ಮಂಗಳವಾರ, ಜೂನ್ 15, 2021
26 °C

ಅಖಿಲ ಭಾರತ ಕಬಡ್ಡಿ ಚಾಂಪಿಯನ್‌ಷಿಪ್: 35 ತಂಡಗಳ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ ಹಾಗೂ ಸ್ಪಂದನ ಉಚಿತ ಅನಾಥಾಶ್ರಮ ಮತ್ತು ಶೈಕ್ಷಣಿಕ ಕ್ರೀಡಾ ವಿಕಸನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 15ರಿಂದ 18ರವರೆಗೆ `ಎಚ್.ಡಿ.ದೇವೇಗೌಡ ಕಪ್~ ಅಖಿಲ ಭಾರತ `ಎ~ ದರ್ಜೆ ಆಹ್ವಾನಿತ ಪುರುಷ ಹಾಗೂ ಮಹಿಳೆಯರ ಕಬಡ್ಡಿ ಚಾಂಪಿಯನ್‌ಷಿಪ್ ನಡೆಯಲಿದೆ.

ಈ ಚಾಂಪಿಯನ್‌ಷಿಪ್ ವಿದ್ಯಾಪೀಠ ಸರ್ಕಲ್ ಬಳಿ ಇರುವ ಕೆಂಪೇಗೌಡ ಮೈದಾನದಲ್ಲಿ ಜರುಗಲಿದೆ. ಪುರುಷರ ವಿಭಾಗದಲ್ಲಿ 19 ತಂಡಗಳು ಹಾಗೂ ಮಹಿಳೆಯರ ವಿಭಾಗದಲ್ಲಿ 16 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಚಾಂಪಿಯನ್ ಆಗುವ ತಂಡ ಟ್ರೋಫಿ ಹಾಗೂ ಒಂದು ಲಕ್ಷ ನಗದು ಬಹುಮಾನ ಪಡೆಯಲಿದೆ. ರನ್ನರ್ ಅಪ್ ತಂಡ 70 ಸಾವಿರ ರೂ. ಗಳಿಸಲಿದೆ. ಚಾಂಪಿಯನ್ ಆಗುವ ಮಹಿಳಾ ತಂಡ 75 ಸಾವಿರ ರೂ. ಹಾಗೂ ರನ್ನರ್ ಅಪ್ ತಂಡ 40 ಸಾವಿರ ರೂ. ಪಡೆಯಲಿದೆ. ಪಾಲ್ಗೊಳ್ಳುವ ತಂಡಗಳಿಗೆ ಉಚಿತ ಭೋಜನ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

ಪಾಲ್ಗೊಳ್ಳುವ ತಂಡಗಳು: ಪುರುಷರ ವಿಭಾಗ: ಒಎನ್‌ಜಿಸಿ, ಏರ್ ಇಂಡಿಯಾ, ಬಿಪಿಸಿಎಲ್, ರೆಡ್ ಆರ್ಮಿ, ಗ್ರೀನ್ ಆರ್ಮಿ, ಬಿಎಸ್‌ಎಫ್, ಸಾಯ್ ಸೋನಿಪತ್, ಬಾಬಾ ಹರಿದಾಸ್, ತಮಿಳುನಾಡು, ರಿಸರ್ವ್ ಬ್ಯಾಂಕ್, ಹಿಂದುಜಾ ಕ್ಲಬ್, ಆರ್‌ಸಿಎಫ್, ಎಸ್‌ಬಿಎಂ, ಆರ್‌ಡಬ್ಲ್ಯುಎಫ್, ಎಚ್‌ಎಎಲ್, ಕೆಎಸ್‌ಪಿ, ಕೆಪಿಟಿಸಿಎಲ್, ಸಿಐಎಲ್ ಹಾಗೂ ಬಸವನಗುಡಿ.

ಮಹಿಳೆಯರ ವಿಭಾಗ: ವೆಸ್ಟರ್ನ್ ರೈಲ್ವೆ, ದೇನಾ ಬ್ಯಾಂಕ್, ಪಾಲಮ್ ಸ್ಪೋರ್ಟ್ಸ್, ಸುವರ್ಣ ಯುಗ, ಕೊಯಮತ್ತೂರು, ಶಕ್ತಿ ಟೈಲ್ಸ್, ಮದುರೈ, ಬಾಬಾ ಹರಿದಾಸ್, ಸತ್ತಾರ್, ಕೋಲ್ಕತ್ತ, ಶ್ರೀಕೃಷ್ಣ, ಶಿವಶಕ್ತಿ, ಆಳ್ವಾಆಸ್, ಶ್ರೀಮಾತಾ, ಅಮೃತ್ ಹಾಗೂ ಸೇಂಟ್ ಫಿಲೋಮಿನಾ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.