ಸೋಮವಾರ, ಮಾರ್ಚ್ 8, 2021
29 °C
ಇರುಳಿಗರ ಕಾಲೋನಿ ಬೆಂಕಿ ಅವಘಡ

ಅಂಗವಿಕಲರಿಗೆ ಶಾಲೆಯೇ ಆಶ್ರಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಗವಿಕಲರಿಗೆ ಶಾಲೆಯೇ ಆಶ್ರಯ

ರಾಮನಗರ: ರಾಮದೇವರ ಬೆಟ್ಟ ತಪ್ಪಲಿನ ಇರುಳಿಗರ ಕಾಲೊನಿಯಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮೂವರು ಅಂಗವಿಕಲರ ಗುಡಿಸಲುಗಳೂ ಭಸ್ಮವಾಗಿವೆ. ಈಗ ಈ ಅಂಗವಿಕಲ ಕುಟುಂಬದವರಿಗೆ ಪಕ್ಕದಲ್ಲೇ ಇರುವ ಸರ್ಕಾರಿ ಶಾಲಾ ಕಟ್ಟಡವೇ ಆಶ್ರಯ ತಾಣವಾಗಿದೆ.ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಸಿ.ರಾಜಣ್ಣ ಅರ್ಜಿ ನೀಡಿದರೆ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರಾದರೂ ಯಾವುದೇ ತಾತ್ಕಾಲಿಕ ಆಶ್ರಯ ಇಲ್ಲದಂತಾಗಿದೆ.ಮಾಸಾಶನ ಮರೀಚಿಕೆ: ಗಿರಿಜಮ್ಮ, ಶ್ರೀಕಾಂತ ಮತ್ತು ಸುಮಾ ಎಂಬ ಹೆಸರಿನ ಈ ಮೂವರೂ ಅಂಗವಿಕಲರು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆ ಸೌಲಭ್ಯ ವಂಚಿತರೂ ಆಗಿದ್ದಾರೆ. ಹೀಗಾಗಿ ಇವರ ಪಾಲಿಗೆ ಅಂಗವಿಕಲರ ಮಾಸಾಶನ ಸೌಲಭ್ಯ ಇನ್ನೂ ಮರೀಚಿಕೆ ಆಗಿಯೇ ಉಳಿದಿದೆ.  ಇವರೆಲ್ಲಾ ಕೂಲಿ ಕೆಲಸವನ್ನೇ ಆಶ್ರಯಿಸಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.ಬಾಲ್ಯದಲ್ಲೇ ಪೋಲಿಯೊದಿಂದ ಅಂಗವಿಕಲರಾದ ಈ ಮೂವರೂ ಮಾಸಾಶನಕ್ಕಾಗಿ 4 ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿದ್ದಾರಾದರೂ ಇವರ ಕಡತಗಳಿಗೆ ಈತನಕ ಮುಕ್ತಿ ಸಿಕ್ಕಿಲ್ಲ.ಗಣತಿಯಲ್ಲೂ ಗಮನಿಸಿಲ್ಲ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಜನಗಣತಿ, ಆರ್ಥಿಕ ಗಣತಿಯಂತಹ ಸಂದರ್ಭದಲ್ಲಿಯೂ ಈ ಅಂಗವಿಕಲರನ್ನು ಗುರುತಿಸಿಲ್ಲ.   ಈ ಅಂಗವಿಕಲರಿಗೆ ಏಕೆ ಮಾಸಾಶನ ಮಂಜೂರಾಗಿಲ್ಲ ಎಂದು ಸ್ಥಳೀಯ ಹರೀಸಂದ್ರ ಗ್ರಾಮಪಂಚಾಯಿತಿ ಅಧಿಕಾರಿಗಳನ್ನು ವಿಚಾರಿಸಿದರೆ, ’ಅವರಿಂದ ಅರ್ಜಿಯೇ ಸಲ್ಲಿಕೆಯಾಗಿಲ್ಲ. ಹಾಗಾಗಿ ಸವಲತ್ತು ಸಿಕ್ಕಿಲ್ಲ’ ಎಂಬ  ಪ್ರತಿಕ್ರಿಯೆ ದೊರೆಯುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.