ಬೆಂಗಳೂರು: ಉದ್ಯಾನನಗರಿಯ ಅದಿತಿ ಅಶೋಕ್ ಇಲ್ಲಿ ನಡೆಯುತ್ತಿರುವ ಟೊಯೊಟಾ-ಐಜಿಯು ದಕ್ಷಿಣ ಭಾರತ ಜೂನಿಯರ್ ಗಾಲ್ಫ್ ಚಾಂಪಿಯನ್ಷಿಪ್ನ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಡಬಲ್ ಶ್ರೇಯಕ್ಕೆ ಪಾತ್ರರಾದರು.

ಕರ್ನಾಟಕ ಗಾಲ್ಫ್ ಸಂಸ್ಥೆ (ಕೆಜಿಎ) ಕೋರ್ಸ್ನಲ್ಲಿ ಗುರುವಾರ `ಎ-ಬಿ~ ಮತ್ತು `ಬಿ~ ವಿಭಾಗದಲ್ಲಿ ಅದಿತಿ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡರು. `ಸಿ~ ವಿಭಾಗದಲ್ಲಿ ಸುಚಿತ್ರಾ ರಮೇಶ್ ಅಗ್ರಸ್ಥಾನದೊಂದಿಗೆ ಟ್ರೋಫಿಯನ್ನು ಎತ್ತಿ ಹಿಡಿದರು.

ಬಾಲಕಿಯರ ಎ-ಬಿ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಸಾಗಿದ ಅದಿತಿ ಮೂರನೇ ದಿನವೂ ನಿಖರವಾಗಿ ಕ್ಲಬ್ ಬೀಸಿದರು. ಆದ್ದರಿಂದ ಅವರು (75+80+81=236) ಬಾಕಿ ಸ್ಪರ್ಧಿಗಳನ್ನು ಉತ್ತಮ ಅಂತರದಿಂದ ಹಿಂದೆ ಹಾಕಲು ಸಾಧ್ಯವಾಯಿತು. ಮಿಲಿ ಸರೋಹಾ (83+78+82=243) ರನ್ನರ್ ಅಪ್ ಆದರು. ತ್ವೇಶಾ ಮಲಿಕ್ (77+86+83=246) ಹಾಗೂ ನಿಕಿತಾ ಅರ್ಜುನ್ (84+84+83=251) ನಂತರದ ಸ್ಥಾನ ಪಡೆದರು.

ಬಾಲಕಿಯರ ಸಿ ವಿಭಾಗದಲ್ಲಿ ಸುಚಿತ್ರಾ ರಮೇಶ್ (93+85+93=271) ಅವರು ಭಾರಿ ಅಂತರದಲ್ಲಿ ಶ್ರುತಿ ಶೆಣೈ (97+92+91=280) ಅವರನ್ನು ಹಿಂದಿಕ್ಕಿದರು. ರಿಯಾ ಅಹುಜಾ (97+101+88= 286) ಗುರುವಾರ ಉತ್ತಮ ಪ್ರದರ್ಶನ ನೀಡಿದರೂ ಪ್ರಯೋಜನವಾಗಲಿಲ್ಲ. ಅವರು ಮೂರನೇ ಸ್ಥಾನಕ್ಕೆ ಸಮಾಧಾನ ಪಡಬೇಕಾಯಿತು. ಅರುಶಿ ಪಾಂಡೆ ನಿಖರತೆ ಸಾಧಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನು ಪಡೆಯುವ ಕನಸು ಕೂಡ ಕರಗಿತು.

ಬಾಲಕರ ಎ-ಬಿ ವಿಭಾಗದಲ್ಲಿ ಎಸ್.ಚಿಕ್ಕರಂಗಪ್ಪ ಒಂದು ಹಂತದಲ್ಲಿ ಸ್ವಲ್ಪ ಕಷ್ಟ ಎದುರಿಸಿದರೂ, ಮೂರನೇ ದಿನವೂ ತಮ್ಮ ಪ್ರಾಬಲ್ಯ ಕಾಯ್ದು ಕೊಂಡರು. ಕೆಲವು ಪ್ರಯತ್ನದಲ್ಲಿ ಗುರಿ ತಪ್ಪಿದರೂ ಚಿಕ್ಕರಂಗಪ್ಪ (69+67+77=213) ಅವರು ಮುನ್ನಡೆ ಉಳಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.