ಶುಕ್ರವಾರ, ಮೇ 7, 2021
25 °C

ಅಕ್ಕಿ ವೈವಿದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಕಿಯ ಒತ್ತು ಶಾವಿಗೆ

ಬೇಕಾಗುವ ಸಾಮಗ್ರಿಗಳು: 3 ಕಪ್ ಅಕ್ಕಿ, 1 ಕಪ್ ಅವಲಕ್ಕಿ, ರುಚಿಗೆ ತಕ್ಕಷ್ಟು ಉಪ್ಪು, 4 ಲೀಟರ್ ನೀರು.ಮಾಡುವ ವಿಧಾನ: 4 ಲೀಟರ್ ನೀರಿನಲ್ಲಿ ಅಕ್ಕಿಯನ್ನು ಚೆನ್ನಾಗಿ ತೊಳೆದು ಹಿಂದಿನ ದಿವಸ ರಾತ್ರಿ ಅಕ್ಕಿ ನೆನಸಬೇಕು. ಮರು ದಿವಸ ಬೆಳಿಗ್ಗೆ 1 ಕಪ್ ಅವಲಕ್ಕಿ ಹಾಕಿ ಅಕ್ಕಿಯ ಜೊತೆ ನುಣ್ಣಗೆ ರುಬ್ಬಬೇಕು. ಆಮೇಲೆ ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಬೇಕು. ಅರ್ಧ ಚಮಚ ಉಪ್ಪು ಹಾಕಿ ಒಲೆಯ ಮೇಲೆ ಇಟ್ಟು ಹಿಟ್ಟನ್ನು ಕಾಯಿಸಬೇಕು. ಕೈಗೆ ಹಿಡಿಯದಂತೆ ಚೆನ್ನಾಗಿ ತೊಳೆಸಬೇಕು. ಹಿಟ್ಟು ಮುದ್ದೆಯಾದ ನಂತರ ಇಳಿಸಬೇಕು. ಆ ಮೇಲೆ ಹಿಟ್ಟು ತಣಿದ ನಂತರ ಉಂಡೆ ಕಟ್ಟಬೇಕು. ಬೇಯಿಸಿದ ಒಂದೊಂದು ಉಂಡೆಯನ್ನು ಶಾವಿಗೆ ಒರಳಿಗೆ ಹಾಕಿ ಒತ್ತಬೇಕು. ಜನೀವಾರದ ತರಹ ಎಳೆ ಎೆಯಾಗಿ ಶಾವಿಗೆ ಬರುತ್ತದೆ. ಶಾವಿಗೆಗೆ ಕಾಯಿಹಾಲು ಹಾಕಿಕೊಂಡು ತಿನ್ನಬೇಕು.ಕಾಯಿಹಾಲು ಮಾಡುವ ವಿಧಾನ: ತೆಂಗಿನಕಾಯಿ ತುರಿ 1 ಬಟ್ಟಲು, ಏಲಕ್ಕಿ 2, ಲವಂಗ 1, ಬೆಲ್ಲ 1 ಉಂಡೆ ಸಣ್ಣದು, 1 ಕಪ್ ಸಕ್ಕರೆ, ನೀರು 2 ಕಪ್. ತೆಂಗಿನಕಾಯಿ ತುರಿ ಜೊತೆಯಲ್ಲಿ ಏಲಕ್ಕಿ, ಲವಂಗ, ಸಕ್ಕರೆ, ನೀರು ಹಾಕಿ ನುಣ್ಣಗೆ ರುಬ್ಬಬೇಕು. ರುಬ್ಬಿದ ಹಾಲನ್ನು ಸೋಸಬೇಕು. ಸೋಸಿದ ಹಾಲಿಗೆ ಉಂಡೆ ಬೆಲ್ಲ ಹಾಕಿ ಕದಡಬೇಕು.ದಪ್ಪ ಅಕ್ಕಿಯ ಸಿಹಿ ಶಾವಿಗೆ

ಬೇಕಾಗುವ ಸಾಮಗ್ರಿಗಳು: 2 ಕಪ್ ಅಕ್ಕಿ. ಅರ್ಧ ಕಪ್ ಅವಲಕ್ಕಿ, ಬಾಳೆಹಣ್ಣು 2, ಏಲಕ್ಕಿ 2, ಡಬ್ಬಿ ಬೆಲ್ಲ 2 ಕಪ್, 1 ಚಮಚ ಉಪ್ಪು, ನೀರು 3 ಲೀಟರ್.|ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ಆಮೇಲೆ ಪುನಃ ನೀರು ಹಾಕಿ ಅಕ್ಕಿಯನ್ನು ಎಂಟು ತಾಸು ನೆನಸಬೇಕು. ನೆನೆಸಿಟ್ಟ ಅಕ್ಕಿಯ ಜೊತೆ ಏಲಕ್ಕಿ, ಬಾಳೆಹಣ್ಣು, ಉಪ್ಪು, ಬೆಲ್ಲ, ನೀರು ಹಾಕಿ ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಬೇಕು. ರುಬ್ಬಿಟ್ಟ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಒಲೆಯ ಮೇಲೆ ಇಟ್ಟು ತೊಳೆಸಬೇಕು. ಹಿಟ್ಟು ಗಟ್ಟಿಯಾದ ನಂತರ ಕೆಳಗೆ ಇಳಿಸಬೇಕು. ಹಿಟ್ಟು ತಣಿದ ನಂತರ ಉಂಡೆಕಟ್ಟಿ ಉಗಿಯಲ್ಲಿ 5 ನಿಮಿಷ ಬೇಯಿಸಬೇಕು. ಇದು ಎಳೆ ಎಳೆಯಾಗಿ ಬರುತ್ತದೆ. ಸಿಹಿ ಶಾವಿಗೆಗೆ ತುಪ್ಪ ಹಾಕಿಕೊಂಡು ತಿನ್ನಬೇಕು.ಎಲೆ ಹೋಳಿಗೆ

ಬೇಕಾಗುವ ಪದಾರ್ಥಗಳು: 1 ಕಪ್ ಗೋಧಿ ಹಿಟ್ಟು, ಶುಂಠಿ ತುರಿ ಸ್ವಲ್ಪ, ಹಸಿಮೆಣಸು 2, ಬೇವಿನಸೊಪ್ಪು 1 ಎಸಳು, ನೀರು 2 ಬಟ್ಟಲು, ಉಪ್ಪು 1 ಸ್ಪೂನ್, ಜೀರಿಗೆ ಪುಡಿ ಅರ್ಧ ಸ್ಪೂನ್.ಮಾಡುವ ವಿಧಾನ: 2 ಬಟ್ಟಲು ನೀರಿಗೆ 1 ಕಪ್ ಗೋಧಿ ಹಿಟ್ಟು, ಶುಂಠಿ ತುರಿ, ಹಸಿಮೆಣಸು, ಬೇವಿನಸೊಪ್ಪು, ಜೀರಿಗೆ, ಉಪ್ಪು ಹಾಕಿ ಹಿಟ್ಟನ್ನು ಗಂಟು ಇಲ್ಲದಂತೆ ಚೆನ್ನಾಗಿ ಕಲಸಬೇಕು. ಇಡ್ಲಿ ಹಿಟ್ಟಿನಷ್ಟು ದಪ್ಪ ಇರಬೇಕು. ಆಮೇಲೆ ಒಂದು ಬಾಳೆ ಎಲೆಯ ಮೇಲೆ 1 ಚಮಚ ಎಣ್ಣೆ ಹಚ್ಚಿ. ಎಣ್ಣೆ ಹಚ್ಚಿದ ಬಾಳೆ ಎಲೆಗೆ 1 ಪುಟ್ಟ ಹಿಟ್ಟನ್ನು ಹಾಕಿ ತೆಳ್ಳಗೆ ಹಚ್ಚಿ. ಇನ್ನೊಂದು ಬಾಳೆ ಎಲೆಯನ್ನು ಇದರ ಮೇಲೆ ಮುಚ್ಚಿ ಕಾವಲಿಯ ಮೇಲೆ ಕೆಂಪು ಬಣ್ಣ ಬರುವವರೆಗೆ ಬೇಯಿಸಿ. ಎಲೆ ಹೋಳಿಗೆಗೆ ಬೆಣ್ಣೆ ಹಚ್ಚಿಕೊಂಡು ತಿಂದರೆ ಬಲು ರುಚಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.