ಚನ್ನಪಟ್ಟಣ: ಅಂಗವಿಲರನ್ನು ಸ್ವಾವಲಂಬಿಗಳನ್ನಾಗಿಸಲು ಶ್ರಮಿಸುತ್ತಿರುವ ಎಪಿಡಿ ಸ್ವಯಂ ಸೇವಾಸಂಸ್ಥೆ ನಗರದ ಬಾಲಕರ ಉರ್ದು ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ವಾರದ ಬಿದಿರು ಕರಕುಶಲ ಕೈಗಾರಿಕೆ ತರಬೇತಿ ಏರ್ಪಡಿಸಿತ್ತು.ವೃತ್ತಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿರುವ, ಬಿದಿರು ಕಲೆ ಪರಿಣಿತ ಗಣಪತಿ ರಾಜು ಬಿದಿರಿನಲ್ಲಿ ವಿವಿಧ ನಮೂನೆಯ ವಸ್ತುಗಳನ್ನು ತಯಾರಿಸುವ ಬಗ್ಗೆ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.

ಸಮಾಜ ಹಾಗೂ ಸಮುದಾಯ ಮತ್ತು ಪೋಷಕರು ಅಂಗವಿಕಲರನ್ನು ಕೆಲಸಕ್ಕೆ ಬಾರದವರು ಹಾಗೂ ಅಸಮರ್ಥರು ಎಂಬಂತೆ ಕಡೆಗಣಿಸಿದೆ. ಅವರ ಭಾವನೆಗಳನ್ನು ಅರ್ಥೈಸಿಕೊಳ್ಳದೆ ಅವಕಾಶ ವಂಚಿತರನ್ನಾಗಿಸುತ್ತಿರುವ ಹಿನ್ನೆಲೆಯಲ್ಲಿ ಅಂಗವಿಕಲರಲ್ಲಿ ಜೀವನೋತ್ಸಾಹ ತುಂಬಲು ಸಂಸ್ಥೆ ವಿವಿಧ ರೀತಿಯ ತರಬೇತಿ, ವ್ಯಾಸಂಗ, ಚಿಕಿತ್ಸೆಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿದೆ ಎಂದು ಎಪಿಡಿ ಸಂಸ್ಥೆಯ ಅಭಿವೃದ್ಧಿ ಅಧಿಕಾರಿಗಳಾದ ಡಿ.ಎನ್.ಶಾಮಣ್ಣ, ನೂರುಲ್ಲಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.