ಭಾನುವಾರ, ಏಪ್ರಿಲ್ 11, 2021
30 °C

ಅಡುಗೆ ಮನೆಯಿಂದಲೇ ವಿದ್ಯುತ್ ಉಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡುಗೆ ಮನೆಯಿಂದಲೇ ವಿದ್ಯುತ್ ಉಳಿಸಿ

ಹಾವೇರಿ: `ವಿದ್ಯುತ್ ಉಳಿತಾಯ ಅಡುಗೆ ಮನೆಯಿಂದ ಪ್ರಾರಂಭವಾಗಬೇಕು. ಸಣ್ಣಪುಟ್ಟ ಕೆಲಸಗಳಿಗೆ ವಿದ್ಯುತ್ ಬಳಸುವ ಸಂದರ್ಭದಲ್ಲಿ ಎಚ್ಚರ ವಹಿಸಿದಾಗ ಮಾತ್ರ ದೊಡ್ಡ ಪ್ರಮಾಣ ದಲ್ಲಿ ವಿದ್ಯುತ್ ಉಳಿತಾಯ ಮಾಡಲು ಸಾಧ್ಯ~ ಎಂದು ಹುಕ್ಕೆರಿಮಠದ ಸದಾಶಿವ ಶ್ರೀಗಳು ಹೇಳಿದರು.ನಗರದ ಹೆಸ್ಕಾಂ ಡಿಎಸ್‌ಎಂ ಘಟಕ ಮತ್ತು ಹೈದ್ರಾಬಾದ್ ಕರ್ನಾಟಕ ಸೆಂಟರ್ ಫಾರ್ ಅಡ್ವಾನ್ಸಡ್ ಲರ್ನಿಂಗ್ ಸಂಸ್ಥೆ ಆಶ್ರಯದಲ್ಲಿ `ವಿದ್ಯುತ್ ಉಳಿಸಿ ಜಾಗೃತಿ ಆಂದೋಲನ~ ಅಂಗ ವಾಗಿ ಬುಧವಾರ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅಜ್ಞಾನದ ಕತ್ತಲು ಬೆಳಗಲು ಜ್ಞಾನದ ಬೆಳಕು ಹೇಗೆ ಅವಶ್ಯವೋ,  ಇಂದಿನ ಯುಗದಲ್ಲಿ ಜಗವನ್ನು ಬೆಳಗಲು ವಿದ್ಯುತ್ತಿನ ಬೆಳಕು ಬೇಕು. ಈ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆ ಮತ್ತು ಮಿತವ್ಯಯ ಬಳಕೆಯ ಬಗ್ಗೆ ತಿಳಿವಳಿಕೆ ಮೂಡಿಸಲು ಆಂದೋಲನ ಅವಶ್ಯ ಎಂದರು.  ಹೆಸ್ಕಾಂ ವೃತ್ತದ ಅಧೀಕ್ಷಕ ಎಂಜಿನಿಯರ್ ಎನ್.ಬಿ.ಕಡಕೋಳ ಮಾತನಾಡಿ, ನೀರು, ವಿದ್ಯುತ್‌ನಂತಹ ಅಗತ್ಯ ವಸ್ತುಗಳ ಉಳಿತಾಯದ ಯುವ ಪೀಳಿಗೆಯಲ್ಲಿ ತಿಳಿವಳಿಕೆ ಮೂಡಿಸುವುದು ಅವಶ್ಯಕ. ಆಧುನಿಕ ಜಗತ್ತಿನಲ್ಲಿ ಅಗತ್ಯವಾದ ಜೀವನಾಂಶಕ ವಿದ್ಯುತ್‌ನ ಬಗ್ಗೆ ಹೆಚ್ಚು ಒತ್ತುಕೊಡಬೇಕು ಎಂದು ಹೇಳಿದರು.ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ ಮುದಕಣ್ಣ ನವರ. ಶಿವಲಿಂಗೇಶ್ವರ ವಿದ್ಯಾಪೀಠದ ಅಧ್ಯಕ್ಷ ಪಿ.ಡಿ.ಶಿರೂರ ಮಾತನಾಡಿದರು. ಈ ಸಂದರ್ಭ ದಲ್ಲಿ ಎಚ್.ಪಿ.ರಾಮಣ್ಣನವರ, ಸಿ.ಎನ್.ಬಡ್ನಿ, ಸಿ.ವಿ.ಗೊಂದಿ, ಎಲ್. ಶಿವಕುಮಾರ ಹಾಜರಿದ್ದರು.

ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ: ಫಲಿತಾಂಶ

ವಿದ್ಯುತ್ ಉಳಿಸಿ ಜಾಗೃತ ಆಂದೋಲನದ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಫಲಿತಾಂಶ ಇಂತಿದೆ. ಪ್ರೌಢಶಾಲಾ ವಿಭಾಗದ ಭಾಷಣದಲ್ಲಿ ಬಂಕಾಪುರದ ಮಾಡರ್ನ್ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಎಂ.ಬಿ.ನದಾಫ್ ಪ್ರಥಮ, ಪ್ರಬಂಧದಲ್ಲಿ ಸ್ನೇಹಾ ಪ್ರಥಮ, ಚಿತ್ರಕಲೆಯಲ್ಲಿ ಮೇಘಾ ಮುರಿಗೆಣ್ಣನವರ ಪ್ರಥಮ, ರಸಪ್ರಶ್ನೆಯಲ್ಲಿ ಎಸ್.ಎಂ.ಸಚಿನ್ ಹಾಗೂ ನಂದಿನಿ ಬಿಚ್ಚೊರ ಪ್ರಥಮ ಸ್ಥಾನ ಪಡೆದಿದ್ದಾರೆ.ತಿಳುವಳಿಯ ಶಾಂತೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಮಾರುತಿ ದೊಡ್ಡಮನಿ ಭಾಷಣದಲ್ಲಿ ಶೈಲಾ ಕಲ್ಪಾದಿ ಪ್ರಬಂಧದಲ್ಲಿ, ಸುಮಾ ಗೌಳಿ ಚಿತ್ರಕಲೆಯಲ್ಲಿ, ಸುಶ್ಮಾ ತವರೆ ಹಾಗೂ  ಮೇಘಾ ದೇಸಾಯಿ ರಸಪ್ರಶ್ನೆಯಲ್ಲಿ ಪ್ರಶಸ್ತಿ ಗಳಿಸಿದ್ದಾರೆ.ಕಾಲೇಜು ವಿಭಾಗದ ರಸಪ್ರಶ್ನೆಯಲ್ಲಿ ಜೆ.ಎಚ್ ಕಾಲೇಜಿನ ವಿದ್ಯಾರ್ಥಿಗಳಾದ ಶಿವರಾಜ ಬಿ ಈಟಿ ಮತ್ತು ವಿಜಯಲಕ್ಷ್ಮಿ ಕುಲಕರ್ಣಿ ಪ್ರಥಮ, ರಟ್ಟಿಹಳ್ಳಿ ಎಸ್‌ಕೆ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಮೆಹಬೂಬಲಿ ಶೇತಸನದಿ ಹಾಗೂ  ದೇವರಾಜ ಬಿಕ್ಕೂರ ದ್ವಿತೀಯ ಸ್ಥಾನ ಪಡೆದಿದ್ದಾರೆ.ಚಿತ್ರಕಲೆ ಸ್ಪರ್ಧೆಯಲ್ಲಿ ಹಿರೇಕೆರೂರ ಪಿಯು ಕಾಲೇಜಿನ ಶಿವರಾಜ ದಾನಪ್ಪನವರ ಪ್ರಥಮ, ಹಾವೇರಿ ಸರ್ಕಾರಿ ಪಿಯು ಕಾಲೇಜಿನ ವಿನಾಯಕ ಬಡಿಗೇರ ದ್ವಿತೀಯ,  ಪ್ರಬಂಧ ಸ್ಪರ್ಧೆಯಲ್ಲಿ ಅನಿತಾ ಅಂಗಡಿ ಪ್ರಥಮ, ಅನೀತಾರಾಜ ಲಕ್ಷ್ಮೀಶ್ವರ ದ್ವೀತಿಯ ಸ್ಥಾನ, ಭಾಷಣ ಸ್ಪರ್ಧೆಯಲ್ಲಿ ಶಿವಬಸವಸ್ವಾಮಿ ಹಿರೇಮಠ ಪ್ರಥಮ, ಅಮೃತಾ ಸುಗಂದಿ ದ್ವಿತೀಯ ಸ್ಥಾನ ಪಡೆದಿದ್ದಾರೆ.  ರಸಪ್ರಶ್ನೆ ಸ್ಪರ್ಧೆಯಲ್ಲಿ ಸಹದೇವ ಕಮ್ಮಾರ ಹಾಗೂ ಪ್ರಕಾಶ ರಾಜಪುರೋಹಿತ ಪ್ರಥಮ ಸ್ಥಾನ, ಪುನಿತಕುಮಾರ ಕರಬಸಳ್ಳವರ ಹಾಗೂ ಬಸವರಾಜ ಮಠದ ದ್ವಿತೀಯ ಸ್ಥಾನ, ಪ್ರಬಂಧದಲ್ಲಿ ಎಸ್.ಕೆ.ರಾಜಪುರಿ ಪ್ರಥಮ ಸ್ಥಾನ, ಶ್ವೇತಾ ಕಲ್ಪಾದಿ ದ್ವೀತಿಯ ಸ್ಥಾನ, ಚಿತ್ರಕಲೆಯಲ್ಲಿ ದೇವರಾಜ ಹೊಸಕೆರಿ ಪ್ರಥಮ,, ಸುಪ್ರೀಯಾ ಹಾಗೂ ಜಿ.ಎ.ಕೂಸನೂರ ದ್ವಿತೀಯ ಸ್ಥಾನ, ಭಾಷಣ ಸ್ಪರ್ಧೈಲ್ಲಿ ಸೌಮ್ಯ ಹೂಗಾರ ಪ್ರಥಮ ಸ್ಥಾನ, ಅಕ್ಷತಾ ಪಾಟೀಲ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.