ಬೆಂಗಳೂರು: ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಮಿಂಚಿನ ಸಂಚಾರ ಮೂಡಿಸಿದ ಒಡಿಶಾದ ದ್ಯುತೀ ಚಂದ್ 9ನೇ ರಾಷ್ಟ್ರೀಯ ಯುವ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಬಾಲಕಿಯರ 100 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದು `ವೇಗದ ಓಟಗಾರ್ತಿ~ ಎನಿಸಿಕೊಂಡರು.

ಅಖಿಲ ಭಾರತ ಅಥ್ಲೆಟಿಕ್ ಫೆಡರೇಷನ್ ಮತ್ತು ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಆಶ್ರಯದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ಕೂಟದ ಮೊದಲ ದಿನದ ಗೌರವವನ್ನು ದ್ಯುತೀ ತಮ್ಮದಾಗಿಸಿಕೊಂಡರು. 11.85 ಸೆಕೆಂಡ್ಗಳಲ್ಲಿ ಓಟ ಪೂರೈಸಿದ ಅವರು ಅಗ್ರಸ್ಥಾನ ಪಡೆದರು. ದ್ಯುತೀ ಚಂದ್ ರಾಷ್ಟ್ರೀಯ ದಾಖಲೆಯ ಸಾಧನೆ ಹೀಟ್ಸ್ ನಲ್ಲಿ ಮೂಡಿಬಂತು. 11.80 ಸೆಕೆಂಡ್ಗಳಲ್ಲಿ ಅವರು ನಿಗದಿತ ದೂರ ಕ್ರಮಿಸಿದರು. ಒಡಿಶಾದವರೇ ಆದ ರಂಜಿತಾ ಮಹಾಂತ 2010 ರಲ್ಲಿ ಸ್ಥಾಪಿಸಿದ್ದ ದಾಖಲೆಯನ್ನು (12.08 ಸೆ.) ದ್ಯುತೀ ಮುರಿದರು.

ತಮಿಳುನಾಡಿನ ಆಗಸ್ಟಿನ್ ಯೇಸುದಾಸ್ ಬಾಲಕರ 100 ಮೀ. ಓಟವನ್ನು 10.79 ಸೆಕೆಂಡ್ಗಳಲ್ಲಿ ಪೂರೈಸಿ ಕೂಟ ದಾಖಲೆಯೊಂದಿಗೆ ಬಂಗಾರ ಜಯಿಸಿದರು. ಮಹಾರಾಷ್ಟ್ರದ ಹರಗೋವಿಂದ ರಾಯ್ (10.93 ಸೆ.) ಹೊಂದಿದ್ದ ದಾಖಲೆಯನ್ನು ಅವರು ಮುರಿದರು. ಆದರೆ ರಾಷ್ಟ್ರೀಯ ದಾಖಲೆ (10.78 ಸೆ.) ಸ್ಥಾಪಿಸುವ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡರು.

ಕೇರಳದ ನಯನಾ ಜೇಮ್ಸ ಬಾಲಕಿಯರ ಲಾಂಗ್ಜಂಪ್ನಲ್ಲಿ ಕೂಟ ದಾಖಲೆಯೊಂದಿಗೆ ಸ್ವರ್ಣ ಜಯಿಸಿದರು. ತಮ್ಮ ಮೊದಲ ಪ್ರಯತ್ನದಲ್ಲೇ ಅವರು 5.94 ಮೀ. ದೂರ ಜಿಗಿದರು. ಈ ಮೂಲಕ ಕರ್ನಾಟಕದ ಜಿ.ಎಂ. ಐಶ್ವರ್ಯಾ 2010 ರಲ್ಲಿ ಸ್ಥಾಪಿಸಿದ್ದ ದಾಖಲೆ (5.87 ಮೀ.) ಮುರಿದರು. ಕೇರಳದವರೇ ಆದ ಜೆನಿಮೋಳ್ ಜಾಯ್ ಬೆಳ್ಳಿ ಗೆದ್ದರೆ ಕರ್ನಾಟಕದ ಪ್ರಣೀತಾ ಪ್ರದೀಪ್ (5.74 ಮೀ.) ಕಂಚು ಪಡೆದರು.

ಈ ಪದಕ ಒಳಗೊಂಡಂತೆ ಕರ್ನಾಟಕ ಮೊದಲ ದಿನ ಒಟ್ಟು ನಾಲ್ಕು ಕಂಚು ಗೆದ್ದುಕೊಂಡಿತು. ಬಾಲಕರ ಶಾಟ್ಪಟ್ನಲ್ಲಿ ಸಾಯಿರಾಜ್ (15.15 ಮೀ), ಲಾಂಗ್ಜಂಪ್ನಲ್ಲಿ ಸೂರಜ್ ಎಂ (7.00 ಮೀ) ಹಾಗೂ ಬಾಲಕಿಯರ ಶಾಟ್ಪಟ್ನಲ್ಲಿ ರಂಜನಾ ನಾರಾಯಣ ಬದ್ರಿ (11.82 ಮೀ.) ಮೂರನೇ ಸ್ಥಾನ ಪಡೆದರು.

