ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತರು ದಾಖಲು ಮಾಡಿದ್ದ ಪ್ರಥಮ ಮಾಹಿತಿ ವರದಿಯನ್ನು (ಎಫ್ಐಆರ್) ರದ್ದು ಮಾಡಿ ಹೈಕೋರ್ಟ್ ಬುಧವಾರ ಆದೇಶಿಸಿದೆ.

ಇದೇ ಆರೋಪಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ರಾಜ್ಯಪಾಲರು ಕಳೆದ ಆಗಸ್ಟ್ 8ರಂದು ನೀಡಿದ್ದ ಅನುಮತಿ, ಆ ಅನುಮತಿ ಅನ್ವಯ ಅದೇ 22ರಂದು ದಾಖಲಾದ ದೂರು ಹಾಗೂ ಅಕ್ರಮಕ್ಕೆ ಸಂಬಂಧಿಸಿದಂತೆ ವರದಿಯ 22ನೇ ಅಧ್ಯಾಯದಲ್ಲಿ ಉಲ್ಲೇಖಿಸಲಾದ ಅಂಶಗಳನ್ನೂ ರದ್ದು ಮಾಡಿ ನ್ಯಾಯಮೂರ್ತಿಗಳಾದ ಕೆ.ಭಕ್ತವತ್ಸಲ ಹಾಗೂ ಕೆ.ಗೋವಿಂದರಾಜುಲು ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.

`ಯಡಿಯೂರಪ್ಪ ಅಕ್ರಮ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಲೋಕಾಯುಕ್ತ ಪೊಲೀಸರು ವಿಫಲರಾಗಿದ್ದಾರೆ. ತಮ್ಮ ವಾದಕ್ಕೆ ಪುಷ್ಟಿ ನೀಡುವ ಸೂಕ್ತ ದಾಖಲೆಗಳನ್ನೂ ಅವರ ಪರ ವಕೀಲರು ಒದಗಿಸಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿ ಇರುವ ಒಬ್ಬ ವ್ಯಕ್ತಿಯ ಘನತೆಗೆ ಕೇವಲ ಊಹೆಯ ಆಧಾರದ ಮೇಲೆ ಧಕ್ಕೆ ತರುವುದು ಉಚಿತವಲ್ಲ~ ಎಂದು ಪೀಠವು 55 ಪುಟಗಳ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

2007-2010ರ ಅವಧಿಯಲ್ಲಿ ಯಡಿಯೂರಪ್ಪ ಅಕ್ರಮ ಎಸಗಿದ್ದಾರೆ ಎಂದು ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆ ಅವರು ನೀಡಿರುವ ವರದಿಯಲ್ಲಿ ಉಲ್ಲೇಖಗೊಂಡಿತ್ತು. ಸೌತ್-ವೆಸ್ಟ್ ಮೈನಿಂಗ್, ವಿಜಯನಗರ ಮಿನರಲ್ಸ್, ಜೆ.ಎಸ್.ಡಬ್ಲ್ಯು ಸ್ಟೀಲ್ಸ್ ಸೇರಿದಂತೆ ಕೆಲವು ಕಂಪೆನಿಗಳಿಗೆ ಅನುಕೂಲ ಮಾಡಿಕೊಟ್ಟ ಆರೋಪ ಇವರ ಮೇಲಿತ್ತು. ಅಲ್ಲದೇ ತಮ್ಮ ಸಂಬಂಧಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅವರು ಅಕ್ರಮ ಎಸಗಿದ್ದಾರೆ ಎಂದೂ ವರದಿಯಲ್ಲಿ ತಿಳಿಸಲಾಗಿತ್ತು. ಅದನ್ನು ಯಡಿಯೂರಪ್ಪ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು.

ಕೋರ್ಟ್ ಹೇಳಿದ್ದೇನು?
`ಮೇಲೆ ತಿಳಿಸಿರುವ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೋ ಅಥವಾ ಪ್ರೇರಣಾ ಟ್ರಸ್ಟ್ ಮೂಲಕ ತಮ್ಮ ಪುತ್ರರು, ಸಂಬಂಧಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೋ ಯಡಿಯೂರಪ್ಪ ಅಕ್ರಮ ಎಸಗಿದ್ದಾರೆ ಎಂಬ ಬಗ್ಗೆ ವರದಿಯಲ್ಲಿ ಸ್ಪಷ್ಟವಾಗಿ ಚಿತ್ರಣಗೊಂಡಿಲ್ಲ.

