ಬಂಟ್ವಾಳ: ತಾಲ್ಲೂಕಿನ ಶಂಭೂರು ಸಮೀಪದ ಪೆರ್ಲ ನೇತ್ರಾವತಿ ನದಿಯಲ್ಲಿ ಎರಡು ವರ್ಷ ಹಿಂದೆ ನಿರ್ಮಾ ಣ ಗೊಂಡ ಆಂಧ್ರ ಮೂಲದ ಎಎಂಆರ್ ಕಿರು ಜಲವಿದ್ಯುತ್ ಘಟಕದ ಅಣೆಕಟ್ಟೆ ಯಲ್ಲಿ ಶುಕ್ರವಾರ ಬೆಳಿಗ್ಗೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮೃತ ದೇಹ ಪತ್ತೆಯಾಗಿದೆ.

ಮೃತರನ್ನು ಚಿಕ್ಕಮಗಳೂರಿನ ನಿವಾಸಿ ಎನ್.ಶೇಖರ ನಾಯ್ಕ (73) ಎಂದು ಗುರುತಿಸಲಾಗಿದೆ. ಅವರು ಚಿಕ್ಕಮ ಗಳೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ನಿವೃತ್ತ ಎಸ್ಐ ಆಗಿದ್ದು, ಕೆಲವು ದಿನಗಳ ಹಿಂದೆ ಪುತ್ತೂರಿನ ಮುಕ್ರಂಪಾಡಿಯಲ್ಲಿರುವ ಪುತ್ರಿಯ ಮನೆಗೆ ಬಂದಿದ್ದರು ಎನ್ನಲಾಗಿದೆ.

ಇದೇ ಗುರುವಾರ ಬೆಳಿಗ್ಗೆ ಉಪ್ಪಿನಂಗಡಿಯ ಸಂಬಂಧಿ ಜಗದೀಶ ಎಂಬವರ ಮನೆಗೆ ತೆರಳಿದ್ದ ಅವರು ನಂತರ ನಾಪತ್ತೆಯಾಗಿದ್ದರು ಎನ್ನಲಾಗಿದೆ.

ಇಲ್ಲಿನ ಸಹಸ್ರಲಿಂಗೇಶ್ವರ ದೇವಳದ ಬಳಿ ಶೇಖರ ನಾಯ್ಕ ಅವರ ಚಪ್ಪಲಿ ಮತ್ತು ಊರುಗೋಲು ಪತ್ತೆಯಾಗಿತ್ತು. ಇದರಿಂದಾಗಿ ಅವರು ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಶುಕ್ರವಾರ ಬೆಳಿಗ್ಗೆ ಶಂಭೂರು ನೇತ್ರಾವತಿ ನದಿಯಲ್ಲಿ ಶವ ತೇಲಾಡುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ಕಸಿ ತಜ್ಞರ ತರಬೇತಿ ಕಾರ್ಯಾಗಾರ
ಚಿಕ್ಕಮಗಳೂರು: ಪಶ್ಚಿಮಘಟ್ಟ ಕಾರ್ಯಪಡೆ ಮತ್ತು ಕದಂಬ ಸಂಸ್ಥೆ ಮಲೆನಾಡು ವತಿಯಿಂದ ಕಸಿ ತಜ್ಞರ ಕಾರ್ಯಾಗಾರವು ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಆಶ್ರಯದಲ್ಲಿ ಬನವಾಸಿ ರಸ್ತೆ ಶಿರಸಿಯ ಅರಣ್ಯ ಮಹಾವಿದ್ಯಾಲಯದಲ್ಲಿ ಇದೇ 16 ಮತ್ತು 17ರಂದು ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗ್ರಾಪ್ಟಿಂಗ್, ಕಸಿ, ಗೂಟಿ, ಬಡ್ಡಿಂಗ್ ಮಾಡುವ ತಜ್ಞರು, ತಳಿ ಅಭಿವೃದ್ಧಿ ಮತ್ತು ಸಂರಕ್ಷಣೆ ಕಾರ್ಯದಲ್ಲಿ ತೊಡಗಿರುವ ರೈತರು, ಸಂಸ್ಥೆಗಳು ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಮಾಹಿತಿಗೆ ಮೊ. 9242185319 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.