ಶನಿವಾರ, ಮೇ 21, 2022
28 °C

ಅಂಧರ ಸಂಖ್ಯೆ ಹೆಚ್ಚಳ ಆತಂಕಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಗತ್ತಿನ ಜನಸಂಖ್ಯೆ ಹೆಚ್ಚುತ್ತಿರುವಂತೆಯೇ ವಿವಿಧ ಕಾರಣಗಳಿಂದ ಅಂಧತ್ವಕ್ಕೆ ಗುರಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜಗತ್ತಿನಾದ್ಯಂತ ಸುಮಾರು 284 ದಶಲಕ್ಷ ಜನರು  ಅಂಧತ್ವದಿಂದ ಬಳಲುತ್ತಿದ್ದಾರೆ ಎಂದು ಬಸವ ಜ್ಯೋತಿ ನೇತ್ರಾಲಯದ ವೈದ್ಯ ಡಾ.ರಾಜಶೇಖರ ಪಾಟೀಲ ಕಳವಳ ವ್ಯಕ್ತಪಡಿಸಿದರು.ನಗರದ ಬಸವಜ್ಯೋತಿ ನೇತ್ರಾಲಯ ಮತ್ತು ಧನುಷ್ ಶಿಕ್ಷಣ ಸಂಸ್ಥೆಯ ಎ.ವಿ. ನರ್ಸಿಂಗ್ ಕಾಲೇಜಿನ   ಆಶ್ರಯದಲ್ಲಿ ಗುರುವಾರ  `ವಿಶ್ವ ದೃಷ್ಟಿ ದಿನ~ ಅಂಗವಾಗಿ  ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಅಂಧತ್ವಕ್ಕೆ ಕಣ್ಣಿನ ಪೊರೆಯಲ್ಲದೇ, ಕರಿಗುಡ್ಡೆಯ ತೊಂದರೆಗಳು, ಮಧುಮೇಹದಿಂದುಂಟಾಗುವ ಅಕ್ಷಿಪಟಲದ ತೊಂದರೆ, ಮೆಳ್ಳಗಣ್ಣು ಮತ್ತು ಅವಧಿ ಮುನ್ನ ಜನಿಸಿದ ನವಜಾತ ಶಿಶುಗಳ ಕಣ್ಣಿನ ತೊಂದರೆಯಿಂದ ಅಂಧತ್ವ ಉಂಟಾಗುತ್ತದೆ ಎಂದು ಹೇಳಿದರು.

 

ಬಸವೇಶ್ವರ ವೃತ್ತದಿಂದ ಜಾಥಾ ಆರಂಭವಾಗಿ ವಲ್ಲಭಭಾಯಿ ವೃತ್ತದ ಮೂಲಕ ಹಳೇ ಐ.ಬಿ. ರಸ್ತೆಯ ಮುಖಾಂತರ  ಬಸವಜ್ಯೋತಿ ನೇತ್ರಾಲಯಕ್ಕೆ ಆಗಮಿಸಿತು.  ಎ.ವಿ. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರಕಾಶ ಹಾಲವರ, ಪರಶುರಾಮ ಸಂಗಮ, ಸಂತೋಷ ಕೋರಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.