ಅಜ್ಮೇರ್ (ಪಿಟಿಐ): ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಇಲ್ಲಿನ ಖ್ವಾಜಾ ಮೊಯಿನುದ್ದಿನ್ ಚಿಸ್ತಿ ದರ್ಗಾಕ್ಕೆ ಭಾನುವಾರ ಭೇಟಿ ನೀಡಲಿರುವುದರಿಂದ ಭಾರಿ ಬಿಗಿ ಭದ್ರತೆಯನ್ನು ಜಿಲ್ಲಾ ಆಡಳಿತ ನಿಯೋಜಿಸಿದೆ. ನಿಯೋಜಿತ ಸಿಬ್ಬಂದಿ ಶನಿವಾರ ಸಂಜೆ ತಾಲೀಮು ನಡೆಸಿದರು.

ಜರ್ದಾರಿ ಜೊತೆಗೆ ಅವರ ಪುತ್ರ ಬಿಲ್ವಾಲ್ ಭುಟ್ಟೊ ಜರ್ದಾರಿ, ಪಾಕ್ ಆಂತರಿಕ ಭದ್ರತಾ ಸಚಿವ ರೆಹಮಾನ್ ಮಲಿಕ್ ಮತ್ತಿತರರು ಜೈಪುರದ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ ಹೆಲಿಕಾಪ್ಟರ್ಗಳಲ್ಲಿ ಅಜ್ಮೇರ್ಗೆ ಸಂಜೆ 4.10ಕ್ಕೆ ಬರುವರು.

ಹೆಲಿಪ್ಯಾಡ್ನಿಂದ 12.3 ಕಿ.ಮೀ. ದೂರದಲ್ಲಿರುವ ದರ್ಗಾಕ್ಕೆ ರಸ್ತೆ ಮೂಲಕ ತೆರಳುವ ಪಾಕ್ ಗಣ್ಯರು, 35 ನಿಮಿಷಗಳ ಕಾಲ ದರ್ಗಾದ ಒಳಗೆ ಇರಲಿದ್ದಾರೆ. ಪಾಕ್ ಅಧ್ಯಕ್ಷರ ಭೇಟಿಗೂ ಎರಡು ಗಂಟೆಗಳ ಮೊದಲೇ ದರ್ಗಾಕ್ಕೆ ಸಾರ್ವಜನಿಕರ ಪ್ರವೇಶವನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.