ಈ ಬಗ್ಗೆ ವರದಿ ಸಲ್ಲಿಸಿರುವ ನ್ಯಾ.ಹೆಗ್ಡೆ ಅವರಿಗೇ ಸಂದೇಹ ಇದ್ದಂತಿದೆ. ಆರೋಪಿಗಳ ವಿರುದ್ಧವಾಗಿ ನೀಡುವ ದಾಖಲೆಗಳ ಆಧಾರದ ಮೇಲಷ್ಟೇ ನ್ಯಾಯಾಲಯಗಳು ತೀರ್ಪು ನೀಡಬೇಕಾಗುತ್ತದೆ~ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ.

`ಈ ವಿಚಾರದಲ್ಲಿ ಸಹಜ ನ್ಯಾಯದ ಪಾಲನೆ ಆಗಿಲ್ಲ. ಲೋಕಾಯುಕ್ತ ತನಿಖೆಯ ವ್ಯಾಪ್ತಿಯು ಅರೆ ನ್ಯಾಯಾಂಗ ಅಧಿಕಾರವನ್ನು ಮಾತ್ರ ಹೊಂದಿದೆ. ಇಂತಹ ಸಂದರ್ಭದಲ್ಲಿ ಸಹಜ ನ್ಯಾಯವನ್ನು ಕಾಪಾಡಬೇಕಾದುದು ತನಿಖಾ ಸಂಸ್ಥೆಯ ಕರ್ತವ್ಯ. ಆದುದರಿಂದ ದೂರು ದಾಖಲಾದ ತಕ್ಷಣ ಸಂಬಂಧಿಸಿದ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಬೇಕು. ದೂರಿನ ಪ್ರತಿಯನ್ನು ಅವರಿಗೆ ನೀಡಬೇಕು. ತಮ್ಮ ವಿರುದ್ಧ ದಾಖಲಾಗಿರುವ ದೂರಿಗೆ ಸಂಬಂಧಿಸಿದಂತೆ ಆರೋಪಿಯ ಅಹವಾಲು ಆಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು. ಇದನ್ನು `ಎನ್.ಗುಂಡಪ್ಪ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ~ ತೀರ್ಪಿನಲ್ಲಿ ಹೈಕೋರ್ಟ್ ಸ್ಪಷ್ಟಡಿಸಿದೆ. ಆದರೆ ಇಲ್ಲಿ ಸಹಜ ನ್ಯಾಯದ ಪಾಲನೆ ಆಗಿಲ್ಲ.

ಮಾನ್ಯವಾಗದ ವಾದ: `ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸುವಂತೆ ಯಡಿಯೂರಪ್ಪನವರಿಗೆ ತಾವು ಸೂಚಿಸಿಲ್ಲ. ಆದುದರಿಂದ ಅವರ ಅಹವಾಲು ಆಲಿಸಬೇಕೆಂದೇನೂ ಇಲ್ಲ ಎನ್ನುವುದು ಲೋಕಾಯುಕ್ತರ ವಾದವಾಗಿತ್ತು. ಆದರೆ ಈ ವಾದ ಸರಿಯಲ್ಲ. ಅಕ್ರಮ ಗಣಿಗಾರಿಕೆ ಕುರಿತಾಗಿ ಮಾಧ್ಯಮಗಳಲ್ಲಿ ವರದಿ ಬಹಿರಂಗಗೊಂಡಾಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು.

