ಶುಕ್ರವಾರ, ಜನವರಿ 24, 2020
28 °C

ಅಕ್ಕಿ ಉತ್ಪಾದನೆ ಇಳಿಕೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಚಂಡಮಾರು­ತದಿಂದ ಆಗಿರುವ ಬೆಳೆ­ ಹಾನಿಯಿಂದಾಗಿ ಭಾರತದ ಅಕ್ಕಿ ಉತ್ಪಾದನೆ 2013–14ನೇ ಸಾಲಿನಲ್ಲಿ 10.30 ಕೋಟಿ ಟನ್‌ ಗಳಿಗೆ ಇಳಿಕೆ ಕಾಣಬಹುದು, ಇದರಿಂದ ರಫ್ತು ಕೂಡ 1 ಕೋಟಿ ಟನ್‌ಗಳಿಗಿಂತ ಕಡಿಮೆ ಇರಲಿದೆ ಎಂದು ಅಮೆರಿಕದ ಕೃಷಿ ಇಲಾಖೆಯ (ಯುಎಸ್‌ಡಿಎ) ಇತ್ತೀ ಚಿನ ವರದಿ ಹೇಳಿದೆ.ಭತ್ತ ಕಟಾವಿಗೆ ಬಂದ ಸಂದರ್ಭದಲ್ಲಿ ಭಾರಿ ಮಳೆ ಆಗಿರುವುದರಿಂದ ಒಟ್ಟಾರೆ ಉತ್ಪಾದನೆ ಗಣನೀಯವಾಗಿ ಕುಸಿ­ಯುವ ಸಾಧ್ಯತೆ ಇದೆ. ಚಂಡಮಾರು­ತದಿಂದ ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿ ಆಗಿದೆ ಎಂದು ‘ಯುಎಸ್‌ಡಿಎ’ ಹೇಳಿದೆ.2011–12ನೇ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ 10.53 ಕೋಟಿ ಟನ್‌­ಅಕ್ಕಿ ಉತ್ಪಾದನೆ ಆಗಿತ್ತು. 2012–13ರಲ್ಲಿ ಇದು ಅಲ್ಪ ಕುಸಿತ ಕಂಡು 10.44 ಕೋಟಿ ಟನ್‌ಗಳಿಗೆ ಇಳಿದಿತ್ತು.

ಪ್ರತಿಕ್ರಿಯಿಸಿ (+)