ಕೆಜಿಎಫ್:  ಅಕ್ಕಸಾಲಿಗರ ಮೇಲೆ ವೃತ್ತಿ ತೆರಿಗೆ ವಿಧಿಸುತ್ತಿರುವುದನ್ನು ಖಂಡಿಸಿ ನೂರಾರು ಅಕ್ಕಸಾಲಿಗರು ವಾಣಿಜ್ಯ ತೆರಿಗೆ ಅಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಅಕ್ಕಸಾಲಿಗರಿಗೆ ಸೇರಿದ 360 ಅಂಗಡಿಗಳಿಗೆ ವೃತ್ತಿ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ದಾಖಲೆಗಳನ್ನು ನೀಡುವಂತೆ ನೋಟಿಸ್ ಜಾರಿಗೊಳಿಸಲಾಗಿದೆ. ಈಗಾಗಲೇ ಕೂಲಿ ಮಾಡುವ ವೃತ್ತಿಗೆ ಸೇರಿದ ಅಕ್ಕಸಾಲಿಗರು ವರ್ಷಕ್ಕೆ 2,500 ರೂಪಾಯಿ ಪಾವತಿ ಮಾಡುವುದು ಕಷ್ಟವಾಗಿದೆ. ಅಲ್ಲದೆ ದಾಖಲೆ ಸಲ್ಲಿಸಲು ಗಡುವು ನೀಡಿ ಎಚ್ಚರಿಕೆ ನೀಡಲಾಗಿದೆ ಎಂದು ಅಕ್ಕಸಾಲಿಗರು ಆಕ್ರೋಶ ವ್ಯಕ್ತಪಡಿಸಿದರು.

ವೃತ್ತಿ ತೆರಿಗೆ ಕಚೇರಿ ಬಳಿ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಮನವಿ ಪತ್ರಕ್ಕೆ ಸಹಿ ಹಾಕಿ, ತೆರಿಗೆ ವಿಧಿಸುವ ಕ್ರಮ ಅವೈಜ್ಞಾನಿಕ ಎಂದು ಆರೋಪಿಸಿದರು.

ಜೀವನೋಪಾಯವೇ ಕಷ್ಟವಾಗಿರುವ ದಿನಗಳಲ್ಲಿ ಈಗ ಏಕಾಏಕಿ ನೋಟಿಸ್ ನೀಡಿರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ವೃತ್ತಿ ತೆರಿಗೆ ವಿಧಿಸುವ ಕ್ರಮವನ್ನು ಹಿಂಪಡೆಯಬೇಕು. ಅಕ್ಕಸಾಲಿಗರು ಅತಿ ಕಡಿಮೆ ಆದಾಯ ತರುವಂಥ ವೃತ್ತಿಯಲ್ಲಿ ತೊಡಗಿದ್ದಾರೆ. ಅವರ ಆದಾಯದ ಪ್ರಮಾಣ ನೋಡಿ ವೃತ್ತಿ ತೆರಿಗೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಂತರ ವಾಣಿಜ್ಯ ತೆರಿಗೆ ಅಧಿಕಾರಿ ಅಶೋಕ್ ಜಟ್ಟನವರ್ ಮಾತನಾಡಿ, ಸರ್ಕಾರಿ ಆದೇಶದ ಪ್ರಕಾರ ನಾವು ನೋಟಿಸ್ ನೀಡಿದ್ದೇವೆ. ಅಕ್ಕಸಾಲಿಗರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.