ಭಾನುವಾರ, ಮೇ 16, 2021
26 °C

ಅಂತರ್ಜಾಲ: ವೇಗದ ಸಂಪರ್ಕಕ್ಕೆ ನ್ಯಾನೊ ಮಾರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ:  ಎವೆಯಿಕ್ಕುವಷ್ಟರಲ್ಲಿ ಅಂತರ್ಜಾಲದ (ಇಂಟೆರ್‌ನೆಟ್) ಪುಟಗಳು ಪಟಪಟನೆ ತೆರೆದುಕೊಳ್ಳ ಬೇಕು ಎಂಬುದು ಸೈಬರ್ ಬಳಕೆದಾರರ ಆಕಾಂಕ್ಷೆ ಮತ್ತು ನಿರೀಕ್ಷೆ. ಇಂತಹ ನಿರೀಕ್ಷೆಯನ್ನು ತಣಿಸಲು ಬೆಂಗಳೂರಿನ ಭೌತ ವಿಜ್ಞಾನಿಗಳು ಪ್ರಯತ್ನ ನಡೆಸುತ್ತಿದ್ದಾರೆ. `ಶುದ್ಧ ವಿಜ್ಞಾನ~ ಸಂಶೋಧಕರ ಈ ಪ್ರಯತ್ನ ಕೈಗೊಡಿದರೆ ಇನ್ನು ಕೆಲವೇ ವರ್ಷಗಳಲ್ಲಿ ಸೈಬರ್ ಬಳಕೆದಾರರ ಆಕಾಂಕ್ಷೆಯೂ ನನಸಾಗಲಿದೆ. 

 

ಸದ್ಯ ಅಂತರ್ಜಾಲ ತೆರೆದುಕೊಳ್ಳಲು ಅಗತ್ಯವಾದ ದತ್ತಾಂಶಗಳು ಅತ್ಯಂತ ನಂಬಕೆಯಸ್ಥ ಆಪ್ಟಿಕಲ್ ಫೈಬರ್ ಕೇಬಲ್‌ಗಳ (ಒಎಫ್‌ಸಿ) ಮೂಲಕ ಹರಿದಾಡುತ್ತಿವೆ.ಈ ದತ್ತಾಂಶ ವಾಹಕ ಒಎಫ್‌ಸಿಯನ್ನು ಭವಿಷ್ಯದಲ್ಲಿ ಮತ್ತಷ್ಟು ಸದೃಢಗೊಳಿಸಲು ಭೌತ ವಿಜ್ಞಾನಗಳು ಸಂಶೋಧನೆ ನಡೆಸುತ್ತಿದ್ದಾರೆ. ಇದಕ್ಕಾಗಿ `ಫೊಟೊನಿಕ್ ಕ್ರಿಸ್ಟಲ್ಸ್~ ಎಂಬ ಘನದ ಉತ್ಕೃಷ್ಟ ತಳಿಯನ್ನು ಅನ್ವೇಷಿಸುತ್ತಿದ್ದಾರೆ.ಈ ಹೊಸ ಮಾರ್ಗವು ಅಂತರ್ಜಾಲದ ಮೂಲ ದ್ರವ್ಯವಾದ ದತ್ತಾಂಶದ ಕೇಂದ್ರವಾಗಲಿದೆ. ಇದರಿಂದ ಅಂತರ್ಜಾಲದ ಪುಟಗಳು ಪಟಪಟನೆ ತೆರೆದುಕೊಳ್ಳುತ್ತವೆ ಎಂಬುದು ಭೌತ ವಿಜ್ಞಾನಗಳ ಅಭಿಪ್ರಾಯ.

