ಸೋಮವಾರ, ಮಾರ್ಚ್ 1, 2021
29 °C

ಅಣ್ವಸ್ತ್ರ ಸೇರಿ ವಿವಿಧ ವಿಷಯ ಚರ್ಚೆ:ಮುಂದಿನ ವಾರ ಭಾರತಕ್ಕೆ ಹಿಲರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಣ್ವಸ್ತ್ರ ಸೇರಿ ವಿವಿಧ ವಿಷಯ ಚರ್ಚೆ:ಮುಂದಿನ ವಾರ ಭಾರತಕ್ಕೆ ಹಿಲರಿ

ವಾಷಿಂಗ್ಟನ್ (ಪಿಟಿಐ): ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು, ಅಣ್ವಸ್ತ್ರ ಪ್ರಸರಣ ನಿಷೇಧ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ .ನವದೆಹಲಿ ಮತ್ತು ಕೊಲ್ಕತ್ತಗಳಲ್ಲಿ ವಿವಿಧ ಸಭೆಗಳಲ್ಲಿ ಪಾಲ್ಗೊಳ್ಳುವ ಅವರು, ಎರಡೂ ದೇಶಗಳ ನಡುವಿನ ಪ್ರಮುಖ ದಿಪಕ್ಷೀಯ ವಿಷಯಗಳ ಬಗ್ಗೆ ಉನ್ನತ ಭಾರತೀಯ ನಾಯಕರೊಂದಿಗೆ ಚರ್ಚಿಸುವರು. ಇವುಗಳಲ್ಲಿ ಪ್ರಮುಖವಾಗಿ ಆಫ್ಘಾನಿಸ್ತಾನ, ಪಾಕಿಸ್ತಾನ, ಚೀನಾ, ಮ್ಯಾನ್ಮಾರ್ ಸೇರಿದಂತೆ ಹಲವು ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಸಮಾಲೋಚಿಸುವರು ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ವಿಕ್ಟೋರಿಯಾ ನುಲಂದ್ ತಿಳಿಸಿದರು.ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗರಿಕ ಪರಮಾಣು ಒಪ್ಪಂದದ ಕುರಿತು ಕೇಳಿದ ಪ್ರಶ್ನೆಗೆ, ಈ ವಿಷಯದಲ್ಲಿ `ಭಾರತ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು, ನಾವು ಅದನ್ನು ನಿರೀಕ್ಷಿಸುತ್ತಿದ್ದೇವೆ~ ಎಂದು ಉತ್ತರಿಸಿದರು.ದಕ್ಷಿಣ ಏಷ್ಯಾದ ನೆರೆಯ ದೇಶಗಳಾದ ಭಾರತ ಮತ್ತು ಪಾಕಿಸ್ತಾನ ವಾರಾವಧಿಯಲ್ಲಿ ಅಣ್ವಸ್ತ್ರ ಕ್ಷಿಪಣಿ ಉಡಾವಣೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಣ್ವಸ್ತ್ರ ಶಕ್ತಿ ರಾಷ್ಟ್ರಗಳು ಸಂಯಮ ಕಾಯ್ದುಕೊಳ್ಳುವಂತೆ ಸೂಚಿಸಿದರು.ಮೇ 3 ಮತ್ತು 4ರಂದು ಬೀಜಿಂಗ್‌ನಲ್ಲಿ ನಡೆಯುವ ಅಮೆರಿಕ-ಚೀನಾ ತಂತ್ರಗಾರಿಕೆ ಮತ್ತು ಆರ್ಥಿಕ ವ್ಯವಹಾರಗಳ ಮಾತುಕತೆಯಲ್ಲಿ ಭಾಗವಹಿಸುವ ಅವರು, ಮೇ 5ರಿಂದ 8ರವರೆಗೆ ಭಾರತ ಮತ್ತು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುವರು. ಭಾರತಕ್ಕೆ ಹಿಲರಿಯವರ ದಿಢೀರ್ ಮತ್ತು ಅಚ್ಚರಿಯ ಭೇಟಿ ಇದಾಗಿದ್ದು, ಹಲವು ನಿರೀಕ್ಷೆಗಳನ್ನು ಹೊಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.