ ಸೆನ್ ಕಲಾಕೃತಿಗಳ ಪ್ರದರ್ಶನ

Published:
Updated:

ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಕಲಾವಿದ ಸೆನ್ ಶಾಂಬಿತ್. ತನ್ನ ಕಲಾ ಪ್ರತಿಭೆಯಿಂದಲೇ ವಿಶ್ವದೆಲ್ಲೆಡೆ ಜನಪ್ರಿಯರಾಗಿರುವ ಅವರು ಸದ್ಯ ತಮ್ಮ ಕಲಾಕೃತಿಗಳನ್ನು ಬೆಂಗಳೂರಿನಲ್ಲಿ ಆಯೋಜಿಸುತ್ತಿದ್ದಾರೆ.

ಲ್ಯಾವೆಲ್ಲೆ ರಸ್ತೆ ಬಳಿಯ ಗ್ಯಾಲರಿ ಟೈಮ್ ಮತ್ತು ಸ್ಪೇಸ್‌ನಲ್ಲಿ ಸೇನ್ ಅವರ ಕಲಾಕೃತಿಗಳ ಪ್ರದರ್ಶನ ಜ.14ರಿಂದ ಫೆ.6ರ ವರೆಗೆ ನಡೆಯಲಿದೆ. ಪ್ರದರ್ಶನದ ಬಹುತೇಕ ವೇಳೆ ಸೇನ್ ಶಾಂಬಿತ್ ಇರಲಿದ್ದು, ತಮ್ಮ ಕಲಾಕೃತಿಗಳ ಬಗ್ಗೆ ಕಲಾರಸಿಕರಿಗೆ ವಿವರಣೆ ನೀಡಲಿದ್ದಾರೆ. ಬೆಂಗಳೂರಷ್ಟೇ ಅಲ್ಲದೇ ಕೋಲ್ಕತ್ತದ ವಿಶ್ವ ಪ್ರಸಿದ್ಧ ಅಕಾಡೆಮಿ ಆಫ್‌ ಫೈನ್ಸ್ ಆರ್ಟ್ಸ್ ಗ್ಯಾಲರಿಯಲ್ಲೂ ಪ್ರದರ್ಶನ ನೀಡುತ್ತಿದ್ದಾರೆ.

1973ರಿಂದ 2003ರ ವರೆಗೆ ತಮ್ಮ ಕಲೆಯಿಂದಲೇ ಫ್ರಾನ್ಸ್‌ನಲ್ಲಿ ಪ್ರಸಿದ್ಧಿ ಹೊಂದಿದ ಸೇನ್ ಈ ಹಿಂದೆಯೂ ಭಾರತದ ಹಲವೆಡೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದಾರೆ. ಕೋಲ್ಕತ್ತ ಮೂಲದವರು. ತನ್ನ ಶಿಕ್ಷಣದ ಜೊತೆ ಜೊತೆಗೆ ಕಲೆಯ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡವರು. ತಾರುಣ್ಯಕ್ಕೆ ಬರುವ ಮೊದಲೇ ಚಿತ್ರಕಲೆಯನ್ನೇ ವೃತ್ತಿಯಾಗಿಸಿಕೊಳ್ಳಬೇಕು ಎಂದು ದೃಢ ನಿರ್ಧಾರ ಮಾಡಿದವರು.

ಕೋಲ್ಕತ್ತದ ಕಾಲೊನಿಯೊಂದರಲ್ಲಿ ಕಲಾವಿದರು ಹಾಗೂ ಅವರ ಕಲಾಕೃತಿಗಳನ್ನು ನೋಡಿ ಅವರಂತೆಯೇ ಕಲಾವಿದನಾಗಬೇಕೆಂದು ಕನಸು ಕಂಡವರು. ಬಳಿಕ ಕೋಲ್ಕತ್ತದ ಸರ್ಕಾರಿ ಆರ್ಟ್ ಮತ್ತು ಕ್ರಾಫ್ಟ್ ಕಾಲೇಜಿಗೆ ಸೇರಿಕೊಂಡು ಕಲೆಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದರು. ಫ್ರಾನ್ಕೋ ಕಲಾವಿದನಾಗಬೇಕೆಂಬ ತನ್ನ ಕನಸಿನ ಬೆನ್ನೇರಿದ ಅವರು 19ನೇ ವಯಸ್ಸಿನಲ್ಲಿಯೇ ಪ್ಯಾರಿಸ್‌ಗೆ ಹಾರಿದರು.

ಪ್ಯಾರಿಸ್‌ಗೆ ಹೋದ ಪ್ರಾರಂಭದಲ್ಲಿ ಆರ್ಥಿಕ ಸಮಸ್ಯೆಯಿಂದಾಗಿ ಸೇನ್ ಸಾಕಷ್ಟು ತೊಂದರೆ ಎದುರಿಸಿದ್ದರು. ಬಡತನ ಹಾಗೂ ಅಲ್ಲಿನ ಭಾಷೆಸೇನ್ ಅವರನ್ನು ಅಂಜುವಂತೆ ಮಾಡಿತ್ತು. ಅಲ್ಲಿ ಯಾರೊಬ್ಬರ ಪರಿಚಯವೂ ಇಲ್ಲದೇ ಕಲೆಯನ್ನಷ್ಟೇ ನಂಬಿ ದಿನಗಳನ್ನು ದೂಡಿದ ಅವರು ಅಲ್ಲಿ ಕಸ ಗುಡಿಸುವ ಕೆಲಸ ಮಾಡಿದ್ದರಂತೆ. ಕಲಾವಿದರೊಬ್ಬರ ನೆರವಿನಿಂದ ಕನಸನ್ನು ನನಸು ಮಾಡಿಕೊಳ್ಳುವತ್ತ ಮುಖಮಾಡಿದ ಸೇನ್ ವೆಸ್ಟರ್ನ್ ಯುರೋಪಿಯನ್ ಕಲಾಪ್ರಕಾರಕ್ಕೆ ಮನಸೋತ ಅದನ್ನು ಕರಗತ ಮಾಡಿಕೊಂಡು ಹೆಸರು ಮಾಡಿದರು.

ಗೆಸ್ಚರಿಸಂ ಆರ್ಟ್

1994ರಲ್ಲಿ ಇವರು ಗೆಸ್ಚರಿಸಂ ಆರ್ಟ್ ಅನ್ನು ಸೇನ್ ಪ್ರಾರಂಭಿಸಿದರು. ಕುಂಚದ ಮೂಲಕ ತನ್ನ ಕಲ್ಪನೆಯನ್ನು ಬಿಡಿಸುವ ಹಾಗೂ ಮಿತಿ ಇಲ್ಲದೇ ಚಿತ್ರ ಬಿಡಿಸುವುದನ್ನು ಕರಗತ ಮಾಡಿಕೊಂಡರು. ಫ್ರಾನ್ಸ್‌ನಲ್ಲಿ ಸೇನ್ ಅವರ ಗೆಸ್ಚರಿಸಂ ಕಲೆ ಹೆಚ್ಚು ಗುರುತಿಸಿಕೊಂಡಿತು. ಸೇನ್ ಅವರು ಇಂದು ಸಾಕಷ್ಟು ಕಡೆಗಳಲ್ಲಿ ಕಲಾ ಪ್ರದರ್ಶನ ನೀಡಿದ್ದಾರೆ. ಪ್ರತಿಷ್ಠಿತ ಗ್ಯಾಲರಿಗಳಲ್ಲಿ ಪ್ರದರ್ಶನ ನೀಡಿದ ಹೆಮ್ಮೆಯೂ ಅವರಿಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !