ಇಂದು ರಾಷ್ಟ್ರೀಯ ‘ಮ್ಯಾಂಡೊ ಫೆಸ್ಟ್‌’

ಭಾನುವಾರ, ಮಾರ್ಚ್ 24, 2019
28 °C

ಇಂದು ರಾಷ್ಟ್ರೀಯ ‘ಮ್ಯಾಂಡೊ ಫೆಸ್ಟ್‌’

Published:
Updated:

ಮ್ಯಾಂಡೊಲಿನ್, ಹಲವು ಬಗೆಯ ಸಂಗೀತ ಪದ್ಧತಿಗಳಿಗೆ ಒಗ್ಗುವ ತಂತಿ ವಾದ್ಯ. ಶತಮಾನಗಳಿಂದ ಪಾಶ್ಚಾತ್ಯ ಸಂಗೀತದಲ್ಲಷ್ಟೇ ಬಳಕೆಯಾಗುತ್ತಿದ್ದ ಮ್ಯಾಂಡೊಲಿನ್‌ನ್ನು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೂ ಒಗ್ಗಿಸಿ ಬಳಸಲಾಗುತ್ತಿದೆ. 

ನಮ್ಮ ದೇಶದಲ್ಲಿ ಮ್ಯಾಂಡೊಲಿನ್‌ ವಾದನದಲ್ಲೇ ಹೆಸರು ಮಾಡಿರುವ ಅನೇಕ ವಿದ್ವಾಂಸರಿದ್ದಾರೆ. 2017ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಮ್ಯಾಂಡೊಲಿನ್‌ ಉತ್ಸವ ನಡೆಯಿತು. ಪುಣೆಯಲ್ಲಿ ನಡೆದ ಈ ಉತ್ಸವ, ಮ್ಯಾಂಡೊಲಿನ್‌ನ ಬಹುವಿಧ ಬಳಕೆ ಮತ್ತು ಸಾಧ್ಯತೆಗಳನ್ನು ಪರಿಚಯಿಸಿತು. 2018ರಲ್ಲಿ ಎರಡನೇ ವರ್ಷದ ಉತ್ಸವವೂ ಪುಣೆಯಲ್ಲಿಯೇ ನಡೆಯಿತು. 

ಇದೀಗ ಬೆಂಗಳೂರು, ಅಂತಹುದೊಂದು ಉತ್ಸವಕ್ಕೆ ಸಾಕ್ಷಿಯಾಗಲಿದೆ. ಮಾರ್ಚ್ 9ರ ಶನಿವಾರದಂದು ವೈಯ್ಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಮ್ಯಾಂಡೊ ಫೆಸ್ಟ್‌ ನಡೆಯಲಿದೆ. ರಾಗಶ್ರೀ ಮ್ಯೂಸಿಕ್‌ ಅಕಾಡೆಮಿ ಮತ್ತು ಪ್ರೋತ್ಸಾಹ ಅಕಾಡೆಮಿ ಫಾರ್‌ ವರ್ಲ್ಡ್‌ ಮ್ಯೂಸಿಕ್‌ ಜಂಟಿಯಾಗಿ ಈ ಉತ್ಸವ ಆಯೋಜಿಸಿವೆ. ತಂತಿವಾದ್ಯ ಸಂಗೀತ ಪ್ರಿಯರು ಈ ವಾರಾಂತ್ಯವನ್ನು ದೇಶದ ಮ್ಯಾಂಡೊಲಿನ್‌ ದಿಗ್ಗಜರ ನುಡಿಸಾಣಿಕೆಯೊಂದಿಗೆ ಭರ್ಜರಿ ಖುಷಿಯಾಗಿ ಕಳೆಯಬಹುದು. 

ಉತ್ಸವದಲ್ಲೇನಿದೆ?
ಶನಿವಾರ ಬೆಳಿಗ್ಗೆ 9ಕ್ಕೆ ಮ್ಯೂಸಿಕ್‌ ಲಾಂಜ್‌ ಉದ್ಘಾಟನೆ. 9.30ಕ್ಕೆ ಉತ್ಸವಕ್ಕೆ ಚಾಲನೆ– ಮರಳುಶಿಲ್ಪ ಕಲಾವಿದೆ ಜಾಹ್ನವಿ ಮತ್ತು ಪ್ರಸನ್ನ ಕುಮಾರ್‌ ಅವರ ವಾದ್ಯ ಸಂಗೀತ ಕಛೇರಿ. ಅತಿಥಿ– ಹೈಕೋರ್ಟ್‌ನ ನ್ಯಾಯಮೂರ್ತಿ ಅರವಿಂದ ಕುಮಾರ್‌. ‘ದಿಸ್‌ ಈಸ್‌ ಮ್ಯಾಂಡೊಲಿನ್‌’ ಸಾಕ್ಷ್ಯಚಿತ್ರ ಪ್ರದರ್ಶನ.

‘ದಿ ಇನ್‌ಸ್ಟಿಟ್ಯೂಷನ್‌’ ಕುರಿತು ಪ್ರಸ್ತಾವನೆ ಮತ್ತು ಮುಂಬೈನ ಹಿರಿಯ ಮ್ಯಾಂಡೊಲಿನ್‌ ವಿದ್ವಾಂಸ ಕಿಶೋರ್‌ ದೇಸಾಯಿ ಅವರಿಗೆ ಸನ್ಮಾನ.

ಬೆಳಿಗ್ಗೆ 10.45ಕ್ಕೆ ಮ್ಯಾಂಡೊಲಿನ್‌ ವಿಚಾರ ಸಂಕಿರಣ. ಪ್ರವೀಣ್‌ ದತ್‌ ಸ್ಟೀಫನ್‌ (ಪಾಶ್ಚಾತ್ಯ ಶೈಲಿ), ಸ್ನೇಹಾಶಿಷ್‌ ಮುಜುಂದಾರ್‌ (ಉತ್ತರ ಭಾರತ ಶೈಲಿಯ ಶಾಸ್ತ್ರೀಯ ಸಂಗೀತ), ಪ್ರಸನ್ನ ಕುಮಾರ್‌ (ಮ್ಯಾಂಡೊಲಿನ್‌– ಕರ್ನಾಟಕ ಶಾಸ್ತ್ರೀಯ ಶೈಲಿ),  ಪ್ರದೀಪ್ತೊ ಸೇನ್‌ಗುಪ್ತಾ (ಚಿತ್ರರಂಗದಲ್ಲಿ ಮ್ಯಾಂಡೊಲಿನ್‌), ಎನ್.ಎಸ್. ಪ್ರಸಾದ್ (ದಕ್ಷಿಣ ಭಾರತದಲ್ಲಿ ಮ್ಯಾಂಡೊಲಿನ್‌) ಕುರಿತು ವಿಷಯ ಮಂಡನೆ. 

ಮಧ್ಯಾಹ್ನ 2.30ಕ್ಕೆ ಮಂಜುನಾಥ್‌ ಮತ್ತು ಎಂ.ನಾಗರಾಜ್‌ ಅವರಿಂದ ಉದ್ಘಾಟನೆ. ಅರವಿಂದ ಭಾರ್ಗವ (ಕರ್ನಾಟಕ ಸಂಗೀತ), ಮೃದಂಗ– ವಿನೋದ್‌, ಖಂಜಿರ– ಸುನಾದ್‌, ಮೋರ್ಚಿಂಗ್‌– ಚಿದಾನಂದ.

3.40ಕ್ಕೆ ಸುಧೀರ್‌ ನಾಯಕ್‌ ಅವರಿಂದ ಉದ್ಘಾಟನೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ– ಸ್ನೇಹಾಶಿಷ್‌ ಮುಜುಂದಾರ್‌ ಮತ್ತು ಎನ್.ಎಸ್.ಪ್ರಸಾದ್. ತಬಲಾ ಸಾಥ್‌– ಗುರುಮೂರ್ತಿ ವೈದ್ಯ.

4.45ಕ್ಕೆ ನಡೆಯುವ ‘ಮೂಡ್ಸ್‌ ಆಫ್ ಮ್ಯಾಂಡೊಲಿನ್‌’ ಇಡೀ ಉತ್ಸವದ ಪ್ರಧಾನ ಆಕರ್ಷಣೆಯಾಗಲಿದೆ. ಇದು ಹಲವು ಮ್ಯಾಂಡೊಲಿನ್‌ ವಾದಕರ ಸ್ವರಸಮ್ಮೇಳನ. 

ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ. ಉಪಸ್ಥಿತಿ– ಯದುವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಸಂಗೀತ ನಿರ್ದೇಶಕ ಹಂಸಲೇಖ, ಎಡಿಜಿಪಿ ಭಾಸ್ಕರ ರಾವ್‌. ಸಂಜೆ 6.45ಕ್ಕೆ ‘ನಾಸ್ಟಾಲ್ಜಿಕ್‌ ಮೆಲೊಡೀಸ್‌ ಆಫ್‌ ಇಂಡಿಯನ್‌ ಫಿಲ್ಮ್‌ ಇಂಡಸ್ಟ್ರಿ’ ಕುರಿತು ಪ್ರದೀಪ್ತೊ ಸೇನ್‌ಗುಪ್ತಾ, ಎನ್.ಎಸ್.ಪ್ರಸಾದ್‌, ಪ್ರಸನ್ನ ಕುಮಾರ್‌ ಮತ್ತು ಕೃಷ್ಣಮೂರ್ತಿ ಅವರಿಂದ ಪ್ರಸ್ತುತಿ. ವಾದ್ಯ ಸಹಕಾರ– ಶಬ್ಬೀರ್‌ ಅಹಮದ್‌, ಸಂಗೀತ್‌ ಥಾಮಸ್‌,  ಡಿ.ಶ್ರೀನಿವಾಸ್‌ ಆಚಾರ್‌, ಬಿ. ಸುದರ್ಶನ್‌, ಬಿ. ಗೋಪಿ, ವೇಣುಗೋಪಾಲ್‌ ರಾಜು, ಮಧುಸೂದನ್‌, ಅರುಣ್ ಸುಕುಮಾರ್‌ ಹಾಗೂ  ಬಾಲಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !