ನನ್ನ ‘ಪ್ರೇಮ’ ವಿವಾಹ...

7

ನನ್ನ ‘ಪ್ರೇಮ’ ವಿವಾಹ...

Published:
Updated:

ಅದು 1967ರ ಜೂನ್ ತಿಂಗಳು. ನನಗಾಗ ವಯಸ್ಸು 28. ಬೆಂಗಳೂರಿನಲ್ಲಿ ವಕೀಲನಾಗಿದ್ದೆ. ನನ್ನ ತಂದೆ ಕೋಲಾರ ಜಿಲ್ಲಾಧಿಕಾರಿಗಳ ಸಹಾಯಕ ಸ್ಥಳೀಯ ಅಧಿಕಾರಿಯಾಗಿದ್ದರು. ಆ ಸಮಯದಲ್ಲಿ ಅಲ್ಲಿನ ಜ್ಯೋತಿಷಿಗಳು ಬರುವ ವರ್ಷದಲ್ಲಿ ವಿವಾಹಕ್ಕೆ ಯೋಗ್ಯವಾದ ತಿಥಿ, ನಕ್ಷತ್ರ, ಗಣ ಯಾವುದೂ ಫಲಪ್ರದವಾಗಿಲ್ಲ ಎಂದು ಘೋಷಿಸಿದ್ದರು. ನಮ್ಮ ದೊಡ್ಡಪ್ಪನವರಿಗೆ ಜ್ಯೋತಿಷದಲ್ಲಿ ನಂಬಿಕೆ ಇದ್ದುದ್ದರಿಂದ ನನಗೆ ಆ ವರ್ಷದಲ್ಲೇ ಮದುವೆ ಮಾಡಿಸಬೇಕೆಂಬ ತರಾತುರಿ ಹೊಂದಿದರು.

ಅವರೇ ತೀ. ನರಸಿಪುರದಲ್ಲಿ ಹುಡುಗಿ ಇರುವ ವಿಷಯ ತಿಳಿದು, ನನ್ನನ್ನು ಮತ್ತು ನಮ್ಮ ತಾಯಿ ಅವರನ್ನೂ ಬೆಂಗಳೂರಿನಲ್ಲಿರುವ ಹುಡುಗಿಯ ಸಂಬಂಧಿಕರ ಮನೆಗೆ ಹುಡುಗಿ ನೋಡಲು ಕರೆದುಕೊಂಡು ಹೋದರು. ತಂದೆ–ತಾಯಿ ಇಲ್ಲದ ಹುಡುಗಿ, ಮನ ಕಲಕುವಂಥ ಪರಿಸ್ಥಿತಿ. ಆಕೆಯ ಸಹೋದರರೇ ಅವಳ ಮದುವೆಯನ್ನು ನೆರವೇರಿಸಬೇಕು. ಈ ಪರಿಸ್ಥಿತಿ ಅರಿತ ನಮ್ಮ ದೊಡ್ಡಪ್ಪನವರು ನನ್ನ ಮತ್ತು ನನ್ನ ತಂದೆ–ತಾಯಿಯ ಒಪ್ಪಿಗೆ ಕೇಳದೇ, ನೇರವಾಗಿ  ಹುಡುಗಿಯರ ಸಹೋದರರಿಗೆ ‘ನಮಗೆ ಹುಡುಗಿ ಒಪ್ಪಿಗೆ ಆಗಿದೆ’ ಎಂದರು.

ಜೂನ್‌ 24ರಂದು ರಂಜಾನ್ ರಜೆ ಇದ್ದುದ್ದರಿಂದ ನನ್ನ ತಂದೆ–ತಾಯಿಯನ್ನು ದೊಡ್ಡಪ್ಪನವರೇ ಹುಡುಗಿ ಮನೆಗೆ ಕರೆದುಕೊಂಡು ಹೋಗಿ ವಿವಾಹ ನಿಶ್ಚಯಿಸಿಕೊಂಡೇ ಬಂದುಬಿಟ್ಟರು. ಮರುದಿನವೇ ಅಂದರೆ ಜೂನ್ 25ಕ್ಕೇ ನಿಶ್ಚಿತಾರ್ಥವೂ ಆಯಿತು. ಅದಾಗಿ ಒಂದು ವಾರದೊಳಗೆ ಅಂದರೆ ಜುಲೈ 2, 1967ರ ಭಾನುವಾರ ನಮ್ಮಿಬ್ಬರ ಮದುವೆಯಾಯಿತು. ನಾನು ಮತ್ತು ನನ್ನಾಕೆ ಪ್ರೇಮಾ 48 ವರ್ಷ 8 ತಿಂಗಳ ಕಾಲ ಅನ್ಯೋನ್ಯವಾಗಿ ವೈವಾಹಿಕ ಜೀವನ ಸವಿದೆವು. ಈಗ ಮದುವೆ ಮಾಡಿಸಿದವರು, ನನ್ನ ತಂದೆ–ತಾಯಿ ಹಾಗೂ ನನ್ನಾಕೆಯೂ ಇಲ್ಲ. ಆದರೆ, ದಾಂಪತ್ಯದ ಮಧುರ ನೆನಪು ನನ್ನನ್ನು ಕಾಪಿಟ್ಟಿದೆ. ಇಳಿವಯಸ್ಸಿನಲ್ಲಿ ನನ್ನ ಹೆಣ್ಣುಮಕ್ಕಳು, ಅಳಿಯಂದಿರು ಮತ್ತು ಮೊಮ್ಮಕ್ಕಳೇ ನನಗೀಗ ಆಸರೆ.
– ಬಿ.ಎಸ್‌. ಜೈಪರಮೇಶ್ವರ್, ನಿವೃತ್ತ ಜಿಲ್ಲಾ ನ್ಯಾಯಾಧೀಶ, ಮಲ್ಲೇಶ್ವರಂ, ಬೆಂಗಳೂರು

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !