ಭಾನುವಾರ, ಸೆಪ್ಟೆಂಬರ್ 27, 2020
24 °C

ಬೇಡ ಮಕ್ಕಳೆ ಬೇಸರ

ಶಾರದಾ ವಿ. ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಬಿಡುವು ಶಾಲೆಗೆ, ರಜೆಯ ಮಜವು

ಗಡುವು ಇರದು ಸಮಯಕೆ

ಬೀಡುಬಿಟ್ಟರೆ ಗೆಳೆಯರೊಂದಿಗೆ

ಬೇಡವೆನುವಿರಿ ಊಟಕೆ

 

ಊರು, ಕೇರಿ, ಜಾತ್ರೆ, ಉತ್ಸವ

ಸೇರಿ ಸುತ್ತಿದ ಸಂಭ್ರಮ

ಮರೆಯಲಾಗದು ನೋಡಿದೆಲ್ಲವ

ಇರಲಿ ನೆನಪಿನ ಸಂಗಮ

 

ರಜೆಯು ಮುಗಿದು, ಶಾಲೆ ತೆರೆಯಲು

ಬೇಡ ಮಕ್ಕಳೆ ಬೇಸರ

ಪ್ರಜೆಗಳೆಲ್ಲರೂ ಪಡೆಯಬೇಕು

ವಿದ್ಯೆ ಜ್ಞಾನಕೆ ಆಗರ

 

ಪ್ರೀತಿಯಿಂದಲಿ ಪಾಠ ಕಲಿಸಲು

ಗುರುಗಳೆಲ್ಲರಿಗಾತುರ

ಮಮತೆ ತೋರುತ, ತಪ್ಪು ತಿದ್ದುತ

ನೀತಿ ಕಲಿಸುವ ಕಾತರ

 

ಆಟ-ಪಾಠವು, ಕುಶಲಕಲೆಗಳು

ಉಂಟು ಗದ್ಯವು, ಪದ್ಯವು

ಇಷ್ಟದಿಂದಲಿ ಕಲಿಯಲೆಲ್ಲವೂ

ಕಷ್ಟವೆಂದಿಗೂ ಅನಿಸದು

 

ಹಂಚಿಕೊಳ್ಳಿರಿ ಗೆಳೆಯರೆಲ್ಲರೂ

ಬಿಚ್ಚಿ ನೆನಪಿನ ಸಂಚಯ

ಇಚ್ಛೆಯಿಂದಲಿ ಓದಿಕೊಳ್ಳಿರಿ

ಮೆಚ್ಚಿಕೊಳುವರು ಮಾಸ್ತರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.