ಶನಿವಾರ, ಅಕ್ಟೋಬರ್ 24, 2020
28 °C

ಹೆಸರಾಂತ ಕೂಚಿಪುಡಿ ನೃತ್ಯಗಾರ್ತಿ ಶೋಭಾ ನಾಯ್ಡು ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಪದ್ಮಶ್ರೀ ಪುರಸ್ಕೃತ ಕೂಚಿಪುಡಿ ನೃತ್ಯಗಾರ್ತಿ ಶೋಭಾ ನಾಯ್ಡು (64) ಅವರು ಬುಧವಾರ ನಿಧನರಾದರು. 

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಅವರು ಕೊನೆ ಉಸಿರೆಳೆದಿದ್ದಾರೆ.

ನೃತ್ಯ ಸಂಯೋಜಕಿಯಾಗಿದ್ದ ಅವರು ವಿಪ್ರನಾರಾಯಣ, ಕಲ್ಯಾಣ ಶ್ರೀನಿವಾಸಂ ನೃತ್ಯರೂಪಕಗಳಲ್ಲಿ ಮುಖ್ಯ ಪಾತ್ರಧಾರಿಯಾಗಿದ್ದರು. ಸತ್ಯಭಾಮ, ದೇವದೇವಕಿ, ಪದ್ಮಾವತಿ, ಮೋಹಿನಿ, ಸಾಯಿಬಾಬಾ ಮತ್ತು ಪಾರ್ವತಿ ದೇವಿಯಂತಹ ವಿವಿಧ ಪಾತ್ರಗಳಿಗೆ ಅವರು ಜೀವ ತುಂಬಿದ್ದರು.

ಶೋಭಾ ನಾಯ್ಡು ಅವರು ಭಾರತ ಮತ್ತು ವಿದೇಶದ ಹಲವಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ಅಮೆರಿಕ, ಬ್ರಿಟನ್‌ ಸೇರಿದಂತೆ ಇತರೆ ದೇಶಗಳಲ್ಲೂ ಹಲವು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ.

ಕೇಂದ್ರ ಸರ್ಕಾರವು ಶೋಭಾ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ. ಅಲ್ಲದೆ ಆಂಧ್ರಪ್ರದೇಶ ಸರ್ಕಾರ, ಹಲವು ಸಂಘಟನೆಗಳು ಅವರಿಗೆ ಹಲವು ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು