ಮಂಗಳವಾರ, ಏಪ್ರಿಲ್ 13, 2021
31 °C

ಅಕ್ರಮ ಕಟ್ಟಡ- ಸಾರ್ವಜನಿಕರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀರೂರು: ಪಟ್ಟಣದ ಲಿಂಗದಹಳ್ಳಿ ರಸ್ತೆಯಲ್ಲಿ ಪುರಸಭೆಗೆ ಸೇರಿದ ಜಾಗ ವನ್ನು ಅತಿಕ್ರಮಿಸಿ ಖಾಸಗಿ ವ್ಯಕ್ತಿಗಳು ಕಟ್ಟಡ ನಿರ್ಮಿಸುತ್ತಿದ್ದರೂ ಪುರಸಭೆ  ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವ ಜನಿಕರು ಆರೋಪಿಸಿದ್ದಾರೆ.ಲಿಂಗದಹಳ್ಳಿ ರಸ್ತೆ ಜಿಲ್ಲಾ ಮುಖ್ಯ ರಸ್ತೆಯಾಗಿದ್ದು, ಪಟ್ಟಣದಲ್ಲಿ ನಿವೇಶ ನಗಳ ಬೆಲೆ ಮುಗಿಲು ಮುಟ್ಟುತ್ತಿದೆ. ಈ ಸಂದರ್ಭದಲ್ಲಿ ಪುರಸಭೆಗೆ ಸೇರಿದ 17/30 ನಿವೇಶನವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿ ಕಟ್ಟಡ ನಿರ್ಮಿಸು ತ್ತಿದ್ದಾರೆ ಎಂದು ಸ್ಥಳೀ ಯರು ಆರೋಪಿಸಿದ್ದಾರೆ.

 

ಪುರಸಭೆ ಜಾಗ ವನ್ನು ಅತಿಕ್ರಮಿಸಿದವರಿಗೆ ಪರವಾನಗಿ ಹೇಗೆ ನೀಡಲಾಯಿತು? ಪ್ರಮುಖ ರಸ್ತೆ ಪಕ್ಕ ದಲ್ಲೇ ಆಳಕ್ಕೆ ಗುಂಡಿ ತೋಡಿ ಅಂಡರ್‌ಗ್ರೌಂಡ್‌ನಲ್ಲಿ ಕಟ್ಟಡ ನಿರ್ಮಿಸುವವರಿಗೆ ನಗರ ಯೋಜನಾ ಇಲಾಖೆ ಅನುಮತಿ ದೊರೆತಿದ್ದು ಹೇಗೆ?  ಪುರಸಭೆ ಅಧಿಕಾರಿ ಗಳು ಇತ್ತ ಗಮನ ಹರಿಸದೆ ಇರುವು ದನ್ನು ನೋಡಿದರೆ ಪುರಸಭೆಯ ಸದಸ್ಯರು ಮತ್ತು ಸಿಬ್ಬಂದಿ ಈ ಅಕ್ರಮದಲ್ಲಿ ಪಾಲುದಾರರೇ? ಎಂಬ ಸಂಶಯ ಮೂಡುತ್ತಿದೆ ಎಂದು ಸಾರ್ವಜನಿಕರು ದೂರುತ್ತಾರೆ. ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಓಂಕಾರಮೂರ್ತಿ, ಈ ಸ್ಥಳದಲ್ಲಿ ಈಗಾಗಲೇ ಕಾಮಗಾರಿ ತಡೆ ಹಿಡಿದಿದ್ದು, ಕಟ್ಟಡ ನಿರ್ಮಾಣಕ್ಕೆ ಪರ ವಾನಗಿ ನೀಡಿಲ್ಲ. ಈ ಸ್ಥಳದಲ್ಲಿ ಪುರಸಭೆ ವತಿಯಿಂದ ಕಟ್ಟಡ ನಿರ್ಮಿಸ ಲಾಗು ವುದು ಎಂದು ಸ್ಪಷ್ಟ ಪಡಿಸಿದರು. ಪುರ ಸಭೆ ತನ್ನ ನಿಲುವಿಗೆ ಅಂಟಿಕೊಂಡು ಇಲ್ಲಿ ಕಟ್ಟಡ ನಿರ್ಮಿಸುವುದೇ ಎಂಬು ವು ದನ್ನು ಕಾದು ನೋಡಬೇಕಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.