ಗಾಜಿನ ಸಣ್ಣ ಸಣ್ಣ ತುಣುಕುಗಳಿಂದ ಸಿದ್ಧಗೊಂಡಿರುವ ಒಎಫ್‌ಸಿ ಡಿಜಿಟಲ್ ಜಗತ್ತಿನ ನರನಾಡಿಯಾಗಿದೆ.ಈ ಒಎಫ್‌ಸಿಗಳು ಹಳೇ ತಾಮ್ರದ ತಂತಿಗಳನ್ನು ಬದಲಿಸಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ಆಯಾಮವನ್ನೇ ನೀಡಿವೆ. ಆದರೆ, ಸದಾ ಬದಲಾವಣೆಗೆ ತುಡಿಯುವ ವಿಜ್ಞಾನಿಗಳು ಹೊಸ ತಲೆಮಾರಿಗೆ ಸುಧಾರಿತ ತಂತ್ರಜ್ಞಾನ ನೀಡಬಹುದೇ? ಎಂಬ ಕಾತರದಲ್ಲೇ ಇರುತ್ತಾರೆ. ಇದರ ಪರಿಣಾಮವೇ `ಫೊಟೊನಿಕ್ ಕ್ರಿಸ್ಟಲ್ಸ್~.ಈ `ಫೊಟೊನಿಕ್ ಕ್ರಿಸ್ಟಲ್ಸ್~ ಎಂಬುದು `ನ್ಯಾನೊ~ ಸಾಮಗ್ರಿಗಳ ಘನ. ಇದು ಬೆಳಕಿನ ಪ್ರತಿಫಲನ ನಿಯಮದಂತೆ ಕಾರ್ಯ ನಿರ್ವಹಿಸುತ್ತದೆ. ಘನದ ಉತ್ಕೃಷ್ಟ ತಳಿಯನ್ನು  ಸಿದ್ಧಪಡಿಸಿ, ಹೊಸ ತಲೆಮಾರಿಗೆ ಸುಧಾರಿತ ತಂತ್ರಜ್ಞಾನವನ್ನು ತಾವೇ ಮೊದಲು ನೀಡಬೇಕು ಎಂಬ ಅದಮ್ಯ ಬಯಕೆಯಿಂದ ವಿಜ್ಞಾನಿಗಳು ಪ್ರಯೋಗಾಲಯದೆಡೆಗೆ ಮುಖಮಾಡಿದ್ದಾರೆ.ಇಂತಹ ಒಂದು ತಂಡ ನಮ್ಮ ಬೆಂಗಳೂರಿನ `ಭಾರತೀಯ ವಿಜ್ಞಾನ ಸಂಸ್ಥೆ~ಯ (ಐಐಎಸ್) ರಾಮನ್ ಸಂಶೋಧನಾ ಕೇಂದ್ರದಲ್ಲಿ ಅವರಿತ ಶ್ರಮಿಸುತ್ತಿದೆ. ಇದಕ್ಕೆ ಆಸ್ಟ್ರೇಲಿಯಾ ವಿಜ್ಞಾನ ಅಕಾಡೆಮಿಯ ಸಹಕಾರ ಕೂಡ ಇದೆ. ದೇಶ ಮತ್ತು ವಿದೇಶದ ವಿಜ್ಞಾನಿಗಳ ಈ ತಂಡವು, ಈ ``ಫೊಟೊನಿಕ್ ಕ್ರಿಸ್ಟಲ್ಸ್~ ಘನದ ಉತ್ಕೃಷ್ಟ ತಳಿಯನ್ನು ತಯಾರಿಸುವ ಮಾರ್ಗವನ್ನು `ಡಿಎನ್‌ಎ ಅಣು~ (ಅತೀ ಸಣ್ಣ ಕಣ) ಬಳಸಿಕೊಂಡು ಕಂಡುಹಿಡಿದಿದೆ. ಈ ಭೌತವಿಜ್ಞಾನಿಗಳ ಪ್ರಯೋಗವು `ರಾಷ್ಟ್ರೀಯ ವಿಜ್ಞಾನ ಅಕಾಡೆಮಿ~ಯ ವಾರ್ತಾಪತ್ರದಲ್ಲಿ ಸೋಮವಾರ ಪ್ರಕಟಗೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.