ಬೀಜಿಂಗ್/ನವದೆಹಲಿ (ಪಿಟಿಐ): ಭಾರತದ `ಅಗ್ನಿ-5~ ಕ್ಷಿಪಣಿ ಪ್ರಯೋಗದ ಬಗ್ಗೆ ಬಹು ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಿರುವ ಚೀನಾ, `ಉಭಯ ರಾಷ್ಟ್ರ ಗಳು ಪರಸ್ಪರ ಶತ್ರುಗಳಲ್ಲ. ಉತ್ತಮ ಬಾಂಧವ್ಯ ಹೊಂದಿರುವ ನೆರೆಯ ದೇಶಗಳು~ ಎಂದು ಗುರುವಾರ ಹೇಳಿದೆ.

ಆದರೆ, ನವದೆಹಲಿಯಲ್ಲಿರುವ ಚೀನಾದ ರಾಯಭಾರ ಕಚೇರಿ ಮೂಲಗಳು, ಈ ಕ್ಷಿಪಣಿ ಪ್ರಯೋಗವು ದಕ್ಷಿಣ ಏಷ್ಯಾದಲ್ಲಿ ಮತ್ತಷ್ಟು ಶಸ್ತ್ರಾಸ್ತ್ರ ಪೈಪೋಟಿಗೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿವೆ.

`ಇತ್ತೀಚೆಗೆ ದೆಹಲಿಯಲ್ಲಿ ನಡೆದ `ಬ್ರಿಕ್ಸ್~ ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಚೀನಾ ಮುಖಂಡರು ಎರಡೂ ರಾಷ್ಟ್ರಗಳ ಬಾಂಧವ್ಯವನ್ನು ಮತ್ತಷ್ಟು ಉತ್ತಮಪಡಿಸಲು ಹಾಗೂ ದ್ವಿಪಕ್ಷೀಯ ಕಾರ್ಯತಂತ್ರದಲ್ಲಿ ಪರಸ್ಪರ ಸಹಕಾರ ನೀಡುವ ಬಗ್ಗೆ ಒಲವು ತೋರಿದ್ದರು~ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿಯು ವೆಮಿನ್ ಸುದ್ದಿಗಾರರ ಬಳಿ ಹೇಳಿದ್ದಾರೆ.

ಈ ಕ್ಷಿಪಣಿ ವ್ಯಾಪ್ತಿಗೆ ಅನೇಕ ದೇಶಗಳು ಒಳಪಡುವುದರಿಂದ ಚೀನಾ ಈ ಬಗ್ಗೆ ಕಳವಳಗೊಂಡಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, `ಚೀನಾ- ಭಾರತ ಜಾಗತಿಕವಾಗಿ ಪ್ರಬಲವಾಗುತ್ತಿವೆ. ಆದರೆ, ಪರಸ್ಪರ ಶತ್ರುಗಳಲ್ಲ. ಉಭಯ ರಾಷ್ಟ್ರಗಳೂ ಸಹಕಾರ ಮನೋಭಾವ ಹೊಂದಿವೆ. ಈ ಸಹಕಾರ ತತ್ವವನ್ನು ಎರಡೂ ದೇಶಗಳು ಪಾಲಿಸುವ ಅಗತ್ಯವಿದೆ~ ಎಂದಿದ್ದಾರೆ. ಆದರೆ, ಚೀನಾ ಸರ್ಕಾರಿ ಸ್ವಾಮ್ಯದ `ಗ್ಲೋಬಲ್ ಟೈಮ್ಸ~ ಪತ್ರಿಕೆಯು ಭಾರತದ ಈ ಪ್ರಯೋಗವನ್ನು ಕಟುವಾಗಿ ಟೀಕಿಸಿದೆ.

`ಚೀನಾದ ಅಣ್ವಸ್ತ್ರ ಶಕ್ತಿಯು ಅತ್ಯಂತ ಪ್ರಬಲ ಮತ್ತು ವಿಶ್ವಾಸಾರ್ಹವಾಗಿದೆ. ಇದಕ್ಕೆ ಭಾರತ ಸರಿಸಾಟಿಯಾಗಲು ಸಾಧ್ಯವೇ ಇಲ್ಲ~ ಎಂದೂ ಸಂಪಾದಕೀಯದಲ್ಲಿ ಹೇಳಿದೆ. ನವದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿ ಮೂಲಗಳು `ಅಗ್ನಿ-5~ ಬಗ್ಗೆ ಮಾಧ್ಯಮಗಳ ವಿಶ್ಲೇಷಣೆಪ್ರಚೋದನಕಾರಿ ಎಂದು ಟೀಕಿಸಿವೆ.

ಅಪಾಯಕಾರಿ ಅಲ್ಲ: ನ್ಯಾಟೊ
ಬ್ರುಸೆಲ್ಸ್ (ಆರ್ಐಎ ನೊವೊಸ್ತಿ): ಅತ್ಯಾಧುನಿಕ ತಂತ್ರಜ್ಞಾನದ ಕ್ಷಿಪಣಿ ಪ್ರಯೋಗದ ಹೊರತಾಗಿಯೂ ಭಾರತ ಅಪಾಯಕಾರಿ ರಾಷ್ಟ್ರವಲ್ಲ ಎಂದು ನ್ಯಾಟೊ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.