ಗುರುವಾರ , ಏಪ್ರಿಲ್ 15, 2021
23 °C

ಅಥಣಿಯಲ್ಲಿ ಕಿತ್ತೂರು ಚನ್ನಮ್ಮ ವಿಜಯೋತ್ಸವ 10ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಗಳಿ (ಅಥಣಿ): ಅಥಣಿಯಲ್ಲಿ ಇದೇ 10ರಂದು ರಾಜ್ಯ ಮಟ್ಟದ ವೀರರಾಣಿ ಕಿತ್ತೂರ ಚನ್ನಮ್ಮ ವಿಜಯೋತ್ಸವ ಹಾಗೂ ಪಂಚಮಸಾಲಿ ಸಮಾಜದ ಸಮಾವೇಶ, ರಾಜ್ಯ ಮಟ್ಟದ ಹರ ಸೈನ್ಯ ಸಮಾವೇಶವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ವೀರ ಶೈವ ಪಂಚಮಸಾಲಿ ಸಂಘದ ಅಧ್ಯಕ್ಷ ಬಸವರಾಜ ದಿಂಡೂರ ಹೇಳಿದರು.ಇಲ್ಲಿಗೆ ಸಮೀಪದ ನಂದೇಶ್ವರ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕಳೆದ ವರ್ಷ ನಡೆಸಿದ ಜನಗಣತಿಯ ಜಾತಿವಾರು ಮಾಹಿತಿಯನ್ನು ಶೀಘ್ರದಲ್ಲಿ ಶ್ವೇತಪತ್ರದ ಮೂಲಕ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.ಕೇಂದ್ರ ಸರ್ಕಾರ ನಾಣ್ಯದ ಮೇಲೆ ವೀರ ರಾಣಿ ಕಿತ್ತೂರ ಚನ್ನಮ್ಮನ ಮುದ್ರೆ ಹಾಕಬೇಕೆಂದು ಆಗ್ರಹಿಸಿದ ಅವರು ಚನ್ನಮ್ಮ ವಿಜಯೋತ್ಸವದ ಅದ್ದೂರಿ ಆಚರಣೆ ಇರಲಿ ಆದರೆ ರಜೆ ಘೋಷಣೆ ಬೇಡ. ಆ ದಿನ ಎಲ್ಲ ಅಧಿಕಾರಿಗಳು ಒಂದು ಗಂಟೆ ಹೆಚ್ಚು ಕೆಲಸ ಮಾಡಲಿ ಎಂದು ದಿಂಡೂರ ಒತ್ತಾಯಿಸಿದರು.ರಾಜ್ಯದಲ್ಲಿ ಜಾತಿ, ವರ್ಣ, ಮತ- ಭೇದವಿಲ್ಲದೆ ಆರ್ಥಿಕವಾಗಿ ಹಿಂದುಳಿದ ವರಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ 10ರಷ್ಟು ರಿಯಾಯತಿ ಕೊಡಬೇಕು. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುವುದು ಅನಿವಾರ್ಯ ಎಂದರು.ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 57 ಮತಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜದ ಬಾಂಧವರು ಸ್ಪರ್ಧಿಸಲಿ ದ್ದಾರೆ. ಈ ಬಾರಿ ರಾಜ್ಯಮಟ್ಟದ ವೀರ ರಾಣಿ ಕಿತ್ತೂರ ಚನ್ನಮ್ಮ ಪ್ರಶಸ್ತಿಯನ್ನು ಶ್ರೀ ರೇಣುಕಾ ಶುಗರ್ಸ್‌ ಅಧ್ಯಕ್ಷೆ ವಿದ್ಯಾ ಮುರಕುಂಬಿ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು.9ರಂದು `ವ್ಯವಸಾಯದಿಂದ ವ್ಯಾಪಾರ ಕಡೆಗೆ~ ಎಂಬ ಕಾರ್ಯಕ್ರಮ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಶಂಕರಣ್ಣ ಸಂಕನ್ನವರ ಅವರಿಂದ ಮನರಂಜನೆ ಕಾರ್ಯಕ್ರಮ ನಡೆಯಲಿದೆ. 10ರಂದು 2008 ಕುಂಭೋತ್ಸವ 10 ಸಾವಿರ ಹರ ಸೈನ್ಯ ಚನ್ನಮ್ಮನ ವಿಜಯೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.ರಾಜ್ಯ ಉಪಾಧ್ಯಕ್ಷ ಈರಣ್ಣ ಬೆಳಕೂಡ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ ಹುಳ್ಳೇರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಮೇಶಗೌಡ ಪಾಟೀಲ  ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.