ಅಂಟಾರ್ಕ್ಟಿಕಾದಲ್ಲಿ 15 ವಿಭಿನ್ನ ಪ್ರದೇಶ
ಸಿಡ್ನಿ (ಐಎಎನ್ಎಸ್): ಇದೇ ಮೊದಲ ಬಾರಿಗೆ ಅಂಟಾರ್ಕ್ಟಿಕಾ ಮತ್ತು ಅದರ ಸುತ್ತಲಿನ ಸಾಗರ ವಲಯದಲ್ಲಿ 15 ವಿಭಿನ್ನ ಜೀವ ಭೌಗೋಳಿಕ ಪ್ರದೇಶಗಳನ್ನು ಗುರುತಿಸಿರುವುದಾಗಿ ಆಸ್ಟ್ರೇಲಿಯಾ ವಿಜ್ಞಾನಿಗಳು ತಿಳಿಸಿದ್ದಾರೆ.
ಇಲ್ಲಿಯವರೆಗೆ ಅಂಟಾರ್ಕ್ಟಿಕಾವನ್ನು ಕೇವಲ ಎರಡು ವಲಯಗಳಲ್ಲಿ ಮಾತ್ರ ವಿಂಗಡಿಸಲಾಗಿತ್ತು.
ಈ ಪ್ರದೇಶದಲ್ಲಿ ದೀರ್ಘ ಸಂಶೋಧನೆ ನಡೆಸಿದ ವಿಜ್ಞಾನಿಗಳು ಲಭ್ಯವಿರುವ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡ ನಂತರ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಹೇಳಿದ್ದಾರೆ.
ಭೌಗೋಳಿಕ ಲಕ್ಷಣ, ಭೂಮಿಯ ಒಡಲಾಳ, ಹವಾಮಾನ, ಸಸ್ಯ ಹಾಗೂ ಪ್ರಾಣಿ ಸಂಕುಲ, ಸೂಕ್ಷಾಣು ಜೀವಿಗಳ ಕುರಿತು ಒಟ್ಟು 38 ಸಾವಿರ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಜೀವ ವೈವಿಧ್ಯಗಳ ಆಧಾರದ ಮೇಲೆ ಅತ್ಯಂತ ಶಿಸ್ತುಬದ್ಧವಾಗಿ ಈ ಪ್ರದೇಶವನ್ನು 15 ಪ್ರದೇಶಗಳನ್ನಾಗಿ ವಿಂಗಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.