ವಾಲಿಬಾಲ್ ಟೂರ್ನಿಯೊಂದರಲ್ಲಿ ಆಡಲು ತಲಕಾಡಿಗೆ ಹೋಗಿದ್ದ ಆ ಆರು ಆಟಗಾರರು ಮರಳಿ ಬರಲೇ ಇಲ್ಲ! ಅವರ ನೆನಪನ್ನು ಸದಾ ಹಸಿರಾಗಿ ಉಳಿಸುವ ತುಡಿತ ಅವರ ಗೆಳೆಯರದ್ದು. ಸ್ನೇಹಿತರ ಸ್ಮರಿಸಲು ಕ್ರೀಡಾಂಗಣ ಕಟ್ಟುವ ಅವರೆಲ್ಲರ ಶ್ರಮವೀಗ ಸಾರ್ಥಕವಾಗಿದೆ. ಕ್ರೀಡಾಂಗಣ ಮಾತ್ರವಲ್ಲ, ಅದರೊಂದಿಗೆ ಉದ್ಯಾನವನವೂ ಸಜ್ಜಾಗಿದೆ. ಭಾನುವಾರ ಉದ್ಘಾಟನೆ. ಆನಂತರ ಕ್ರೀಡಾ ಚಟುವಟಿಕೆ ನಿರಂತರ...!

ಹೊಯ್ಸಳ ಯೂತ್ಸ್ ಸ್ಪೋರ್ಟ್ಸ್ ಅಸೋಸಿಯೇಷನ್ (ಎಚ್ವೈಎಸ್ಎ) ಯುವಕರು ಕಂಡಿದ್ದ ಬಹುಕಾಲದ ಕನಸು ನನಸಾಗಿದೆ. ಅಗಲಿದ ಗೆಳೆಯರ ನೆನಪಿನಲ್ಲಿ ಕ್ರೀಡಾಂಗಣ ಕಟ್ಟುವ ಉಮೇದು ಈಡೇರಿದೆ.

ಹಿಂದೆ ಮುಳ್ಳು-ಕಂಟಿಗಳಿಂದ ತುಂಬಿಕೊಂಡಿದ್ದ `ಚಿಕ್ಕ ಕಾಡು~ ಈಗ ಆಟದ ಅಂಗಳ ಹಾಗೂ ಸುಂದರವಾದ ಉದ್ಯಾನವಾಗಿ ಹೊಸ ರೂಪ ಪಡೆದು ಕಂಗೊಳಿಸುತ್ತಿದೆ. ಅದರೊಂದಿಗೆ ದುರಂತದಲ್ಲಿ ಮರೆಯಾಗಿ ಹೋದ ಸ್ನೇಹಿತರ ನೆನಪು ಕೂಡ ಹಚ್ಚ ಹಸಿರಾಗಿ ಕಣ್ಣೆದುರು ಶಾಶ್ವತವಾಗಿ ಉಳಿಯುವಂತಾಗಿದೆ.

ವರ್ಷಗಳ ಹಿಂದೆ ವಾಲಿಬಾಲ್ ಟೂರ್ನಿಯೊಂದರಲ್ಲಿ ಆಡಲು ಎಚ್ವೈಎಸ್ಎ ತಂಡದ ಆರು ಆಟಗಾರರು ತಲಕಾಡಿಗೆ ಹೋಗಿದ್ದರು. ಆದರೆ ಮರಳಿ ಬರಲೇ ಇಲ್ಲ! ನದಿಯ ಸುಳಿವಿಗೆ ಅವರೆಲ್ಲರ ಜೀವಗಳ ಹೊತ್ತೊಯ್ದಿತು.

ಆದರೆ ಅವರ ನೆನಪು ಮಾತ್ರ ಮರೆಯಾಗಲಿಲ್ಲ. ಆದ್ದರಿಂದಲೇ ಎಚ್ವೈಎಸ್ಎ ಯುವಕರಿಗೆ ಸದಾ ನೋವೊಂದು ಕಾಡುತಿತ್ತು. ತಮ್ಮ ಗೆಳೆಯರು ಬಿಟ್ಟು ಹೋದ ಕ್ರೀಡಾಂಗಣದ ಕನಸನ್ನು ಸಾಕಾರಗೊಳಿಸಲು ಆಗಲಿಲ್ಲವಲ್ಲ ಎನ್ನುವುದೇ ಆ ಕೊರಗು.

ಉದ್ಯಾನನಗರಿಯ ಇಸ್ರೋ ಹಾಗೂ ಕುಮಾರಸ್ವಾಮಿ ಬಡಾವಣೆಗಳು ಒಂದಾಗುವ ಸ್ಥಳದಲ್ಲೊಂದು ಕ್ರೀಡಾಂಗಣ ನಿರ್ಮಾಣವಾಗಿ ಅಗಲಿದ ಆ ಗೆಳೆಯರ ಹೆಸರು ಅದರಲ್ಲಿ ಶಾಶ್ವತವಾಗಿ ಉಳಿಯಬೇಕು ಎನ್ನುವ ಆಸೆ ಈಡೇರುವ ಕಾಲಕ್ಕಾಗಿ ಕಾಯ್ದು ಸುಸ್ತಾಗಿದ್ದರು. ಇಂಥ ನಿರಾಸೆಯ ನಡುವೆ ಆಸೆಯ ಕಿರಣವೊಂದು ಮೂಡಿತು.

ಎಚ್ವೈಎಸ್ಎ ಹುಡುಗರು ಕಂಡ ಕನಸನ್ನು ಜನನಾಯಕರ ಮುಂದೆ ಬಿಚ್ಚಿಡುವ ಸಾರ್ಥಕ ಕೆಲಸ ಅದೃಷ್ಟ ಎನ್ನುವಂತೆ ಸಾಧ್ಯವಾಯಿತು.ಉದ್ಯಾನನಗರಿಯ ಈ ಭಾಗದಲ್ಲಿ ಕ್ರೀಡಾಂಗಣ ಅಗತ್ಯವಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಜೊತೆಗೆ ಎಚ್ವೈಎಸ್ಎಗೆ ಹೆಮ್ಮೆಯ ಗರಿ ಮೂಡಿಸಿದ್ದ ಆ ಆರು ಆಟಗಾರರ ದುರಂತ ಸಾವಿನ ಕುರಿತು ಕೂಡ ಮನ ತಟ್ಟುವ ಹಾಗೆ ತಿಳಿಸುವ ಕೆಲಸವೂ ನಡೆಯಿತು.

2001ರ ಜನವರಿ 26ರಂದು ತಲಕಾಡಿನಲ್ಲಿ ವಾಲಿಬಾಲ್ ಟೂರ್ನಿಯಲ್ಲಿ ಆಡಿ, ಬಿಡುವಿನ ಸಮಯದಲ್ಲಿ ಈಜಲು ಹೋಗಿ ವಿಧಿಯ ತೆಕ್ಕೆಯಲ್ಲಿ ಒಂದಾಗಿ ಹೋದ ಆಪ್ತ ಗೆಳೆಯರ ಕಥೆ ಬಿಚ್ಚಿಟ್ಟಾಗ ಜನನಾಯಕರ ಮನವೂ ಮರುಗಿತು.

