ಮುಂಬೈ (ಪಿಟಿಐ): ನಗದು ಚಲಾವಣೆ ಮತ್ತು ಚೆಕ್ ಬಳಕೆ ಮಾಡಲು, ಕಾಗದ ರಹಿತ ವಹಿವಾಟು ಉತ್ತೇಜಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗರಿಷ್ಠ ರೂ10 ಸಾವಿರದವರೆಗಿನ `ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್~(ಎನ್ಇಎಫ್ಟಿ)ಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ತಗ್ಗಿಸಿದೆ.

ಆಗಸ್ಟ್ 1ರಿಂದ ಹೊಸ ದರ ಜಾರಿಗೆ ಬರಲಿದ್ದು, ಗ್ರಾಹಕರು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಅಂತರ್ಜಾಲ(ನೆಟ್ ಬ್ಯಾಂಕಿಂಗ್) ಮೂಲಕ ವರ್ಗಾಯಿಸುವ ಹಣ ರೂ10 ಸಾವಿರಕ್ಕಿಂತ ಕಡಿಮೆ ಇದ್ದರೆ ಪ್ರತಿ ಬಾರಿಯ ವಹಿವಾಟಿಗೆ ಕೇವಲ ರೂ2.50 ಶುಲ್ಕ ಪಾವತಿಸಬೇಕು ಎಂದು `ಆರ್ಬಿಐ~ ಸೂಚಿಸಿದೆ.
ಈವರೆಗೆ ರೂ1 ಲಕ್ಷದವರೆಗಿನ `ಎನ್ಇಎಫ್ಟಿ~ ವಹಿವಾಟಿಗೆ ರೂ5 ಶುಲ್ಕವಿದ್ದಿತು.

ಹಾಗಾಗಿ ರೂ1ಸಾವಿರ ವನ್ನು ವರ್ಗಾಯಿಸಬೇಕೆಂದರೂ ರೂ5 ಶುಲ್ಕ ಪಾವತಿಸಬೇಕಿದ್ದಿತು. ಈಗ ರೂ10 ಸಾವಿರಕ್ಕೆ ಮೇಲ್ಪಟ್ಟು ರೂ1 ಲಕ್ಷದವರೆಗಿನ ಹಣ ವರ್ಗಾವಣೆಗೆ ರೂ5 ಹಾಗೂ ರೂ2 ಲಕ್ಷದೊಳಗಿನ ಪ್ರತಿ ವಹಿವಾಟಿಗೆ ರೂ15 ಮತ್ತು ರೂ2 ಲಕ್ಷ ಮೇಲ್ಪಟ್ಟ ವರ್ಗಾವಣೆಗೆ ರೂ25 ಶುಲ್ಕ ಪಾವತಿಸಬೇಕಿದೆ.

ಶುಲ್ಕ ಕಡಿತದ ಬಗ್ಗೆ ಎಲ್ಲ ಬ್ಯಾಂಕ್ಗಳೂ ತಮ್ಮ ಗ್ರಾಹಕರಲ್ಲಿ ಹೆಚ್ಚಿನ ಅರಿವು ಮೂಡಿಸಿ `ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್~ಗೆ ಪ್ರೋತ್ಸಾಹಿಸಬೇಕು ಎಂದು ಆರ್ಬಿಐ ನಿರ್ದೇಶನ ನೀಡಿದೆ.`ಎನ್ಇಎಫ್ಟಿ~ ವಹಿವಾಟು ಶುಲ್ಕ ತಗ್ಗಿಸಬೇಕು ಎಂದು ಮಾಜಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ `ಆರ್ಬಿಐ~ಗೆ ಈ ಮೊದಲೇ ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.