ಮೊದಲ ದಿನದ ಸ್ಪರ್ಧೆಗಳ ಫಲಿತಾಂಶ

ಬಾಲಕರ ವಿಭಾಗ: 100 ಮೀ. ಓಟ: ಆಗಸ್ಟಿನ್ ಯೇಸುದಾಸ್ (ತಮಿಳುನಾಡು)-1, ಜೆರಿಸ್ ಜೋಸ್ (ಕೇರಳ)-2, ಹುಸನ್ ದೀಪ್ಸಿಂಗ್ (ಪಂಜಾಬ್)-3, ಕಾಲ: 10.79 ಸೆ. (ಕೂಟ ದಾಖಲೆ); 400 ಮೀ. ಹರ್ಡಲ್ಸ್: ಸತೀಶ್ ಪಿ. (ಮಹಾರಾಷ್ಟ್ರ)-1, ಅರ್ಜುನ್ ಗಂಗಾಧರ್ (ಕೇರಳ)-2, ಬಿ. ಕಾಂತರಾವ್ (ಆಂಧ್ರ ಪ್ರದೇಶ)-3, ಕಾಲ: 53.01 ಸೆ.; 1500 ಮೀ. ಓಟ: ಪಿ. ಮುಹಮ್ಮದ್ ಅಫ್ಸಲ್ (ಕೇರಳ)-1, ಪ್ರೇಮ್ ಕುಂಜ್ (ಮಹಾರಾಷ್ಟ್ರ)-2, ಸತೀಶ್ (ಹರಿಯಾಣ)-3, ಕಾಲ: 3:59.88 ಸೆ.; 1000 ಮೀ. ಮೆಡ್ಲೆ ರಿಲೇ: ಹರಿಯಾಣ-1, ಪಂಜಾಬ್-2, ಆಂಧ್ರ ಪ್ರದೇಶ-3, ಕಾಲ: 1:57.80 ಸೆ. ; ಲಾಂಗ್ಜಂಪ್: ವೀರೇಂದರ್ (ದೆಹಲಿ)-1, ಅನ್ಬುರಾಜಾ (ತಮಿಳುನಾಡು)-2, ಸೂರಜ್ ಎಂ. (ಕರ್ನಾಟಕ)-3, ದೂರ: 7.22 ಮೀ. ; ಶಾಟ್ಪಟ್: ಮೋನು (ಹರಿಯಾಣ)-1, ಪ್ರಿನ್ಸ್ ಉಪಾಧ್ಯಾಯ್ (ಉತ್ತರ ಪ್ರದೇಶ)-2, ಸಾಯಿರಾಜ್ (ಕರ್ನಾಟಕ)-3, ದೂರ: 16.80 ಮೀ.

ಬಾಲಕಿಯರ ವಿಭಾಗ: 100 ಮೀ. ಓಟ: ದ್ಯುತೀ ಚಂದ್ (ಒಡಿಶಾ)-1, ಹಿಮಾಶ್ರೀ ರಾಯ್ (ಪಶ್ಚಿಮ ಬಂಗಾಳ)-2, ರುಮಾ ಸರ್ಕಾರ್ (ಪಶ್ಚಿಮ ಬಂಗಾಳ)-3, ಕಾಲ: 11.85 ಸೆ. (ರಾಷ್ಟ್ರೀಯ ದಾಖಲೆ); 400 ಮೀ. ಹರ್ಡಲ್ಸ್: ಪಿ. ಮೆರ್ಲಿನ್ (ಕೇರಳ)-1, ವಿ.ವಿ. ಜಿಶಾ (ಕೇರಳ)-2, ಆರ್. ರಜಿ (ಕೇರಳ)-3, ಕಾಲ: 1:04.78 ಸೆ.; 1500 ಮೀ. ಓಟ: ಪರುಲ್ ಚೌಧರಿ (ಉತ್ತರ ಪ್ರದೇಶ)-1, ಕೋಮಲ್ ಚೌಧರಿ (ಹರಿಯಾಣ)-2, ಪಿ.ಡಿ. ವಿಪಿತಾ (ಕೇರಳ)-3, ಕಾಲ: 4:48.36 ಸೆ.; 1000 ಮೀ. ಮೆಡ್ಲೆ ರಿಲೇ: ಪಶ್ಚಿಮ ಬಂಗಾಳ-1, ಕೇರಳ-2, ತಮಿಳುನಾಡು-3, ಕಾಲ: 2:18.88 ಸೆ.; ಲಾಂಗ್ಜಂಪ್: ನಯನಾ ಜೇಮ್ಸ (ಕೇರಳ)-1, ಜೆನಿಮೋಳ್ ಜಾಯ್ (ಕೇರಳ)-2, ಪ್ರಣೀತಾ ಪ್ರದೀಪ್ (ಕರ್ನಾಟಕ)-3, ದೂರ: 5.94 ಮೀ. (ಕೂಟ ದಾಖಲೆ); ಶಾಟ್ಪಟ್: ರಾಖಿ (ಹರಿಯಾಣ)-1, ಸುಭಾಷಿಣಿ (ತಮಿಳುನಾಡು)-2, ರಂಜನಾ ನಾರಾಯಣ ಬದ್ರಿ (ಕರ್ನಾಟಕ)-3, ದೂರ: 13.77 ಮೀ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.