ಮಂಗಳವಾರ, ಸೆಪ್ಟೆಂಬರ್ 29, 2020
25 °C

ಅಖಿಲ ಭಾರತ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಖಿಲ ಭಾರತ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಿ

ಬೆಂಗಳೂರು: ಅಗ್ರ ಶ್ರೇಯಾಂಕದ ಕರ್ನಾಟಕದ ಅಭಿನಂದ್ ಶೆಟ್ಟಿ ಹಾಗೂ ಶಿವ ಕುಮಾರ ಎಂ. ಜೋಡಿ ಇಲ್ಲಿ ಆರಂಭವಾದ ಹಾಫ್ ಸ್ಮಾಷ್ ಅಖಿಲ ಭಾರತ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕದ ಜೋಡಿ 21-14, 21-11ರಲ್ಲಿ ತಮಿಳುನಾಡಿನ ಕಲಿಬಾನ್ ಹಾಗೂ ಪ್ರಕಾಶ್ ಎದುರು ಜಯ ಸಾಧಿಸಿದರು.ಕರ್ನಾಟಕದ ಅನೂಪ್ ಕುಮಾರ್ ಎಂ.ಡಿ.-ಟಿ.ಆರ್. ಜೀವನ್ ಜೋಡಿ 21-11, 21-9ರಲ್ಲಿ ಆಂಧ್ರ ಪ್ರದೇಶದ ಇರ್ಷಾದ್-ಸುರೇಶ್ ಎದುರು ಜಯ ಸಾಧಿಸಿ ಪ್ರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟರು.  ಇನ್ನೊಂದು ಪಂದ್ಯದಲ್ಲಿ ಗಿರೀಶ್ ಕುಮಾರ್-ಸಜಿತ್ ಪಿ.ವಿ. ಅವರು 21-12, 21-5ರಲ್ಲಿ ಅಫ್ಜಲ್ ಮತ್ತು ತಾಹಿರ್ ಎದುರು ಜಯ ಪಡೆದರು.ಈ ಟೂರ್ನಿಯಲ್ಲಿ ಒಟ್ಟು ಮೂರು ವಿಭಾಗದ ಸ್ಪರ್ಧೆಗಳು ನಡೆಯಲಿದ್ದು, ಓಪನ್ ಡಬಲ್ಸ್ (ವಯಸ್ಸಿನ ಮಿತಿಯಿಲ್ಲ), 35 ವರ್ಷ ಮೇಲ್ಟಟ್ಟವರಿಗೆ ಮಾಸ್ಟರ್ಸ್ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಸ್ಪರ್ಧೆಗಳು ಜರುಗಲಿವೆ.ಒಟ್ಟು 3, 30,000 ರೂಪಾಯಿ ಬಹುಮಾನ ಹೊಂದಿರುವ ಈ ಟೂರ್ನಿಯಲ್ಲಿ, ಓಪನ್ ಡಬಲ್ಸ್‌ನ ವಿಜೇತರು ಒಂದು ಲಕ್ಷ ರೂಪಾಯಿ, ರನ್ನರ್ ಅಪ್ ಆದವರು 50,000 ರೂ. ಬಹುಮಾನ ಪಡೆಯಲಿದ್ದಾರೆ. ಮಾಸ್ಟ ರ್ಸ್ ಡಬಲ್ಸ್‌ನ ಮತ್ತು ಮಿಶ್ರ ಡಬಲ್ಸ್ ವಿಭಾಗದ ವಿಜೇತರು 50,000 ರೂ, ಎರಡನೇ ಸ್ಥಾನ ಪಡೆದವರು 30,000 ರೂ. ಬಹುಮಾನ ಲಭಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.