ಅತ್ಯಾಚಾರಕ್ಕೆ ಒಳಗಾದ ಬಾಲೆಯ ನಗ್ನ ಮೆರವಣಿಗೆ

7

ಅತ್ಯಾಚಾರಕ್ಕೆ ಒಳಗಾದ ಬಾಲೆಯ ನಗ್ನ ಮೆರವಣಿಗೆ

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವೆಹಾರಿ ಗ್ರಾಮದಲ್ಲಿ ಭೂಮಾಲೀಕರೊಬ್ಬರ ಕಾಮತೃಷೆ ಈಡೇರಿಸಿಲ್ಲ ಎಂಬ ಕಾರಣಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಿ ಊರಲ್ಲಿ ನಗ್ನ ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ವರದಿಯಾಗಿದೆ.ಈ ಬಾಲಕಿ ತನ್ನ ಸೊತ್ತು ಎಂದು ಹೇಳಿಕೊಂಡ ಇಜಾಜ್ ಅಹ್ಮದ್ ಎಂಬ ಭೂಮಾಲೀಕ ತನ್ನ ಸಹಚರರ ಜತೆಗೆ ಮಾರಕಾಸ್ತ್ರಗಳೊಂದಿಗೆ ಬಂದು  ವಯೋವೃದ್ಧ ಅಜ್ಜ ಮತ್ತು ಮಾವನನ್ನು ಗಾಯಗೊಳಿಸಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ. ಇಷ್ಟಕ್ಕೇ ನಿಲ್ಲದೆ ಊರಲ್ಲಿ ನಗ್ನ ಮೆರವಣಿಗೆ ಮಾಡಲಾಯಿತು ಎಂದು ಬಾಲಕಿಯ ಸಹೋದರನ ಹೇಳಿಕೆ ಉಲ್ಲೇಖಿಸಿ ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ದೈನಿಕ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry