ಶ್ರುತಿಗೆ ವರ್ಷದ ಆರ್‌.ಜೆ. ಗೌರವ

ಬುಧವಾರ, ಜೂನ್ 19, 2019
31 °C

ಶ್ರುತಿಗೆ ವರ್ಷದ ಆರ್‌.ಜೆ. ಗೌರವ

Published:
Updated:
Prajavani

ಇಂಡಿಯಾ ರೇಡಿಯೊ ಪೋರಂ 2019ರಲ್ಲಿ ನಗರದ 92.7 ಬಿಗ್ ಎಫ್‌.ಎಂಯ ಆರ್.ಜೆ. ಶ್ರುತಿ ‘ವರ್ಷದ ಆರ್‌.ಜೆ.’ ಗೌರವಕ್ಕೆ ಪಾತ್ರವಾಗಿದ್ದಾರೆ. 

ಬೆಂಗಳೂರಿನ ಜನಪ್ರಿಯ ‘ಬಿಗ್ ಕಾಫಿ’ ಪ್ರದರ್ಶನಕ್ಕೆ 'ಅತ್ಯುತ್ತಮ ರೇಡಿಯೋ ಷೋ-ಕನ್ನಡ’ದಡಿಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ. ಶ್ರುತಿ ಪ್ರತಿದಿನ ಬೆಳಿಗ್ಗೆ 7ರಿಂದ 11ರವರೆಗೆ ಬಿಗ್ ಕಾಫಿ– ‘ಪಟಾಕಿ ಮಾರ್ನಿಂಗ್ಸ್’ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ.

ಬೆಂಗಳೂರು ರೇಡಿಯೊ ಸ್ಟೇಶನ್, ಡ್ರಿಂಕ್ ಮತ್ತು ಡ್ರೈವ್ ರೇಡಿಯೋ ಟೆಸ್ಟ್ ಪ್ರಚಾರಕ್ಕಾಗಿ 'ಬೆಸ್ಟ್ ರೇಡಿಯೋ ಪ್ರೋಮೋ' ವಿಭಾಗದಲ್ಲಿ ರನ್ನರ್-ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

‘ನಾನು ಐಆರ್‌ಎಫ್ ಅನ್ನು ರೇಡಿಯೋ ಆಸ್ಕರ್ ಎಂದು ಕರೆಯುತ್ತೇನೆ ಮತ್ತು ಅದು ಆಸ್ಕರ್ ಗೆದ್ದಂತ ಖುಷಿ ಕೊಡುತ್ತದೆ. ನಾನು ಎರಡು ಪ್ರಶಸ್ತಿಗಳನ್ನು ಗೆದ್ದಿದ್ದೇನೆ: 'ವರ್ಷದ ಆರ್ ಜೆ’ ಮತ್ತು ಕನ್ನಡ ವಿಭಾಗದಲ್ಲಿ 'ಬಿಗ್ ಕಾಫಿ'ಗಾಗಿ ಅತ್ಯುತ್ತಮ ರೇಡಿಯೊ ಶೋ. ನನ್ನ ಪ್ರಾರ್ಥನೆಗೆ ಮತ್ತೊಮ್ಮೆ ಫಲ ದೊರೆತಂತಾಗಿದೆ’ ಎಂದು ಆರ್‌.ಜೆ. ಶ್ರುತಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !