ಶನಿವಾರ, ಏಪ್ರಿಲ್ 1, 2023
23 °C

ಅಡುಗೆ ಮನೆ ಸುರಕ್ಷತೆಗೆ ಮಕ್ಕಳ ನೇತೃತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಪೆಟ್ರೋಲಿಯಂನ ಅಡುಗೆ ಅನಿಲ ಘಟಕ ಎಚ್‌ಪಿ ಗ್ಯಾಸ್, ಈಗ ವಿಭಿನ್ನ ಉದ್ದೇಶಕ್ಕಾಗಿ ಚಿತ್ರಕಲಾ ಪ್ರಕಾರಗಳನ್ನು ಬಳಸಿಕೊಳ್ಳುವ ಪ್ರಯೋಗಕ್ಕೆ ಕೈ ಹಾಕಿದೆ.

ಬೆಂಗಳೂರು ಸೇರಿದಂತೆ ದೇಶದ 24 ನಗರಗಳಲ್ಲಿ ‘ಅರಿವಿಗಾಗಿ ಕಲೆ’ ಎಂಬ ಆಂದೋಲನ ಆರಂಭಿಸಿದೆ. ಇದು ಎಚ್‌ಪಿ ಸುರಕ್ಷಾ ಸಂಚೇತನಾ ಅಭಿಯಾನದ ಭಾಗ.

ದೇಶಾದ್ಯಂತ 2,400 ವಿತರಕರ ಮೂಲಕ ಸುಮಾರು ಮೂರು ಕೋಟಿ ಮನೆಗಳನ್ನು ಎಚ್‌ಪಿ ಗ್ಯಾಸ್ ತಲುಪುತ್ತಿದೆ. ಆದ್ದರಿಂದಲೇ ಗ್ರಾಹಕರ ಹಿತರಕ್ಷಣೆಗಾಗಿ ಎಚ್‌ಪಿ ಗ್ಯಾಸ್ ಹೆಚ್ಚು ಆದ್ಯತೆ ನೀಡುತ್ತಿದೆ.

ಅಡುಗೆ ಮನೆಯಲ್ಲಿ ಗ್ಯಾಸ್ ಬಳಸುವ ಮಧ್ಯಮ, ಮೇಲ್ಮಧ್ಯಮ ವರ್ಗದ 25 ರಿಂದ 40 ವರ್ಷ ವಯಸ್ಸಿನೊಳಗಿನ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಸಂಸ್ಥೆ ಈಗ ಇದರಡಿ ಅರಿವಿಗಾಗಿ ಕಲೆ ಎಂಬ ಆಂದೋಲನ ರೂಪಿಸಿದೆ.

ಇದೊಂದು ಶಾಲಾ ಸಂಪರ್ಕ ಕಾರ್ಯಕ್ರಮ. ಈ ವರ್ಗದ ಮಹಿಳಾ ಗ್ರಾಹಕರ ತಮ್ಮ ಮಕ್ಕಳನ್ನು ಬಿಡಲು ಶಾಲೆಗೆ ಹೋಗಿ ಬರುತ್ತಾರೆ, ಮಕ್ಕಳ ಶಿಕ್ಷಣದಲ್ಲಿ ಸಕ್ರಿಯವಾಗಿ ನೆರವಾಗುತ್ತಾರೆ. ಅದಕ್ಕಾಗಿಯೇ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಶಾಲೆಗಳಲ್ಲಿ ಅನಿಮೇಷನ್ ಮತ್ತು ಮನೋರಂಜನಾ ಮಾಹಿತಿಯ ಪರಿಕರಗಳನ್ನು ಬಳಸಿ ಅಡುಗೆ ಮನೆ ಸುರಕ್ಷತೆಯ ಮಾಹಿತಿ ನೀಡಲಾಗುತ್ತದೆ.

ಇದರ ಅಂಗವಾಗಿ ಸೆಂಟ್ ಜರ್ಮೆನ್ಸ್ ಶಾಲೆಯಲ್ಲಿ ಕಾರ್ಯಕ್ರಮವೊಂದು ನಡೆಯಿತು. ನಗರದ 15 ವಿವಿಧ ಶಾಲೆಗಳಲ್ಲಿ ಓದುತ್ತಿರುವ 5 ರಿಂದ 10 ವರ್ಷದೊಳಿಗಿನ 900 ಮಕ್ಕಳನ್ನು ಈ ಸಂದರ್ಭದಲ್ಲಿ ಸುರಕ್ಷತಾ ಏಜೆಂಟರೆಂದು ಘೋಸಲಾಯಿತು. ಅಡುಗೆ ಮನೆ ಸುರಕ್ಷತೆಯ ಬಗ್ಗೆ ಅನಿಮೇಷನ್ ಚಿತ್ರ, ಚಿತ್ರ ರಚನೆ ಸ್ಪರ್ಧೆ ಇತ್ಯಾದಿಗಳ ಮೂಲಕ ಅರಿವು ಮೂಡಿಸುವ ಪ್ರಯತ್ನಗಳಿಗೆ ಒಟ್ಟು 6 ಸಾವಿರ ಮಕ್ಕಳು ಸಾಕ್ಷಿಯಾದರು. ‘ನನ್ನ ಅಮ್ಮನ ಸುರಕ್ಷತೆ ಮೊದಲು’ ಎಂಬ ಕಿರುಹೊತ್ತಿಗೆ ಒಳಗೊಂಡ ಸುರಕ್ಷತಾ ಕಿಟ್‌ಗಳನ್ನು ಮಕ್ಕಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಚ್‌ಪಿ ಗ್ಯಾಸ್‌ನ ಅಡುಗೆ ಅನಿಲ ಮಾರಾಟ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಸುಬೀರ್ ಸರ್ಕಾರ್ ಅವರು ‘ಗ್ರಾಹಕರ ರಕ್ಷಣೆಗೆ ಒತ್ತು ನೀಡುತ್ತಲೇ ಬಂದಿರುವ ಎಚ್‌ಪಿ ಗ್ಯಾಸ್, ಮಕ್ಕಳ ಮೂಲಕ ಕುಟುಂಬದ ಸದಸ್ಯರಿಗೂ ಮುನ್ನೆಚ್ಚರಿಕೆಯ ಮಾತುಗಳನ್ನು ತಲುಪಿಸಲು ಬಯಸುತ್ತದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.