ಶನಿವಾರ, ಮೇ 8, 2021
20 °C

ಅಕ್ರಮ ಸಿಲಿಂಡರ್ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಗರದ ನಕ್ಕಲಕುಂಟೆ ಮತ್ತು ರಾಘವೇಂದ್ರ ಮಠದ ಬಳಿಯಿರುವ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಶಪಡಿಸಿ ಕೊಂಡಿದ್ದಾರೆ.

 ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯತೀಶ್ (48) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಮನ್ಸೂರ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.`ಖಚಿತ ಸುಳಿವಿನ ಮೇರೆಗೆ ಮನೆಗಳ ಮೇಲೆ ದಾಳಿ ನಡೆಸಿ, 17 ದೊಡ್ಡ ಸಿಲಿಂಡರ್ ಮತ್ತು 10 ಚಿಕ್ಕ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದೇವೆ. ಆರೋಪಿಗಳು ಸಿಲಿಂಡರ್‌ಗಳನ್ನು ಬೇರೆ ಕಾರಣಗಳಿಗೆ ದುರ್ಬಳಕೆ ಮಾಡುತ್ತಿದ್ದರು.

ಆಟೋರಿಕ್ಷಾಗಳಿಗೆ ಗ್ಯಾಸ್‌ರೀಫಿಲಿಂಗ್ ಮಾಡುವುದು. ಬೇರೆಯವರಿಗೆ ಸಿಲಿಂಡರ್ ಅಕ್ರಮವಾಗಿ ನೀಡುವುದು ಮುಂತಾದವುಗಳನ್ನು ಮಾಡುತ್ತಿದ್ದರು. ಅಕ್ರಮ ಸಿಲಿಂಡರ್‌ಗಳ ಸಂಗ್ರಹಣೆಗೆ ಸಂಬಂಧಿಸಿದಂತೆ ಆರೋಪಿಗಳ ಜಾಲವಿದೆ. ಪ್ರಕರಣದ ಪ್ರಮುಖ ಆರೋಪಿಗಳನ್ನು ಶೀಘ್ರವೇ ಸೆರೆ ಹಿಡಿಯಲಾಗುವುದು~ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಮಹೇಶ್‌ಕುಮಾರ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.