ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಸ್ವಾವಲೋಕನಕ್ಕೆ ಉಪಯುಕ್ತ ಕೃತಿ

Last Updated 30 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಭಾಷಾವಾರು ರಾಜ್ಯಗಳ ರಚನೆ ಒಂದೇ ಕಾಲಘಟ್ಟದಲ್ಲಿ ನಡೆದವಾದರೂ ಜನಜೀವನಮಟ್ಟದಲ್ಲಿತೀವ್ರತರವಾದ ವ್ಯತ್ಯಾಸಗಳು ಏಕೆ ಎಂದು ಆಳವಾಗಿ ಚರ್ಚಿಸಿದೆ ಈ ಕೃತಿ.

ಒಂದು ಪ್ರದೇಶದ ಐತಿಹಾಸಿಕ ಸಂಗತಿಗಳು ಬೇರೆ ಬೇರೆಯೇ ಇರಬಹುದು. ಆದರೆ ಪ್ರಸ್ತುತ ರಾಜಕೀಯ ಆಡಳಿತ ಒಂದೇ ಆಗಿದೆ. ಜೀವನಮಟ್ಟದಲ್ಲಿ ಮಾತ್ರ ಗಣನೀಯ ವ್ಯತ್ಯಾಸವಿದೆ. ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಪ್ರಗತಿಯಲ್ಲಿ ದಶಕಗಳ ಅಂತರವನ್ನೇ ಈಗಲೂ ಆ ರಾಜ್ಯಗಳು ಹೊಂದಿವೆ. ಈ ಕೃತಿಯಲ್ಲಿ ದಕ್ಷಿಣ ಭಾರತದ ಎರಡು ರಾಜ್ಯಗಳು (ಕೇರಳ ಮತ್ತು ತಮಿಳುನಾಡು)ಮತ್ತು ಉತ್ತರ ಭಾರತದ ಎರಡು ರಾಜ್ಯಗಳನ್ನು (ಉತ್ತರ ಪ್ರದೇಶ ಮತ್ತು ರಾಜಸ್ಥಾನ) ಅಧ್ಯಯನಕ್ಕಾಗಿ ತೆಗೆದುಕೊಳ್ಳಲಾಗಿದೆ. ಸುಮಾರು 22 ತಿಂಗಳುಗಳ ಕ್ಷೇತ್ರಕಾರ್ಯ, ಸ್ಥಳೀಯ ಜನಸಾಮಾನ್ಯರು ಮತ್ತು ಅಂತರರಾಷ್ಟ್ರೀಯ ಮಟ್ಟದ ವಿದ್ವಾಂಸರ ಜತೆಗೂ ಚರ್ಚಿಸಿ ಬರೆದ ಕೃತಿ ಇದಾಗಿದೆ.

ಕರ್ನಾಟಕದ ಮಟ್ಟಿಗೆ ನೇರ ವಿಷಯಗಳಿಲ್ಲದಿದ್ದರೂ ಅಧ್ಯಯನದಲ್ಲಿ ಉಲ್ಲೇಖಿತ ನಾಲ್ಕು ರಾಜ್ಯಗಳ ಉದಾಹರಣೆ, ಜೀವನಗುಣಮಟ್ಟದ ಮಾದರಿಯನ್ನು ಇಟ್ಟುಕೊಂಡು ಸ್ವಾವಲೋಕನ ಮಾಡಿಕೊಳ್ಳಲು ಅನುಕೂಲ ಕಲ್ಪಿಸುತ್ತದೆ ಈ ಕೃತಿ. ರಾಜ್ಯಶಾಸ್ತ್ರ ಅಧ್ಯಯನಾಸಕ್ತರು, ಸಮಾಜ ಶಾಸ್ತ್ರಜ್ಞರಿಗೆ ಉಪಯುಕ್ತ ಹೊತ್ತಗೆ.

ಕೃತಿ: ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ

ಇಂಗ್ಲಿಷ್‌ ಮೂಲ: ಪ್ರೇರಣಾ ಸಿಂಗ್‌

ಕನ್ನಡಕ್ಕೆ: ಶ್ರುತಿ ಮರುಳಪ್ಪ

ಪ್ರ: ಋತುಮಾನ, ಬೆಂಗಳೂರು

ಸಂ: 9480035877

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT