ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಗಾಳಿಗೆ ಉರುಳಿದ ವಿದ್ಯುತ್ ಕಂಬಗಳು

Last Updated 5 ಮೇ 2018, 11:13 IST
ಅಕ್ಷರ ಗಾತ್ರ

ಬಸವಾಪಟ್ಟಣ: ಸುತ್ತಲಿನ ಪ್ರದೇಶದಲ್ಲಿ ಗುರುವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿಗೆ 20ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು, ನಾಲ್ಕು ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳು ನೆಲಕ್ಕೆ ಉರುಳಿದ್ದು, ವಿದ್ಯುತ್‌ ಸರಬರಾಜು ಕಡಿತಗೊಂಡಿದೆ.

ಹಲವು ಗ್ರಾಮಗಳಲ್ಲಿ ಕಟಾವಿಗೆ ಬಂದ ಭತ್ತದ ಬೆಳೆಯೂ ನೆಲಕಚ್ಚಿದ್ದು, ಬಸವಾಪಟ್ಟಣ ಸಮೀಪದ ನಿಲೋಗಲ್‌, ಚಿರಡೋಣಿ, ಬೆಳಲಗೆರೆ, ಕವಳಿತಾಂಡ, ಕತ್ತಲಗೆರೆ ಫಾರಂ, ಕಣಿವೆಬಿಳಚಿ, ಹೊಸಳ್ಳಿ, ಯಲೋದಹಳ್ಳಿಗಳಲ್ಲಿ ವಿದ್ಯುತ್‌ ಕಂಬಗಳು ನೆಲಕ್ಕೆ ಬಿದ್ದಿದ್ದು, ಈ ಗ್ರಾಮಗಳಲ್ಲಿ ವಿದ್ಯುತ್‌ ಕಡಿತಗೊಂಡಿದೆ.

‘ಮುಂಜಾನೆಯಿಂದ ಸಿಬ್ಬಂದಿ ಯೊಂದಿಗೆ ದುರಸ್ತಿ ಕಾರ್ಯ ಕೈಗೊಂಡು, ಎಲ್ಲ ಗ್ರಾಮಗಳಿಗೆ ವಿದ್ಯುತ್‌ ಸರಬರಾಜು ಮಾಡಲಾಗುವುದು‌’ ಎಂದು ಬೆಸ್ಕಾಂ ಶಾಖಾಧಿಕಾರಿ ನಾಗರಾಜನಾಯ್ಕ
ತಿಳಿಸಿದರು.

ಬಸವಾಪಟ್ಟಣ, ಮರಬನಹಳ್ಳಿ, ಕೋಟೆಹಾಳು, ಕಣಿವೆಬಿಳಚಿ, ದಾಗಿನಕಟ್ಟೆ, ಯಲೋದಹಳ್ಳಿ, ಹರನ
ಹಳ್ಳಿ, ರಾಮಸಾಗರ ಸೇರಿದಂತೆ ಭತ್ತದ ಫಸಲು ನೆಕಚ್ಚಿದ್ದರೆ, ಈ ಗ್ರಾಮಗಳಿಗೆ ಸೇರಿದ ಸಾವಿರಾರು ಅಡಿಕೆ ಮರಗಳು ನೆಲಕ್ಕೆ ಬಿದ್ದಿವೆ. ಇದರಿಂದ ಅಪಾರ ನಷ್ಟವಾಗಿದೆ ಎಂದು ರೈತರು ತಿಳಿಸಿದ್ದಾರೆ.

ಚನ್ನಗಿರಿ ವರದಿ:

ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿ ಸುರಿದ ಮಳೆ ಗಾಳಿಗೆ ಪೆನ್ನಸಮುದ್ರ ಗ್ರಾಮದಲ್ಲಿ 5 ಎಕರೆ ಬಾಳೆತೋಟ ನಾಶವಾಗಿದೆ.

ಚನ್ನಗಿರಿ ಪಟ್ಟಣದಲ್ಲಿ 3.9 ಸೆಂ.ಮೀ ಮಳೆ ಬಿದ್ದರೆ, ಉಬ್ರಾಣಿ 36.4 ಮಿ.ಮೀ, ಜೋಳದಹಾಳ್ 24.3, ಕತ್ತಲಗೆರೆ 13.3, ತ್ಯಾವಣಿಗೆ 13.2, ಸಂತೇಬೆನ್ನೂರು 13.2, ಕೆರೆಬಿಳಚಿ 10.4 ಹಾಗೂ ದೇವರಹಳ್ಳಿ ಗ್ರಾಮದಲ್ಲಿ 8.4 ಮಿ.ಮೀ ಮಳೆ ಬಿದ್ದಿದೆ. ಮೂರು ತಿಂಗಳಿಂದ ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಿದ್ದ ರೈತರು ನೆಮ್ಮದಿಯ ನಿಟ್ಟಸಿರು ಬಿಡುವಂತಾಗಿದೆ.

ತಾಲ್ಲೂಕಿನ ಪೆನ್ನಸಮುದ್ರ ಗ್ರಾಮದಲ್ಲಿ ರಭಸವಾಗಿ ಬೀಸಿದ ಗಾಳಿಗೆ ಗ್ರಾಮದ ಮಲ್ಲಿಕಾರ್ಜುನಪ್ಪ ಅವರ ಹೊಲದಲ್ಲಿ ಬೆಳೆದು ನಿಂತು ಫಸಲಿಗೆ ಬಂದಿದ್ದ 5 ಎಕರೆ ಬಾಳೆತೋಟ ಸಂಪೂರ್ಣವಾಗಿ ನೆಲಕಚ್ಚಿ, ₹5 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಚನ್ನಗಿರಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಇರುವ ಕೆರೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆಯ ನೀರು ಹರಿದು ಬಂದಿದೆ. ಮಳೆ ಬಿದ್ದ ಗ್ರಾಮಗಳಲ್ಲಿ ಮುಂಗಾರು ಹಂಗಾಮಿನ ಬೆಳೆಗಳ ಬಿತ್ತನೆ ಕಾರ್ಯಕ್ಕಾಗಿ ಭೂಮಿ ಉಳುಮೆ ಮಾಡಲು ರೈತರು ಸಕಲ ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT