ಬೆಂಗಳೂರು: ಏರ್ ಇಂಡಿಯಾ ತಂಡದವರು ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ ಹಾಗೂ ಸ್ಪಂದನ ಉಚಿತ ಅನಾಥಾಶ್ರಮ ಮತ್ತು ಶೈಕ್ಷಣಿಕ ಕ್ರೀಡಾ ವಿಕಸನ ಕೇಂದ್ರದ ಆಶ್ರಯದಲ್ಲಿ ನಡೆದ `ಎಚ್.ಡಿ.ದೇವೇಗೌಡ ಕಪ್~ ಅಖಿಲ ಭಾರತ `ಎ~ ದರ್ಜೆ ಆಹ್ವಾನಿತ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.

ವಿದ್ಯಾಪೀಠ ಸರ್ಕಲ್ ಬಳಿ ಇರುವ ಕೆಂಪೇಗೌಡ ಮೈದಾನದಲ್ಲಿ ಜರುಗಿದ ಪುರುಷರ ವಿಭಾಗದ ಫೈನಲ್ನಲ್ಲಿ ಏರ್ ಇಂಡಿಯಾ 18-10 ಪಾಯಿಂಟ್ಗಳಿಂದ ಒಎನ್ಜಿಸಿ ತಂಡವನ್ನು ಸೋಲಿಸಿತು. ಇದಕ್ಕೂ ಮೊದಲು ನಡೆದ ಸೆಮಿಫೈನಲ್ನಲ್ಲಿ ಏರ್ ಇಂಡಿಯಾ 22-14 ಪಾಯಿಂಟ್ಗಳಿಂದ ಬೆಂಗಳೂರಿನ ಎಸ್ಬಿಎಂ ಎದುರೂ, ಒಎನ್ಜಿಸಿ 27-23 ಪಾಯಿಂಟ್ಗಳಿಂದ ರೆಡ್ ಆರ್ಮಿ ವಿರುದ್ಧವೂ ಗೆಲುವು ಸಾಧಿಸಿದ್ದವು.

ಚಾಂಪಿಯನ್ ಏರ್ ಇಂಡಿಯಾ ತಂಡ ಟ್ರೋಫಿ ಹಾಗೂ ಒಂದು ಲಕ್ಷ ನಗದು ಬಹುಮಾನ ಪಡೆಯಿತು. ರನ್ನರ್ ಅಪ್ ಒಎನ್ಜಿಸಿ ತಂಡ 70 ಸಾವಿರ ರೂ. ಗಳಿಸಿತು. ಎಸ್ಬಿಎಂನ ರಾಜ್ಗುರು `ಉತ್ತಮ ಹಿಡಿತಗಾರ~ ಪ್ರಶಸ್ತಿ ಪಡೆದರು.

ಮಹಿಳೆಯರ ವಿಭಾಗದಲ್ಲಿ ಮುಂಬೈನ ದೀನಾ ಬ್ಯಾಂಕ್ ಚಾಂಪಿಯನ್ ಆಯಿತು. ಈ ತಂಡ ಫೈನಲ್ನಲ್ಲಿ ಪಾಲಮ್ ಸ್ಟೋರ್ಸ್ ತಂಡವನ್ನು ಸೋಲಿಸಿತು. ಚಾಂಪಿಯನ್ ತಂಡ 75 ಸಾವಿರ ರೂ. ಹಾಗೂ ರನ್ನರ್ ಅಪ್ ತಂಡ 40 ಸಾವಿರ ರೂ. ಪಡೆದವು.

ಹೂಡಿ ತಂಡಕ್ಕೆ ಪ್ರಶಸ್ತಿ: ರಾಜ್ಯ ಮಟ್ಟದ ಪುರುಷರ ಕ್ಲಬ್ ಟೂರ್ನಿಯಲ್ಲಿ ಹೂಡಿ ಸ್ಪೋರ್ಟ್ಸ್ ಕ್ಲಬ್ ತಂಡ ಮೊದಲ ಸ್ಥಾನ ಗಳಿಸಿತು. ಈ ತಂಡದವರು ಫೈನಲ್ನಲ್ಲಿ 26-25 ಪಾಯಿಂಟ್ಗಳಿಂದ ಎಚ್ಎಂಟಿ ಕಾಲೋನಿ ತಂಡವನ್ನು ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.