ಅಗ್ನಿ–1 ಕ್ಷಿಪಣಿ ಉಡಾವಣೆ

7

ಅಗ್ನಿ–1 ಕ್ಷಿಪಣಿ ಉಡಾವಣೆ

Published:
Updated:

ಬಾಲಸೋರ್‌, ಒಡಿಶಾ (ಪಿಟಿಐ): ದೇಶಿ ನಿರ್ಮಿತ ಅಗ್ನಿ–1 ಖಂಡಾತರ ಕ್ಷಿಪಣಿಯನ್ನು ಸೋಮವಾರ ಒಡಿಶಾ ಕರಾವಳಿಯಲ್ಲಿ  ಯಶಸ್ವಿಯಾಗಿ  ಉಡಾವಣೆ ಮಾಡಲಾಯಿತು.ಪರಮಾಣು ಸಾಮರ್ಥ್ಯದ ಅಗ್ನಿ–1 ಕ್ಷಿಪಣಿಯು 9 ನಿಮಿಷ 36 ಸೆಕೆಂಡ್‌ಗಳಲ್ಲಿ ಸುಮಾರು 700 ಕಿ.ಮೀ. ದೂರದಷ್ಟು ಗುರಿಯನ್ನು ಕ್ರಮಿಸಬಲ್ಲ ಅತ್ಯಾಧುನಿಕ ಕ್ಷಿಪಣಿಯಾಗಿದೆ.ಭುವನೇಶ್ವರದಿಂದ 150 ಕಿ.ಮೀ. ದೂರದಲ್ಲಿರುವ ಅಬ್ದುಲ್‌ ಕಲಾಂ  ದ್ವೀಪದಲ್ಲಿನ (ವೀಲರ್‌ ದ್ವೀಪ) ಆಂತರಿಕ ಪರೀಕ್ಷಾ ಶ್ರೇಣಿಯಲ್ಲಿರುವ ಉಡಾವಣಾ ಘಟಕದಲ್ಲಿ ಸೋಮವಾರ ಬೆಳಿಗ್ಗೆ 9.15ಕ್ಕೆ ಉಡಾವಣೆ ನಡೆಸಲಾಯಿತು ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry