ಸೋಮವಾರ, ಜೂನ್ 14, 2021
26 °C

ಅಡ್ವಾಣಿ ನಿಷ್ಠನ ಬದಲು ಪರೇಶ್‌ ರಾವಲ್‌ಗೆ ಟಿಕೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೆ ಟಿಕೆಟ್‌ ನೀಡಿಕೆಯಲ್ಲಿ ಉಂಟಾದ ವಿವಾ­ದದ ಬಿಸಿ ಆರುವ ಮೊದಲೇ ಹೊಸ­ದೊಂದು ವಿವಾದ ಸೃಷ್ಟಿಯಾಗುವ ಅಪಾಯ ಬಿಜೆಪಿಗೆ ಎದುರಾಗಿದೆ. ಅಡ್ವಾಣಿ ಅವರ ನಿಷ್ಠರಾಗಿರುವ, ಅಹಮದಾಬಾದ್‌ ಪೂರ್ವದ ಹಾಲಿ ಸಂಸದ ಹರೀನ್‌ ಪಾಠಕ್‌ ಅವರಿಗೆ ಟಕೆಟ್‌ ನಿರಾಕರಿಸಿ ನಟ ಪರೇಶ್‌ ರಾವಲ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.ಭಾನುವಾರ ಬಿಡುಗಡೆ ಮಾಡಲಾದ ಒಂಬತ್ತು ಅಭ್ಯರ್ಥಿಗಳ ಪಟ್ಟಿಯಲ್ಲಿ ಪರೇಶ್‌ ರಾವಲ್‌ ಹೆಸರು ಪ್ರಕಟಿಸ­ಲಾಗಿದೆ.ಅಡ್ವಾಣಿ ಅವರು ಗಾಂಧಿನಗರ­ದಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದ­ರಿಂದಾಗಿ ಮಧ್ಯಪ್ರದೇಶ ಬಿಜೆಪಿ ಕಚೇರಿ ಉಸ್ತುವಾರಿ ಅಲೋಕ್‌ ಸಂಜರ್‌ ಅವ­ರಿಗೆ ಭೋಪಾಲ್‌ ಟಿಕೆಟ್‌ ನೀಡಲಾಗಿದೆ. ಅಡ್ವಾಣಿ ಅವರಿಗಾಗಿ ಹಾಲಿ ಸಂಸದ ಕೈಲಾಶ್ ಜೋಷಿ ಅವರು ಕ್ಷೇತ್ರ ಬಿಟ್ಟುಕೊಟ್ಟಿದ್ದರಿಂದ ಇಲ್ಲಿಗೆ ಹೊಸದಾಗಿ ಅಭ್ಯರ್ಥಿಯನ್ನು ಪ್ರಕಟಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.