ಮಂಗಳವಾರ, ಜೂನ್ 22, 2021
27 °C

ಅಂಬರೀಷ್‌: ಸಂಸದೆ ರಮ್ಯಾ ಹೇಳಿಕೆ ಚರ್ಚೆಗೆ ಗ್ರಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್‌ ಅವರ ಆರೋಗ್ಯ ಹಾಗೂ ರಾಜಕೀಯ ಪ್ರವೇಶದ ಬಗೆಗೆ ಸಂಸದೆ ರಮ್ಯಾ ಅವರ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸ ಒದಗಿಸಿದೆ.ಮಂಡ್ಯ ತಾಲ್ಲೂಕಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಅಂಬರೀಷ್‌ ಅವರ ದೇಹದಿಂದ 12 ಲೀಟರ್ ನೀರು ತೆಗೆಯಲಾಗಿದೆ. ಇನ್ನೂ 10 ಲೀಟರ್‌ ತೆಗೆಯಬೇಕಿದೆ ಎಂದಿದ್ದರು. ಹಾಗೆಯೇ ಕೆ.ಆರ್‌. ಪೇಟೆಯಲ್ಲಿ ನಡೆದ ಸಂವಾದದಲ್ಲಿ ಅಂಬರೀಷ್‌ ಅವರನ್ನು ರಾಜಕೀಯಕ್ಕೆ ಕರೆ ತಂದವರೇ ನನ್ನ ಸಾಕು ತಂದೆ ದಿ.ಆರ್‌್.ಟಿ. ನಾರಾಯಣ್‌ ಎಂದು ಹೇಳಿದ್ದರು.ಈ ಹೇಳಿಕೆಗಳು, ಈಗ ಅಂಬರೀಷ್‌ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳಲ್ಲಿ ಆಕ್ರೋಶವನ್ನುಂಟು ಮಾಡಿವೆ.

ಅಂಬರೀಷ್‌ ಅವರ ದೇಹದಿಂದ ನೀರನ್ನು ಹೊರ ತೆಗೆಯಲಾಗಿದೆ ಎಂದು ವೈದ್ಯರೇ ಹೇಳಿಲ್ಲ. ಅಂತಹದರಲ್ಲಿ ಇಂತಹ ಹೇಳಿಕೆ ನೀಡಲು ರಮ್ಯಾ ಅವರೇನು ವೈದ್ಯರೇ? ಏಕೆ ಹೀಗೆ ಹೇಳಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಕಾಂಗ್ರೆಸ್‌್ ಮುಖಂಡ ಅಮರಾವತಿ ಚಂದ್ರಶೇಖರ್‌್.ಅಂಬರೀಷ್‌ ಅವರ ಆರೋಗ್ಯದ ಬಗೆಗೆ ಜನರು ಆತಂಕದಲ್ಲಿ ಇರುವಾಗ ಈ ರೀತಿಯ ಹೇಳಿಕೆಗಳನ್ನು ಜವಾಬ್ದಾರಿ ಸ್ಥಾನದಲ್ಲಿ ಇರುವವರು ನೀಡಬಾರದು. ವೈದ್ಯರೇ ಅವರ ಹೇಳಿಕೆಗಳನ್ನು ಅಲ್ಲಗಳೆದಿದ್ದಾರೆ. ಅದಾದ ಮೇಲಾದರೂ, ಅವರು ಸ್ಪಷ್ಟೀಕರಣವನ್ನು ನೀಡಬಹುದಿತ್ತು ಎನ್ನುತ್ತಾರೆ ಅಂಬರೀಷ್‌್ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೇಲೂರು ಸೋಮಶೇಖರ್‌್.ಅಂಬರೀಷ್‌ ಅವರನ್ನು ರಾಜಕೀಯಕ್ಕೆ ಕರೆ ತಂದವರೇ ನನ್ನ ಸಾಕು ತಂದೆ ಅಂಬರೀಷ್‌ ಎಂದು ಹೇಳಿರುವುದಕ್ಕೂ ಆಕ್ರೋಶ ವ್ಯಕ್ತವಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.