ನೀರಿನ ಸೆಳವಿನಲ್ಲಿ ಒಬ್ಬರನ್ನು ರಕ್ಷಿಸಲು ಇನ್ನೊಬ್ಬರು... ಹೀಗೆ ಬಿ.ಎಸ್.ಗುರುಪ್ರಸಾದ್, ಇ.ನಾಗೇಂದ್ರ, ಎಸ್.ಬಿ.ರವಿಕುಮಾರ್, ಆರ್.ಮಹೇಶ್, ಪಿ.ಗೋಪಿನಾಥ್ ಹಾಗೂ ಎಲ್.ಮಂಜುನಾಥ್ ಕಾಲನ ಆಟದಲ್ಲಿ ಮರೆಯಾದ ನೆನಪನ್ನು ಎಚ್ವೈಎಸ್ಎ ಯುವಕರು ಹಸಿರಾಗಿ ಉಳಿಸಲು ಕ್ರೀಡಾಂಗಣ ಕಟ್ಟುವ ಆಶಯ ಹೊಂದಿದ್ದಾರೆ ಎನ್ನುವುದನ್ನು ಅರಿತ ಸ್ಥಳೀಯ ಚುನಾಯಿತ ಪ್ರತಿನಿಧಿಯೂ ಆಗಿರುವ ಸಚಿವ ಆರ್.ಅಶೋಕ್ ಯೋಜನೆಗೆ ಮಂಜೂರಾತಿ ದೊರೆಯುವಂತೆ ಮಾಡಿದರು.

ಮುಂದೆ ಆಗಿದ್ದೆಲ್ಲ ಒಳಿತು. ಆಸೆ, ನಿರೀಕ್ಷೆಗಳ ಹನಿಯೊಂದು ಕನಸಾಗಿ ಆಗಸದ ತುಂಬಾ ಹರಡಿಕೊಂಡು ಸುರಿಸಿತು ಮಳೆ. ಆ ಸಂತಸದ ವರ್ಷಧಾರೆಯಲ್ಲಿ ಮೈತೋಯಿಸಿಕೊಂಡು ಸಂಭ್ರಮಿಸುವ ಕಾಲವೂ ಬಂದಿದೆ.

ಕಂಡ ಕನಸು ಕಾಗದದ ಮೇಲಿಂದ ಇಳಿದು ಎದುರಿಗೆ ನಿಂತಿದೆ. ಕ್ರೀಡಾಂಗಣ ಕಣ್ಣೆದುರು ಸಜ್ಜಾಗಿದೆ. ಅಷ್ಟೇ ಏಕೆ, ಎಚ್ವೈಎಸ್ಎ ಉತ್ಸಾಹಿಗಳ ಶ್ರಮಕ್ಕೆ ಬೋನಸ್ ಎನ್ನುವಂತೆ ಈ ಭಾಗದ ಜನರಿಗೆ ಸುಂದರವಾದ ಉದ್ಯಾನವನವೂ ಸಿಕ್ಕಿದೆ.

ಹೌದು; ಇಸ್ರೋ ಹಾಗೂ ಕುಮಾರಸ್ವಾಮಿ ಬಡಾವಣೆಯ ಕ್ರೀಡಾ ಉತ್ಸಾಹಕ್ಕೆ ಪ್ರೋತ್ಸಾಹ ಕಲ್ಪಿಸುವ ಕ್ರೀಡಾಂಗಣವಿದು. ಗ್ಯಾಲರಿ ಹಾಗೂ ಕ್ರೀಡಾ ಸಾಧನಗಳ ಕೊಠಡಿಯೂ ಸೇರಿದಂತೆ ಎಲ್ಲವೂ ಈಗ ಸಿದ್ಧ.

ಆಟದ ಅಂಗಳ ಹಾಗೂ ಉದ್ಯಾನವನ್ನು ಒಪ್ಪವಾಗಿಸುವ ಕಾರ್ಯವೂ ಮುಗಿದಿದೆ. ಇದರಿಂದಾಗಿ ಈ ಭಾಗದ ಜನರು ಸಂತಸಗೊಂಡಿದ್ದಾರೆ. ಹೊಸ ಕ್ರೀಡಾಂಗಣದಲ್ಲಿ ಮಕ್ಕಳ ಆಟದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಈಗ ಆಸಕ್ತಿಯಿಂದ ಕಾಯ್ದಿದ್ದಾರೆ.