ವರದಿಯಿಂದ ರಾಜಕೀಯದಲ್ಲಿ ಅಲ್ಲೋಲಕಲ್ಲೋಲವಾಗಿ ರಾಜೀನಾಮೆ ನೀಡುವಂತಾಯಿತು. `ಅಷ್ಟೇ ಅಲ್ಲದೇ, ಮೇಲೆ ತಿಳಿಸಿರುವ ಮೂರು ಕಂಪೆನಿಗಳಿಗೆ 2007ರ ಸೆಪ್ಟೆಂಬರ್ನಲ್ಲಿ ಗಣಿಗಾರಿಕೆಗೆ ಅಕ್ರಮವಾಗಿ ಅನುಮತಿ ನೀಡಲಾಗಿತ್ತು ಎನ್ನುವ ಆರೋಪ ಯಡಿಯೂರಪ್ಪನವರ ಮೇಲಿದೆ. ಆದರೆ ಆ ಸಂದರ್ಭದಲ್ಲಿ ಯಡಿಯೂರಪ್ಪ ಗಣಿ ಇಲಾಖೆಯ ಸಚಿವರೂ ಆಗಿರಲಿಲ್ಲ, ಅಥವಾ ಮುಖ್ಯಮಂತ್ರಿಯೂ ಆಗಿರಲಿಲ್ಲ. ಗಣಿ ಕಾಯ್ದೆಯ 22 (2) ಅಡಿ ಗಣಿಗಾರಿಕೆಗೆ ಅನುಮತಿ ನೀಡುವ ಅಧಿಕಾರ ಕೇಂದ್ರ ಸರ್ಕಾರದ್ದು ಎಂದೂ ಇಲ್ಲಿ ಹೇಳಬೇಕಾಗುತ್ತದೆ. ಆದುದರಿಂದ ವಿನಾಕಾರಣ ಆರೋಪ ಮಾಡಿದ್ದು ಸರಿಯಲ್ಲ~ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಮೇಲ್ಮನವಿಗೆ ನಿರ್ಧಾರ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ದಾಖಲಿಸಿದ್ದ ಎಫ್ಐಆರ್ ಅನ್ನು ರದ್ದು ಮಾಡಿರುವ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ಲೋಕಾಯುಕ್ತ ಪೊಲೀಸರು ನಿರ್ಧರಿಸಿದ್ದಾರೆ.

ಯಾವ ಕಾರಣಗಳ ಮೇಲೆ ಹೈಕೋರ್ಟ್ ಎಫ್ಐಆರ್ ಅನ್ನು ರದ್ದುಪಡಿಸಿದೆ ಎಂಬ ಕುರಿತು ಅಧ್ಯಯನ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳೊಂದಿಗೆ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

`ಗೌರವ ಶಾಶ್ವತ~
ಮನುಷ್ಯನಿಗೆ ಗೌರವ ಮುಖ್ಯ. ಒಬ್ಬ ಮನುಷ್ಯ ತನ್ನ ಜೀವನ ಪೂರ್ತಿ ಗೌರವದಿಂದ ಬಾಳಲು ಇಷ್ಟಪಡುತ್ತಾನೆ. ಅದಕ್ಕಾಗಿ ಬದುಕಿನ ಉದ್ದಕ್ಕೂ ಸಂಘರ್ಷ ನಡೆಸುತ್ತಾನೆ. ವ್ಯಕ್ತಿಗೆ ಹುದ್ದೆ ಶಾಶ್ವತ ಅಲ್ಲ. ಆದರೆ ಗೌರವ ಶಾಶ್ವತ. ಸಂವಿಧಾನದ ಅಡಿ ಎಲ್ಲರಿಗೂ ಗೌರವವಾಗಿ ಬದುಕುವ ಹಕ್ಕು ಇದೆ. ಸರ್ಕಾರ ಅಥವಾ ಇನ್ನಾವುದೇ ಸಂಸ್ಥೆಗಳು ಇಡುವ ತಪ್ಪು ಹೆಜ್ಜೆ ಒಬ್ಬ ಮನುಷ್ಯನ ಘನತೆಗೆ ಕುಂದು ತರುವಂತೆ ಮಾಡುತ್ತದೆ.

ಪ್ರತಿಯೊಬ್ಬರಿಗೂ ಅವರ ಮೂಲ ಹಕ್ಕು ನೀಡಬೇಕು. ಸಂದೇಹದ ಮೇಲೆ ಆರೋಪ ಸಲ್ಲದು.
- ಹೈಕೋರ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.