ಸೋಮವಾರ, ಏಪ್ರಿಲ್ 19, 2021
29 °C

ಅಂಬೇಡ್ಕರ್, ಬಾಬೂಜಿ ದೇಶದ ಆಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಆಧುನಿಕ ಭಾರತದ ನಿರ್ಮಾಪಕರಲ್ಲಿ ಒಬ್ಬರಾದ ಡಾ. ಬಾಬು ಜಗಜೀವನರಾಂ ಅವರ ಬದುಕು ಹಾಗೂ ಬರಹದ ಕುರಿತು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಹಿತ್ಯ ರಚನೆ ಆಗಬೇಕು ಎಂದು ರಾಜ್ಯಸಭೆ ಸದಸ್ಯ ಕೆ.ಬಿ. ಶಾಣಪ್ಪ ಸಲಹೆ ನೀಡಿದರು.ಗುಲ್ಬರ್ಗ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಮಹಾತ್ಮಗಾಂಧಿ ಸಭಾಂಗಣದಲ್ಲಿ ಬುಧವಾರ ಜರುಗಿದ ಡಾ. ಬಾಬು ಜಗಜೀವನರಾಂ ಅವರ 104ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 

ಶೋಷಿತ ಜನಾಂಗದ ಪರವಾಗಿ ಹೋರಾಡಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಡಾ.ಬಾಬೂಜಿ ಅವರನ್ನು ವಿರೋಧಿ ನೆಲೆಯಲ್ಲಿ ನೋಡುವುದು ತಪ್ಪು. ಈ ಇಬ್ಬರು ಮಹನೀಯರು ಕೇವಲ ಶೋಷಿತ ಜನಾಂಗದ ಆಸ್ತಿಯಾಗಿರದೇ, ಇಡೀ ದೇಶದ ಆಸ್ತಿಯಾಗಿದ್ದಾರೆ ಎಂದರು.

 

ಜಗಜೀವನರಾಮ್ ಜೀವನ ಸಾಧನೆ ಕುರಿತು ಪ್ರೊ. ಜೋಗನ್ ಶಂಕರ, ನವಭಾರತ ನಿರ್ಮಾಣದಲ್ಲಿ ಬಾಬೂಜಿ ಪಾತ್ರ ಕುರಿತು ಪ್ರೊ. ಎಸ್. ಚಂದ್ರಶೇಖರ ವಿಶೇಷ ಉಪನ್ಯಾಸ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.