ಕಾಗದದ ಮೇಲಿದ್ದ ಕನಸು ಕಣ್ಣೆದುರು ಸಾಕಾರವಾಗಿದೆ. ಕೆಲವು ದಿನಗಳ ಹಿಂದೆ ಕ್ರೀಡಾಂಗಣದ ಚಿತ್ರವೊಂದನ್ನು ಎದುರಿಗಿಟ್ಟುಕೊಂಡು ನೋಡಿದವರು ಈಗ ಅದೇ ರೂಪವನ್ನು ವಾಸ್ತವದಲ್ಲಿ ಕಂಡಿದ್ದಾರೆ.

ಎಚ್ವೈಎಸ್ಎ ಪ್ರಧಾನ ಕಾರ್ಯದರ್ಶಿ ವಿ.ಕಿರಣ್ ಆಳ್ವ ತಾವೇ ಮುಂದೆ ನಿಂತು ಪ್ರತಿಯೊಂದು ಕೆಲಸವೂ ಒಪ್ಪವಾಗಿ ನಡೆಯುವಂತೆ ಕಾಳಜಿ ವಹಿಸಿದ್ದು ವಿಶೇಷ. ಅವರಿಗೆ `ಎಚ್ವೈಎಸ್ಎ~ ಯುವ ಉತ್ಸಾಹಿಗಳಾದ ಎನ್.ಆರ್.ರಾಮಮೂರ್ತಿ, ಬಿ.ಎಸ್.ರಂಗನಾಥ್, ಎಂ.ಪಿ.ಮನೋಜ್ ಕುಮಾರ್, ಮಂಜುನಾಥ್ ಕಾಶಿ, ಜೆ.ಶಂಕರ್, ಕೆ.ಕಾಂತರಾಜ್, ಜೆ.ಕೆಂಪಯ್ಯ, ಕೆ.ಆರ್.ಸುದರ್ಶನ್ ಬಾಬು, ಎನ್.ನಟರಾಜ್, ಕೆ.ಪ್ರಕಾಶ್, ನಂಜುಂಡಸ್ವಾಮಿ, ಕೆ.ಎಸ್.ಅಕ್ಷಯ್, ರಾಮ ಸುಬ್ಬರಾವ್ ಹಾಗೂ ಎನ್.ಪ್ರಶಾಂತ್ ಅವರಿಂದಲೂ ಸಿಕ್ಕ ಬೆಂಬಲ ಅಪಾರ.

ಕಲ್ಪಿಸಿಕೊಂಡ ರೀತಿಯಲ್ಲಿಯೇ ಕ್ರೀಡಾಂಗಣ ಹಾಗೂ ಉದ್ಯಾನ ರೂಪ ಪಡೆದುಕೊಂಡು ನಿಲ್ಲಲು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ವಿ.ರಾಜೇಶ್, ಕಿರಿಯ ಎಂಜಿನಿಯರ್ ನಿಜಲಿಂಗಪ್ಪ ಕೋಡಿಹಳ್ಳಿ ಹಾಗೂ ಯೋಜನೆಯ ಗುತ್ತಿಗೆದಾರ ಕೆ.ಸಿ.ಶ್ರೀಧರ್ ಅವರು ತೋರಿದ ಆಸಕ್ತಿಗೂ ಅಗಲಿದ ಯುವ ಆಟಗಾರರ ನೆನಪೇ ಪ್ರೇರಣೆ. ಈಗ ಸುಂದರವಾಗಿ ಸಿಂಗರಿಸಿಕೊಂಡು ನಿಂತಿರುವ ಎಚ್ವೈಎಸ್ಎ ಕ್ರೀಡಾಂಗಣ ಹಾಗೂ ಉದ್ಯಾನವನದ ಉದ್ಘಾಟನೆ ಭಾನುವಾರ ನೆರವೇರಲಿದೆ. ಅದೇ ಈ ಭಾಗದ ಜನರ ಸಂತಸಕ್ಕೆ ಕಾರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.