ಸೋಮವಾರ, ಮೇ 23, 2022
28 °C

ಅಂತರ ವಿವಿ ಮಹಿಳಾ ಟೆನಿಸ್ ಟೂರ್ನಿ: ಕ್ವಾರ್ಟರ್ ಫೈನಲ್‌ಗೆ ಮೈಸೂರು ವಿವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮೈಸೂರು ವಿವಿ, ಬೆಂಗಳೂರಿನ ಜೈನ್ ವಿವಿ, ಆತಿಥೇಯ ವಿಟಿಯು ಹಾಗೂ ಕಟ್ಟಂಕುಲತ್ತೂರ್ ತಂಡಗಳು ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ `ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಮಹಿಳಾ ಟೆನಿಸ್ ಟೂರ್ನಿ~ಯ ಕ್ವಾರ್ಟರ್ ಫೈನಲ್ ತಲುಪಿದವು.

ಗುರುವಾರ ನಡೆದ ಪಂದ್ಯದಲ್ಲಿ ಮೈಸೂರು ವಿವಿ, 2-1 ಅಂತರದಲ್ಲಿ ಅನಂತಪುರದ ಜೆಎನ್‌ಟಿ ವಿವಿಯನ್ನು ಹಾಗೂ ಬೆಂಗಳೂರಿನ ಜೈನ್ ವಿವಿ, 2-0 ಅಂತರದಲ್ಲಿ ವಿಜಯವಾಡದ ಡಾ. ಎನ್‌ಟಿಆರ್ ವಿವಿಯನ್ನು  ಮಣಿಸಿತು.

ಕಟ್ಟಂಕುಲತ್ತೂರ್ ಎಸ್‌ಆರ್‌ಎಂ ವಿವಿ, 2-0 ಅಂತರದಲ್ಲಿ ಚನ್ನೈನ ಅಣ್ಣಾ ವಿವಿ ತಂಡವನ್ನು ಮಣಿಸಿತು. ವಾಕ್‌ಓವರ್ ಮೂಲಕ ವಿಟಿಯು ಕ್ವಾರ್ಟರ್ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿತು. ಬೆಳಿಗ್ಗೆ ನಡೆದ ಎರಡನೇ ಸುತ್ತಿನ ಪಂದ್ಯಗಳಲ್ಲಿ ಮೈಸೂರು ವಿವಿ 2-0 ಅಂತರದಲ್ಲಿ ತಮಿಳುನಾಡಿನ ಅಳಗಪ್ಪ ವಿವಿಯನ್ನು, ಅನಂತಪುರದ ಜೆಎನ್‌ಟಿ ವಿವಿ, ತಿರುಚ್ಚಿಯ ಅಣ್ಣಾ ವಿವಿಯನ್ನು (2-0) ಹಾಗೂ ಬೆಂಗಳೂರಿನ ಜೈನ ವಿವಿ ಕೊಯಮತ್ತೂರಿನ ಅಣ್ಣಾ ತಾಂತ್ರಿಕ ವಿವಿಯನ್ನು (2-0) ಮಣಿಸಿದವು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.