ಬೆಂಗಳೂರು: ಭರವಸೆಯ ಅಥ್ಲೀಟ್ಗಳಾದ ಮೇಘನಾ ಶೆಟ್ಟಿ ಮತ್ತು ಫಕೀರಪ್ಪ ವಿ. ಬಂಗಿ ಒಂಬತ್ತನೇ ರಾಷ್ಟ್ರೀಯ ಯುವ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಮಿಂಚಿನ ಪ್ರದರ್ಶನದ ಮೂಲಕ ಕರ್ನಾಟಕಕ್ಕೆ ಚಿನ್ನ ತಂದಿತ್ತರು.

ಅಖಿಲ ಭಾರತ ಅಥ್ಲೆಟಿಕ್ ಫೆಡರೇಷನ್ ಮತ್ತು ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಆಶ್ರಯದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಟದ ಎರಡನೇ ದಿನವಾದ ಶನಿವಾರ ಕರ್ನಾಟಕ ನಾಲ್ಕು ಚಿನ್ನ ಮತ್ತು ಎರಡು ಕಂಚಿನ ಪದಕ ಗೆದ್ದುಕೊಂಡಿತು.

ಹೈಜಂಪ್ನಲ್ಲಿ ಎರಡೂ ಚಿನ್ನ ರಾಜ್ಯಕ್ಕೆ ಲಭಿಸಿತು. ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ ಜೆಸ್ಸಿ ಸಂದೇಶ್ ಹಾಗೂ ಸೃಷ್ಟಿ ಸುನಿಲ್ ಅಗ್ರಸ್ಥಾನ ಪಡೆದರು. ಎರಡನೇ ದಿನ ನೆರೆಯ ಕೇರಳಕ್ಕೆ ತಕ್ಕ ಪೈಪೋಟಿ ನೀಡಲು ಕರ್ನಾಟಕಕ್ಕೆ ಸಾಧ್ಯವಾಯಿತು.

ಬಾಲಕಿಯರ 100 ಮೀ. ಹರ್ಡಲ್ಸ್ನಲ್ಲಿ ಮೇಘನಾ 14.06 ಸೆಕೆಂಡ್ಗಳಲ್ಲಿ ಕೂಟ ದಾಖಲೆಯೊಂದಿಗೆ ಬಂಗಾರ ಜಯಿಸಿದರು. ಆದರೆ ಅವರು ತಮಿಳುನಾಡಿನ ಗಾಯತ್ರಿ ಗೋವಿಂದರಾಜನ್ ಹೆಸರಿನಲ್ಲಿರುವ ರಾಷ್ಟ್ರೀಯ ದಾಖಲೆ (14.02) ಮುರಿಯುವ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡರು. ಕೇರಳದ ಟಿ.ಎಸ್. ಆರ್ಯ (14.81) ಮತ್ತು ತಮಿಳುನಾಡಿನ ಧನಲಕ್ಷ್ಮೀ ಭಾಸ್ಕರನ್ (15.03) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಮೌಂಟ್ ಕಾರ್ಮೆಲ್ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಮೇಘನಾ ತಾನೊಬ್ಬಳು ಭವಿಷ್ಯದ ಅಥ್ಲೀಟ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಜೂನಿಯರ್ ಫೆಡರೇಷನ್ ಕಪ್ನಲ್ಲಿ ಚಿನ್ನ ಜಯಿಸಿದ್ದ ಅವರು ಕಳೆದ ತಿಂಗಳು ಹೈದರಾಬಾದ್ನಲ್ಲಿ ನಡೆದ ಅಂತರರಾಜ್ಯ ಸೀನಿಯರ್ ಅಥ್ಲೆಟಿಕ್ ಕೂಟದಲ್ಲಿ ಕಂಚು ಪಡೆದಿದ್ದರು.
ಮೊದಲ ಚಿನ್ನದ ಸಂಭ್ರಮದಲ್ಲಿದ್ದ ಕೆಲವೇ ನಿಮಿಷಗಳಲ್ಲಿ ಆತಿಥೇಯ ತಂಡಕ್ಕೆ ಎರಡನೇ ಬಂಗಾರ ಲಭಿಸಿತು. ಬಾಲಕರ 110 ಮೀ. ಹರ್ಡಲ್ಸ್ನಲ್ಲಿ ಫಕೀರಪ್ಪ ಸ್ವರ್ಣ ತಂದಿತ್ತರು. ಬೆಳಗಾವಿಯ ಬಿಜಗುಪ್ಪಿ ಗ್ರಾಮದ ಈ ಅಥ್ಲೀಟ್ 14.51 ಸೆಕೆಂಡ್ಗಳಲ್ಲಿ ಗುರಿ ತಲುಪಿದರು.

ಧಾರವಾಡದ ಕರ್ನಾಟಕ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಯಾಗಿರುವ ಫಕೀರಪ್ಪ ಕೆಲ ದಿನಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ ಕೂಟದಲ್ಲಿ 14.40 ಸೆಕೆಂಡ್ಗಳಲ್ಲಿ ಗುರಿ ತಲುಪಿದ್ದರು. ಕರ್ನಾಟಕದವರೇ ಆದ ಸಿ. ಶಿವಕುಮಾರ್ (14.91) ಕಂಚು ಗೆದ್ದರು. ಬೆಳ್ಳಿ ಪದಕ ಜಾರ್ಖಂಡ್ನ ರಾಹುಲ್ ಕುಮಾರ್ ಮಿಶ್ರಾಗೆ (14.63) ಒಲಿಯಿತು.

`ರಾಷ್ಟ್ರೀಯ ಜೂನಿಯರ್ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದೆ. ಆದರೆ ಯುವ ಚಾಂಪಿಯನ್ಷಿಪ್ನಲ್ಲಿ ದೊರೆತ ಮೊದಲ ಪದಕ ಇದು. ಕಳೆದ ಬಾರಿ ಈ ಕೂಟಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲನಾಗಿದ್ದೆ. ಬಂಗಾರ ಜಯಿಸಿದ್ದು ಹೆಚ್ಚಿನ ಸಂತಸ ಉಂಟುಮಾಡಿದೆ~ ಎಂದು ಫಕೀರಪ್ಪ ಪ್ರತಿಕ್ರಿಯಿಸಿದರು.

ಬಾಲಕರ ಹೈಜಂಪ್ನಲ್ಲಿ ಸಂದೇಶ್ 2.04 ಮೀ. ಎತ್ತರ ಜಿಗಿಯುವಲ್ಲಿ ಯಶಸ್ವಿಯಾದರು. ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದ ಕೇರಳದ ಶ್ರೀನಿತ್ ಮೋಹನ್ ಎರಡನೇ ಸ್ಥಾನ ಪಡೆದರು. ಬಾಲಕಿಯರ ಹೈಜಂಪ್ನಲ್ಲಿ ಸೃಷ್ಟಿ 1.54 ಮೀ. ಎತ್ತರ ಜಿಗಿದರು.

ಬಾಲಕಿಯರ 200 ಮೀ. ಓಟದಲ್ಲಿ ಒಡಿಶಾದ ದ್ಯುತೀ ಚಂದ್ ಕೂಟ ಹಾಗೂ ರಾಷ್ಟ್ರೀಯ ದಾಖಲೆ ಸರಿಗಟ್ಟುವ ಸಾಧನೆಯೊಂದಿಗೆ ಸ್ವರ್ಣ ಜಯಿಸಿದರು. 24.49 ಸೆಕೆಂಡ್ಗಳಲ್ಲಿ ಗುರಿ ತಲುಪಿದ ಅವರು ತಮ್ಮದೇ ರಾಜ್ಯದ ರಂಜಿತಾ ಮಹಾಂತ (24.49 ಸೆ.) ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದರು. 100 ಮೀ. ಓಟದಲ್ಲಿ ಅಗ್ರಸ್ಥಾನ ಪಡೆದಿದ್ದ ದ್ಯುತೀ ಈ ಮೂಲಕ ಸ್ವರ್ಣ `ಡಬಲ್~ ಗೌರವ ಪಡೆದರು.

ಎರಡನೇ ದಿನದ ಫಲಿತಾಂಶಗಳು:
ಬಾಲಕರ ವಿಭಾಗ: 200 ಮೀ. ಓಟ: ರಮಾನಂದ್ (ಮಧ್ಯಪ್ರದೇಶ)-1,ಕಂಬರ್ದೀಪ್ ಸಿಂಗ್ (ಪಂಜಾಬ್)-2, ಗೌರಂಗ್ ರಾಜೇಂದರ್ (ಮಹಾರಾಷ್ಟ್ರ)-3, ಕಾಲ: 22.08 ಸೆ.; 110 ಮೀ. ಹರ್ಡಲ್ಸ್: ಫಕೀರಪ್ಪ ವಿ ಬಂಗಿ (ಕರ್ನಾಟಕ)-1, ರಾಹುಲ್ ಕುಮಾರ್ ಮಿಶ್ರಾ (ಜಾರ್ಖಂಡ್)-2, ಸಿ. ಶಿವಕುಮಾರ್ (ಕರ್ನಾಟಕ)-3, ಕಾಲ: 14.51 ಸೆ.; 2000 ಮೀ. ಸ್ಟೀಪಲ್ಚೇಸ್: ಲವ್ರಿಂದರ್ ಸಿಂಗ್ (ಜಾರ್ಖಂಡ್)-1, ವಿವೇಕ್ (ರಾಜಸ್ತಾನ)-2, ಶಿಜೊ ರಾಜನ್ (ಕೇರಳ)-3, ಕಾಲ: 6:04.14 ಸೆ.; ಹೈಜಂಪ್: ಜೆಸ್ಸಿ ಸಂದೇಶ್ (ಕರ್ನಾಟಕ)-1, ಶ್ರೀನಿತ್ ಮೋಹನ್ (ಕೇರಳ)-2, ಅಜಯ್ ಕುಮಾರ್ (ಹರಿಯಾಣ)-3, ಎತ್ತರ: 2.04 ಮೀ.; ಡಿಸ್ಕಸ್ ಥ್ರೋ: ಸಚಿನ್ (ಹರಿಯಾಣ)-1, ಅಶೋಕ್ ಕುಮಾರ್ (ಮಧ್ಯಪ್ರದೇಶ)-2, ರಜತ್ ಕುಮಾರ್ ಎಂ.ಸಿ. (ಒಡಿಶಾ)-3, ದೂರ: 56.67 ಮೀ.; ಜಾವೆಲಿನ್ ಥ್ರೋ: ಪರ್ವಿಂದರ್ ಕುಮಾರ್ (ಹರಿಯಾಣ)-1, ಸತ್ಯೇಂದ್ರ ಕುಮಾರ್ (ಉತ್ತರ ಪ್ರದೇಶ)-2, ಶಿವಪಾಲ್ ಸಿಂಗ್ (ಉತ್ತರ ಪ್ರದೇಶ)-3, ದೂರ: 66.09 ಮೀ. (ಕೂಟ ದಾಖಲೆ); ಅಕ್ಟಾಥ್ಲಾನ್: ಅಕಿತ್ ಸಾನಿ (ಹರಿಯಾಣ)-1, ಅಮೋಲಕ್ ಸಿಂಗ್ (ಮಹಾರಾಷ್ಟ್ರ)-2, ಅಮಲ್ ಮನೋಹರ್ (ಕೇರಳ)-3, ಪಾಯಿಂಟ್: 5539

ಬಾಲಕಿಯರ ವಿಭಾಗ: 200 ಮೀ. ಓಟ: ದ್ಯುತೀ ಚಂದ್ (ಒಡಿಶಾ)-1, ರುಮಾ ಸರ್ಕಾರ್ (ಪಶ್ಚಿಮ ಬಂಗಾಳ)-2, ಹಿಮಾಶ್ರೀ ರಾಯ್ (ಪಶ್ಚಿಮ ಬಂಗಾಳ)-3, ಕಾಲ: 24.49 ಸೆ. (ಕೂಟ/ ರಾಷ್ಟ್ರೀಯ ದಾಖಲೆ); 100 ಮೀ. ಹರ್ಡಲ್ಸ್: ಮೇಘನಾ ಶೆಟ್ಟಿ (ಕರ್ನಾಟಕ)-1, ಟಿ.ಎಸ್. ಆರ್ಯ (ಕೇರಳ)-2, ಧನಲಕ್ಷ್ಮೀ (ತಮಿಳುನಾಡು)-3, ಕಾಲ: 14.06 ಸೆ. (ಕೂಟ ದಾಖಲೆ) ; 2000 ಮೀ. ಸ್ಟೀಪಲ್ಚೇಸ್: ನೇಹಾ (ಮಧ್ಯ ಪ್ರದೇಶ)-1, ಸಫೀದಾ ಎಂ.ಪಿ. (ಕೇರಳ)-2, ಲವ್ಲಿ ತಿವಾರಿ (ಮಧ್ಯಪ್ರದೇಶ)-3, ಕಾಲ: 8:24.71 ಸೆ.; ಹೈಜಂಪ್: ಸೃಷ್ಟಿ ಸುನಿಲ್ (ಕರ್ನಾಟಕ)-1, ಕೆ. ನಿಕಿತ್ (ಮಹಾರಾಷ್ಟ್ರ)-2, ಪಿ.ಜಿ. ಅಂಕಿತಾ (ಕೇರಳ)-3, ಎತ್ತರ: 1.54 ಮೀ.; ಡಿಸ್ಕಸ್ ಥ್ರೋ: ಮನೀಷಾ (ಹರಿಯಾಣ)-1, ಜ್ಯೋತಿ (ಹರಿಯಾಣ)-2, ಜೆ.ಎಸ್. ಪ್ರಿಯಾಂಕಾ (ಕರ್ನಾಟಕ)-3, ದೂರ: 39.62 ಮೀ. ; ಜಾವೆಲಿನ್ ಥ್ರೋ: ಕುಮಾರಿ ಶರ್ಮಿಳಾ (ಹರಿಯಾಣ)-1, ಅಭಾ ಖಾತೂನ್ (ಪಶ್ಚಿಮ ಬಂಗಾಳ)-2, ಸಿ.ಕೆ. ಪ್ರಜೀತಾ (ಕೇರಳ)-3, ದೂರ: 47.09 ಮೀ. (ಕೂಟ/ ರಾಷ್ಟ್ರೀಯ ದಾಖಲೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.