ಮಂಗಳವಾರ, ಮಾರ್ಚ್ 2, 2021
26 °C

ಅಡುಗೆ ಮನೆಯಿಂದಲೇ ಆಡಳಿತದ ಪಾಠ: ಹಿಲರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡುಗೆ ಮನೆಯಿಂದಲೇ ಆಡಳಿತದ ಪಾಠ: ಹಿಲರಿ

ವಾಷಿಂಗ್ಟನ್ (ಪಿಟಿಐ): ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಜಯಗಳಿಸಿದರೆ, ಪತಿ ಬಿಲ್ ಕ್ಲಿಂಟನ್ ಅವರ ಪಾತ್ರ ಅಡುಗೆಮನೆಯ ಮೇಜಿನಿಂದಲೇ ಶುರುವಾಗುತ್ತದೆ ಎಂದು ಅಮೆರಿಕದ ಡೆಮಾಕ್ರೆಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಹೇಳಿದ್ದಾರೆ.ಅಮೆರಿಕದ ಮಾಜಿ ಅಧ್ಯಕ್ಷರಾಗಿ ಬಿಲ್ ಕ್ಲಿಂಟನ್‌ ಅವರ ಅನುಭವ ಮತ್ತು ಸಲಹೆಗಳನ್ನು ಪಡೆದುಕೊಳ್ಳುವುದಾಗಿ ಹಿಲರಿ ತಿಳಿಸಿದ್ದಾರೆ.

‘ನನಗೆ ಅತ್ಯುತ್ತಮವಾದ ಸಲಹೆಗಾರ ದೊರಕಲಿದ್ದಾರೆ. ಒಂದು ವೇಳೆ ನಾನು ಅಧ್ಯಕ್ಷೆಯಾಗಿ ಆಯ್ಕೆಯಾದರೆ ಬಿಲ್‌ ಅವರಿಗಿಂತ ಉತ್ತಮ ಸಲಹೆಗಾರ ಬೇರೊಬ್ಬರು ಸಿಗಲಾರರು’ ಎಂದು ಹಿಲರಿ ಸಂವಾದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.‘ನನ್ನ ಗಂಡನ ಅಧಿಕಾರಾವಧಿಯಲ್ಲಿ ಅಮೆರಿಕವು ಆರ್ಥಿಕವಾಗಿ ಬಹಳ ಸದೃಢವಾಯಿತು. ಅವರು ನೀತಿಗಳಿಂದಾಗಿ ಇತ್ತೀಚಿನ ಇತಿಹಾಸದಲ್ಲಿಯೇ ಅತಿ ಹೆಚ್ಚು ಜನರು ಬಡತನದ ಬೇಗೆಯಿಂದ ಹೊರಬರುವಂತಾಯಿತು. ನನ್ನ ಆಡಳಿತಕ್ಕೆ ಅವರ ಸಲಹೆ ಮತ್ತು ಸೂಚನೆಗಳು ನೆರವಾಗಲಿವೆ’ ಎಂದು ಹಿಲರಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.