ಭಾನುವಾರ, ಜೂನ್ 20, 2021
26 °C

ಅಜ್ಜಿಗೆ ಕಚ್ಚಿದ 80,000 ಜೇನ್ನೊಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್(ಪಿಟಿಐ): ಅಮೆರಿಕದ 71 ವರ್ಷದ ಅನಾಮಿಕ ಅಜ್ಜಿಯೊಬ್ಬಳನ್ನು ಸುಮಾರು 80,000 ರಷ್ಟಿದ್ದ ಆಫ್ರಿಕಾ ಜೇನ್ನೊಣಗಳ ಹಿಂಡು ಕಚ್ಚಿದ್ದು, ಆಕೆ ಅಸ್ವಸ್ಥಗೊಂಡಿದ್ದಾಳೆ.  ಈ ಜೇನ್ನೊಣಗಳು 1000 ಸಲ ಆಕೆಯನ್ನು ಕಚ್ಚಿದ್ದವು. ಅಜ್ಜಿಯ ನೆರವಿಗೆ ಬಂದ ಐವರು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಮತ್ತು ನೆರೆಹೊರೆ­ಯ­ವರನ್ನೂ ಈ ಜೇನುನೊಣಗಳು ಘಾಸಿಗೊಳಿಸಿವೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.  ಅಜ್ಜಿಗೆ ಚಿಕಿತ್ಸೆ ನೀಡಲಾಗಿದೆ.  ಕೆಲಸಗಾರನೊಬ್ಬ ನೆಲಮಾಳಿಗೆ­ಯಲ್ಲಿರುವ ಫೈಬರ್ ಆಪ್ಟಿಕಲ್‌ ಕೇಬಲ್ ಬಾಕ್ಸ್‌ನೊಳಗಿದ್ದ ಜೇನುಗಳನ್ನು ರೊಚ್ಚಿಗೆ­ಬ್ಬಿಸಿ­ದ್ದ­ರೊಂದ ಈ ಅನಾಹುತ ಸಂಭವಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.